• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾರ್ಯಕರ್ತರೊಂದಿಗೆ ಶಾಸಕ ಪ್ರಭು ಚವ್ಹಾಣ, ಶರಣು ಸಲಗರ್ ಶಿರಡಿ ಸಾಯಿಬಾಬಾ ದರ್ಶನ

ಪ್ರತಿಧ್ವನಿ by ಪ್ರತಿಧ್ವನಿ
August 11, 2024
in Top Story, ಇತರೆ / Others
0
ಕಾರ್ಯಕರ್ತರೊಂದಿಗೆ ಶಾಸಕ ಪ್ರಭು ಚವ್ಹಾಣ, ಶರಣು ಸಲಗರ್ ಶಿರಡಿ ಸಾಯಿಬಾಬಾ ದರ್ಶನ
Share on WhatsAppShare on FacebookShare on Telegram

ಬೀದರ್:ಶ್ರಾವಣ ಮಾಸದ ಪ್ರಯುಕ್ತ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರು ಆದ ಪ್ರಭು ಚವ್ಹಾಣ ಅವರು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಏರ್ಪಡಿಸಿದ್ದ ಸಾಯಿಬಾಬಾ ದರ್ಶನ ಮತ್ತು ದಾಸೋಹದಲ್ಲಿ ಬೀದರ ಜಿಲ್ಲೆಯ ಭಾಜಪ ಕಾರ್ಯಕರ್ತರು ಹಾಗೂ ಗಣ್ಯರು ಭಾಗವಹಿಸಿದ್ದರು. ಬಸವಕಲ್ಯಾಣ ಶಾಸಕ ಶರಣು ಸಲಗರ ತಮ್ಮ ತಾಲೂಕಿನ ಭಾಜಪ ಮುಖಂಡರೊಂದಿಗೆ ಭಾಗವಹಿಸಿದ್ದರು.

ADVERTISEMENT

ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ 1200 ಕಾರ್ಯಕರ್ತರು ಕುಟುಂಬ ಸಮೇತ ಆಗಸ್ಟ್‌ 11 ರಂದು ಶಿರಡಿ ಸಾಯಿ ಬಾಬಾ ದರ್ಶನ ಪಡೆದರು.ಈ ವೇಳೆ ಮಾತನಾಡಿದ ಶಾಸಕ ಶರಣು ಸಲಗರ ಅವರು ಜಿಲ್ಲೆಯಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರ ಜೀವನ ಸುಖಮಯವಾಗಲಿ, ನಾಡು ಸಮೃದ್ಧಿಯಾಗಲಿ ಎಂದು ಬೇಡಿಕೊಂಡರು.ಶಾಸಕ ಪ್ರಭು ಬಿ.ಚವ್ಹಾಣ ಅವರು ಮಾತನಾಡಿ, ಶ್ರಾವಣ ಮಾಸದ ಪ್ರಯುಕ್ತ ಸಾಯಿ ಮಂದಿರದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಹಲವು ವರ್ಷಗಳ ನಂತರ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು, ಇಂತಹ ವಿಶೇಷ ಪೂಜೆಯಲ್ಲಿ ಭಾಗವಹಿಸುವ ಸೌಭಾಗ್ಯ ಕ್ಷೇತ್ರದ ಜನರಿಗೆ ಸಿಗಬೇಕಂಬ ಉದ್ದೇಶದಿಂದ ಕಾರ್ಯಕರ್ತರ ಜೊತೆಗೆ ದೇವರ ದರ್ಶನ ಪಡೆಯಲಾಗುತ್ತಿದೆ ಎಂದರು.ಸಂತ ಸಾಯಿಬಾಬಾ ಪವಾಡ ಪುರುಷರು, ಸಾಧಾರಣ ಫಕೀರನಾಗಿ ಜೀವನ ಸಾಗಿಸಿದ್ದರೂ ಅವರ ಪವಾಡ ಕಾರ್ಯಗಳು ಸಾಕಷ್ಟಿವೆ. ಬಾಬಾರ ಮಹಿಮೆ ದೇಶವಲ್ಲದೇ ಹೊರಜಗತ್ತಿಗೂ ಪರಿಚಿತವಾಗಿದೆ. ಆಷ್ಟ್ರೇಲಿಯಾ, ಜಪಾನ್, ಅಮೇರಿಕಾ ಸೇರಿದಂತೆ ಅನೇಕ ದೇಶಗಳ ಭಕ್ತರು ಶಿರಡಿಗೆ ಆಗಮಿಸಿ ಸಾಯಿಬಾಬಾ ಎದುರು ತಲೆಬಾಗಿ ನಮಿಸುತ್ತಾರೆ. ಕಷ್ಟವೆಂದು ಬರುವ ಭಕ್ತರ ಸಮಸ್ಯೆಗಳು ದೂರವಾಗುತ್ತವೆ.

ಶ್ರದ್ಧೆಯಿಂದ ಬೇಡಿಕೊಂಡ ಇಷ್ಟಾರ್ಥಗಳು ಇಲ್ಲಿ ನೆರವೇರುತ್ತವೆ ಎಂದು ಸಾಯಿ ಬಾಬಾರ ಪವಾಡಗಳ ಬಗ್ಗೆ ಕೊಂಡಾಡಿದರು. ಹಿಂದೆ‌‌ ಕೇವಲ‌‌ ಔರಾದ(ಬಿ) ಕ್ಷೇತ್ರದ ಕಾರ್ಯಕರ್ತರಿಗೆ‌ ಶಿರಡಿ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಆಗಮಿಸಿ ಸಾಯಿಬಾಬಾರ ದರ್ಶನ ಪಡೆದಿದ್ದಾರೆ. ಎಲ್ಲರ ಬೇಡಿಕೆಗಳನ್ನು ಸಾಯಿಬಾಬಾ ಈಡೇರಿಸಲಿ ಎಂದು ಬೇಡಿಕೊಂಡರು. ಇದೇ ವೇಳೆ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ದರ್ಶನ ಪಡೆಯಲಾಯಿತು. ಇದಕ್ಕೂ ಮುನ್ನ ದಿನ ಮಹಾರಾಷ್ಟ್ರದ ಪುಣ್ಯಸ್ಥಳ ಶನಿ ಸಿಂಗನಾಪೂರದ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗುಂಡಪ್ಪ ಬಿರಾದಾರ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಬಿಜೆಪಿ ಜಿಲ್ಲಾ ಪ್ರಮುಖರಾದ ಈಶ್ಚರಸಿಂಗ್ ಠಾಕೂರ್, ಮುಖಂಡರಾದ ಬಸವರಾಜ ಆರ್ಯ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಉಮೇಶ್ ನಾಯಕ್, ಬಾಲಾಜಿ ನಾಯಕ್, ಕಿರಣ ಪಾಟೀಲ, ಅರಹಂತ ಸಾವಳೆ, ಶಿವರಾಜ ಅಲ್ಮಾಜೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಪ್ರದೀಪ ಪವಾರ, ಸಿದ್ದು ಬಿರಾದಾರ, ರಾಜೇಂದ್ರ ಮಾಳಿ, ದಿನೇಶ ರಕ್ಷ್ಯಾಳೆ, ಅಶೋಕ ಅಲ್ಮಾಜೆ, ಔರಾದ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಬಸವಕಲ್ಯಾಣ ಮಂಡಲ ಅಧ್ಯಕ್ಷ ಜ್ಞಾನೇಶ್ವರ ಮೂಳೆ, ಜಿಲ್ಲಾ ಸಹ ವಕ್ತಾರ ಗುರುನಾಥ ರಾಜಗೀರಾ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ವೈಜ್ಞಾನಿಕ ಪರಿಷತ್ತಿನ ರಾಜ್ಯ ಸಂಚಾಲಕ ದಾನಿ ಬಾಬುರಾವ, ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags: BJPMLA Prabhu ChavanMLA Sharanu SalagarShirdi Sai Baba
Previous Post

ಬೀದರ್ ಪೊಲೀಸರ ಕಾರ್ಯಾಚರಣೆ: 12 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ, ಐವರ ಬಂಧನ

Next Post

ವಿವಾದಕ್ಕೆ ಕಾರಣವಾದ ಸಿಎಂ ಸಿದ್ದು ನಡೆ ! ಚಾಮುಂಡಿ ಬೆಟ್ಟದ ವಿಚಾರದಲ್ಲಿ ಸರ್ಕಾರಕ್ಕೆ ಮುಖಭಂಗ ! ಅಧಿನಿಯಮಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್ ! 

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post
ವಿವಾದಕ್ಕೆ ಕಾರಣವಾದ ಸಿಎಂ ಸಿದ್ದು ನಡೆ ! ಚಾಮುಂಡಿ ಬೆಟ್ಟದ ವಿಚಾರದಲ್ಲಿ ಸರ್ಕಾರಕ್ಕೆ ಮುಖಭಂಗ ! ಅಧಿನಿಯಮಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್ ! 

ವಿವಾದಕ್ಕೆ ಕಾರಣವಾದ ಸಿಎಂ ಸಿದ್ದು ನಡೆ ! ಚಾಮುಂಡಿ ಬೆಟ್ಟದ ವಿಚಾರದಲ್ಲಿ ಸರ್ಕಾರಕ್ಕೆ ಮುಖಭಂಗ ! ಅಧಿನಿಯಮಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!