ಈಗಾಗಲೇ ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರೋ (Prappana agraha) ನಟ ದರ್ಶನ್ ಗೆ (Actor darshan) ಸಂಬಮಧಪಟ್ಟ ಮತ್ತೊಂದು ಪ್ರಕರಣದ ವರದಿ ಡಿಸಿಪಿ ಗಿರೀಶ್ (Dep Girish) ಕೈ ಸೇರಿದೆ.ನಿರ್ಮಾಪಕ ಭರತ್‌ಗೆ ಬೆದರಿಕೆ ಹಾಕಿದ್ದ ಪ್ರಕರಣದ ವರದಿಯನ್ನ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ಗೆ ಕೆಂಗೇರಿ ಠಾಣೆ ಇನ್ಸ್ ಪೆಕ್ಟರ್ ನೀಡಿದ್ದಾರೆ.
ಸಿನಿಮಾ ನಿರ್ಮಾಣವೊಂದಕ್ಕೆ ಸಂಬಂಧಪಟ್ಟಂತೆ 2022ರಲ್ಲಿ ನಿರ್ಮಾಪಕ ಭರತ್‌ಗೆ (Producer Bharath) ಕೊಲೆ ಬೆದರಿಕೆ ಹಾಕಿದ್ದ ಸಂಬಂಧ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.ಪೊಲೀಸರು ಎನ್ .ಸಿ.ಆರ್ ಹಾಕಿ, ವಿಚಾರಣೆ ನಡೆಸಿ ಕೇಸ್ ಕ್ಲೋಸ್ ಮಾಡಿದ್ರು.ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ದರ್ಶನ್ ಜೈಲು ಸೇರಿದ ಮೇಲೆ ಮತ್ತೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿತ್ತು.
ಈ ಬಗ್ಗೆ ನಿರ್ಮಾಪಕ ಭರತ್ ಕಳೆದ ಜುಲೈ 26ರಂದು ಮತ್ತೆ ಪೊಲೀಸರಿಗೆ ದೂರು ನೀಡಿದ್ರು. ಆ ಬಳಿಕ ಮತ್ತೆ ಆರೋಪಿಗಳ ವಿಚಾರಣೆ ನಡೆಸಿ ಡಿಸಿಪಿಗೆ ವರದಿ ಸಲ್ಲಿಕೆ ಮಾಡಲಾಗಿದೆ.