ಕನ್ನಡ ಸಿನಿಮಾ ರಂಗದ (kannada film industry) ಒಳಿತಿಗಾಗಿ ಇಂದು ಹೋಮ-ಹವನ ನೆರವೇರಿಸಲಾಗಿದೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ (rockline venkatesh) ಮತ್ತು ದೊಡ್ಡಣ್ಣ ನೇತೃತ್ವದಲ್ಲಿ ಕಲಾವಿದರ ಸಂಘದಲ್ಲಿ ಸುಮಾರು ಏಳೆಂಟು ಮಂದಿ ಪುರೋಹಿತರ ಸಮ್ಮುಖದಲ್ಲಿ ಗಣಪತಿ ಹೋಮ, ಸರ್ಪಶಾಂತಿ, ಮೃತ್ಯುಂಜಯ ಹೋಮ ಮಾಡಲಾಗಿದೆ.
ಈ ವಿಶೇಷ ಪೂಜೆಗೆ ಚಿತ್ರರಂಗದ ಹಲವಾರು ಕಲಾವಿದರು ಭಾಗಿಯಾಗಿದ್ದಾರೆ. ಇನ್ನು ಕಲಾವಿದರ ಸಂಘದಲ್ಲಿ ನಡೆಯುತ್ತಿರೋ ಹೋಮ ದರ್ಶನ್ರನ್ನ (Actor Darshan) ರಕ್ಷಿಸಲು ಮಾಡಲಾಗಿದೆ ಎಂಬ ಒಂದಷ್ಟು ಚರ್ಚೆಗಳು ಆರಂಭವಾಗಿದೆ. ಜೈಲಿನಲ್ಲಿರುವ ದರ್ಶನ್ ಆದಷ್ಟು ಬೇಗ ರಿಲೀಸ್ ಆಗುವಂತಾಗ್ಲಿ ಎಂದು ಈ ಹೋಮ ನಡೆಸಲಾಗಿದೆ ಎಂದು ಹೇಳಲಾಗಿದೆ.
ಹೀಗಾಗಿ ಇವತ್ತಿನ ಈ ಪೂಜೆಯ ಬಗ್ಗೆ ದರ್ಶನ್ ವಿಚಾರ ಲಿಂಕ್ ಮಾಡಿರುವುದರ ಬಗ್ಗೆ ಮಾತನಾಡಿದ ಹಿರಿಯ ಕಲಾವಿದ್ರು, ದರ್ಶನ್ ಉಳಿಸಲು ಹೋಮ ಮಾಡಿದ್ರೆ ತಪ್ಪೇನು ಇಲ್ಲ. ಸಂಕಷ್ಟದಲ್ಲಿ ಸಿಲುಕಿದಾಗ ಜೊತೆಯಲ್ಲಿ ಇರಬೇಕು.ಈಗ ದರ್ಶನ್ ಮೇಲೆ ಆರೋಪ ಬಂದಿದೆ ಅಂತ ಆತನನ್ನ ದೂರ ತಳ್ಳೋದು ತಪ್ಪು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.