ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಜೈಲಿನಲ್ಲಿರುವ ನಟದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಚಾರ್ಜ್ಶೀಟ್ (Charge sheet) ಸಲ್ಲಿಸಿದ ಬಳಿಕ ಜಾಮೀನು ಅರ್ಜಿ ಸಲ್ಲಿಸುವ ಪ್ಲಾನ್ ಮಾಡಿದ್ದ ದರ್ಶನ್ಗೆ ಈಗ ವಿಚಾರ ಮುಳುವಾಗಲಿದೆ.
ಆರೋಪಿ ಪ್ರಭಾವಿಯಾಗಿದ್ದು, ಜೈಲು ಅಧಿಕಾರಿಗಳ ಮೇಲೆಯೆ ತನ್ನ ಪ್ರಭಾವ ಬೀರಿರುವ ದರ್ಶನ್ (Darshan), ಜಾಮೀನಿನ ಮೇಲೆ ಹೊರಬಂದ್ರೆ ಈ ಪ್ರಕರಣದ ಸಾಕ್ಷ್ಯಗಳ ಮೇಲೂ ಪ್ರಭಾವ ಬೀರಬಹುದು ಅನ್ನೋ ವಿಚಾರವನ್ನ ನ್ಯಾಯಾಧೀಶರ ಗಮನಕ್ಕೆ ತರುವ ಸಾಧ್ಯತೆ ಇದೆ.
ಹೀಗಾಗಿ ಈ ಪೋಟೋ ಲೀಕ್ ಆಗಿರುವ ವಿಚಾರ ಜಾಮೀನು ಅರ್ಜಿ ವಿಚಾರಣೆ ವೇಳೆ ಬಹು ದೊಡ್ಡ ಅಸ್ತ್ರವಾಗಲಿದೆ.ಜೊತಗೆ ದರ್ಶನ್ ಮೇಲೆ ಮತ್ತೆ 2 ಎಫ್ ಐ ಆರ್ ದಾಖಲು ಮಾಡಲಾಗಿದ್ದು, ಚಾರ್ಜ್ ಶೀಟ್ ಬಳಿಕ ಜಾಮೀನು ಅರ್ಜಿ ಸಲ್ಲಿಸುವ ದರ್ಶನ್ ಆಸೆಗೆ ದೊಡ್ಡ ಕೊಡಲಿಪೆಟ್ಟು ಬಿಳೋ ಸಾಧ್ಯತೆಗಳಿವೆ.






