ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy murdercase) ಸಂಬಂಧಪಟ್ಟಂತೆ ದರ್ಶನ್ ಅಂಡ್ ಗ್ಯಾಂಗ್ (darshan and gang) ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (charge sgeet) ಸಲ್ಲಿಸಿದ್ದಾರೆ. ತನಿಖಾ ತಂಡ 24 ನೇ ಎಸಿಎಂಎಂ ನ್ಯಾಯಾಲಯಕ್ಕೆ (24th ACMM COURT) ಒಟ್ಟು 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಯ್ತು. ಎಸಿಪಿ ಚಂದನ್ರಿಂದ ಕೋರ್ಟ್ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
3991 ಪುಟಗಳ ಚಾರ್ಜ್ ಶೀಟ್ನಲ್ಲಿ 200ಕ್ಕೂ ಹೆಚ್ಚು 164 ಹೇಳಿಕೆ ದಾಖಲಾಗಿದೆ ಅನ್ನೋ ಮಾಹಿತಿ ತಿಳಿದುಬಂದಿದೆ. ಜೊತೆಗೆ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ರಿಪೋರ್ಟ್ ಸೇರಿದಂತೆ, FSL ವರದಿಗಳು ಮತ್ತು ಸಾವಿರಕ್ಕೂ ಅಧಿಕ ಪುಟಗಳ COR, ಕೃತ್ಯಕ್ಕೆ ಬಳಸಿದ್ದ ವಾಹನಗಳ ದಾಖಲೆ, ಆರೋಪಿಗಳ DNA ಪರೀಕ್ಷೆ ವರದಿಯನ್ನು ಕೂಡ ಉಲ್ಲೇಖಿಸಲಾಗಿದೆ ಅಂತ ಹೇಳಲಾಗಿದೆ.
ನ್ಯಾಯಾಧೀಶರಾದ ಮಾರುತೇಶ್ ಪರಶುರಾಮ್ ಮೋಹಿತೆಯವರಿಗೆ ತನಿಖಾ ತಂಡ ಚಾರ್ಜ್ ಶೀಟ್ ಸಲ್ಲಿಸಿದೆ. ಶಿರಸ್ತೇದಾರ್ ರಜೆ ಕಾರಣ ಇಂದು ಪರಿಶೀಲನೆ ನಡೆಸಲು ಸಾಧ್ಯವಿಲ್ಲ. ಶಿರಸ್ತೇದಾರ್ ಪರಿಶೀಲನೆ ಬಳಿಕ ಪೊಲೀಸ್ರು ಸಿಸಿ ಮಾಡಲಿದ್ದಾರೆ.