ಸಿಎಂ ಸಿದ್ದರಾಮಯ್ಯ (Cm siddaramiah) ವಿರುದ್ದದ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ, ಸಿಎಂ ಸಿದ್ದರಾಮಯ್ಯ ವಿರುದ್ದ ಸ್ನೇಹಮಹಿ ಕೃಷ್ಣ ಮತ್ತೊಂದು ದೂರು ನೀಡಿದ್ದಾರೆ.
ಈ ಪ್ರಕರಣದಲ್ಲಿ ಮತ್ತೊಂದು ಕಾನೂನುಬಾಹಿರ ಕೃತ್ಯ ನಡೆದಿದೆ ಎಂದು ಆರೋಪಿಸಿರುವ ಅವರು ಈ ದೂರು ನೀಡಿದ್ದಾರೆ. ಆ ಪ್ರಕಾರವಾಗಿ ರಾಜ್ಯಪಾಲರು & ರಾಜ್ಯ ಸರ್ಕಾರದ ಪರವಾಗಿ ಸಿದ್ದರಾಮಯ್ಯ ಪತ್ನಿಯಿಂದ ಪರಿತ್ಯಾಜನಾ ಪತ್ರ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ. ಪರಿತ್ಯಾಜನ ಅಂದ್ರೆ ಜಮೀನಿನ ಮೇಲಿನ ಹಕ್ಕನ್ನು ಬಿಟ್ಟುಕೊಡುವುದು.

ಇಲ್ಲಿ ಸರ್ಕಾರದ ಆದೇಶಕ್ಕೆ ವಿರುದ್ದವಾಗಿ ರಾಜ್ಯಪಾಲರ ಹೆಸರಲ್ಲಿ ಪರಿತ್ಯಾಜನಾ ಪತ್ರ ಪಡೆಯಲಾಗಿದೆ. ಏಕೆಂದರೆ 2020ರಲ್ಲಿ ಪರಿತ್ಯಾಜನಾ ಪತ್ರದ ಮೂಲಕ ಜಮೀನು ಬಿಟ್ಟುಕೊಡುವುದನ್ನು ಪರಿಗಣಿಸಬಾರದು ಎಂಬ ಆದೇಶವಿತ್ತು.ಆದ್ರೂ ಸಿದ್ದರಾಮಯ್ಯ ಹಿಂದನ ಅಪ್ತ ಸಹಾಯಕನಿಂದ ಈ ಕೃತ್ಯ ನಡೆದಿದೆ.

ಅಧಿಕಾರಿ ಕೆ ಸಿ ಉಮೇಶ್ ನಿಂದ 25/11/2021 ಪರಿತ್ಯಾಜನಾ ಮಾಡಿಸಲಾಗಿದೆ. ಸಿಎಂ ಪತ್ನಿ ಪಾರ್ವತಿಯವರಿಂದ ಪರಿತ್ಯಾಜನಾ ಪತ್ರ ಪಡೆಯಲಾಗಿದೆ. ಹೀಗಾಗಿ ಈ ಕ್ರಮ ಕಾನೂನು ಬಾಹಿರವಾಗಿದ್ದು, ಉಮೇಶ್ & ಸಂಬಂಧಿಸಿದ ಅಧಿಕಾರಿಗಳನ್ನ ವಜಾಗೊಳಿಸಬೇಕು ಎಂದು ದೂರಿದ್ದಾರೆ.
ಆರೋಪಿಗಳ ವಿರುದ್ದ ಐಪಿಸಿ 223 ಅಡಿ ಕ್ರಮಕ್ಕೆ ಮನವಿ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದು, ಅಲ್ಲದೇ ಮುಡಾಗೆ ನಿಮ್ಮ ಹೆಸರಲ್ಲಿ ನೀಡಿದ ಪರಿತ್ಯಾಜನಾ ಪತ್ರಗಳ ರದ್ದು ಮಾಡಲು ಆದೇಶಿಸಬೇಕು ಎಂದು ಕೋರಿದ್ದಾರೆ.






