78ನೇ ಸ್ವಾತಂತ್ರ್ಯ ದಿನಾಚರಣೆಯ (78th independence day) ಹಿನ್ನಲೆ ಚನ್ನಪಟ್ಟಣದಲ್ಲಿ (channapattana) ಧ್ವಜಾರೋಹಣ ನೆರವೇರಿಸಿರುವ ಡಿಸಿಎಂ ಡಿಕೆ ಶಿವಕುಮಾರ್ (Dem dk shivakumar) ಅಚ್ಚರಿಕ ಹೇಳಿಕೆ ಕೊಟ್ಟಿದ್ದಾರೆ. ಸಿಪಿ ಯೋಗೇಶ್ವರ್ (Cp yogeshwar) ಕಾಂಗ್ರೆಸ್ ಸೇರ್ಪಡೆಯಾಗ್ತಾರಾ ಎಂಬ ಗೊಂದಲದ ನಡುವೆ, ಈಗ ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ನಿಂದ ನಾನೇ ಅಭ್ಯರ್ಥಿ ಎಂಬ ಹೇಳಿಕೆ ಕೊಟ್ಟಿದ್ದಾರೆ.

ಚನ್ನಪಟ್ಟಣದ ನೆಲಮಂಗಲದ ಪುರಾತನ ಶ್ರೀ ರುದ್ರೇಶ್ವರ ಹಾಗೂ ವೀರಭದ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಈ ಬಗ್ಗೆ ಮಾತನಾಡಿದ ಅವರು,ಚನ್ನಪಟ್ಟಣ ಉಪ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
ಸದ್ಯ ಡಿಕಶಿ ಹೇಳಿಕೆ ಚನ್ನಪಟ್ಟಣದ ರಣಕಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಕಾಂಗ್ರೆಸ್ ನಾಯಕರು, ಚನ್ನಪಟ್ಟಣದಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದರು. ಇದೀಗ ಆ ಅಚ್ಚರಿಯ ಅಭ್ಯರ್ಥಿ ಡಿಸಿಎಂ ಡಿಕೆ ಶಿಕುಮಾರ್ ಅವರೇನಾ ಎಂಬ ಕುತೂಹಲ ಮನೆಮಾಡಿದೆ.





