ಚನ್ನಪಟ್ಟಣ ಬೈ ಎಲೆಕ್ಷನ್ (Chennapattana bi election)ಬಗ್ಗೆ ಮೈತ್ರಿ ಪ್ರಬಲ ಆಕಾಂಕ್ಷಿಯಾಗಿರುವ ಸಿಪಿ ಯೋಗೇಶ್ವರ್ (Cp yogeshwar) ಶಾಕಿಂಗ್ ಹೇಳಿಕೆಯನ್ನ ಕೊಟ್ಟಿದ್ದಾರೆ. ನಾನು ಸ್ಪರ್ಧಿಯಾಗಲು ಕುಮಾರಸ್ವಾಮಿಯವರು ಒಪ್ಪಬೇಕು, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ (BJP-jds) ಮೈತ್ರಿ ಆಗಿದ್ದೆ ನನ್ನಿಂದ ಎಂಬ ಹೇಳಿಕೆ ಕೊಟ್ಟಿದ್ದಾರೆ.
ಸದ್ಯ ಕುಮಾರಸ್ವಾಮಿಯವರ (Kumaraswamy) ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಸನಿಹವಾಗಿದ್ದು, ಬಿಜೆಪಿಯಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಎಚ್ ಡಿ ಕುಮಾರಸ್ವಾಮಿ ಒಪ್ಪುತ್ತಾರಾ ಅಥವಾ ನಿಖಿಲ್ ಕುಮಾರಸ್ವಾಮಿಯನ್ನು (Nikhil kumaraswamy) ಕಣಕ್ಕಿಳಿಸುವ ಯೋಚನೆಯಲ್ಲಿದ್ದಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮೂಡ ಹಗರಣ (Muda scam) ವಿರೋಧಿಸಿ ಬೆಂಗಳೂರಿಂದ ಮೈಸೂರಿನವರೆಗೆ ಮೈತ್ರಿ ನಾಯಕರು ನಡೆಸಿದ ಪಾದಯಾತ್ರೆಯಲ್ಲಿ ಕೂಡ ಸಿಪಿ ಯೋಗೇಶ್ವರ್ ಭಾಗಿಯಾಗದೆ ಅಂತರ ಕಾಯ್ದುಕೊಂಡಿದ್ದರು.ಇದೀಗ ತಾನು ಚನ್ನಪಟ್ಟಣ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿ ಎಂದು ಹೇಳುವ ಮೂಲಕ ಸಿಪಿ ಯೋಗೇಶ್ವರ್ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.