ರಾಜ್ಯದಲ್ಲಿ ಚನ್ನಪಟ್ಟಣ (Channapattana) ಸೇರಿದಂತೆ ಮೂರು ಕ್ಷೇತ್ರಗಳ ಉಪಚುನಾವಣೆ ಬಗ್ಗೆ ಬಿಜೆಪಿ ಜೆಡಿಎಸ್ (Bjp -jds) ಮೈತ್ರಿ ನಾಯಕರು ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಸಿ.ಪಿ ಯೋಗೇಶ್ವರ್ (cp yogeshwar) ಪಟ್ಟು ಹಿಡಿದಿದ್ದು, ಮೈತ್ರಿ ನಾಯಕರಿಗೆ ತಲೆನೋವಾಗಿದೆ.
ಹೀಗಾಗಿ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆಯಿಡಲು ದೆಹಲಿ ನಾಯಕರು ತೀರ್ಮಾನಿಸಿದ್ದಾರೆ. ಕಳೆದ ರಾತ್ರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (prahlad Joshi) ಮನೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ (Hed kumaraswamy), ಆರ್.ಅಶೋಕ್ (r ashok) ಸೇರಿದಂತೆ ಮೈತ್ರಿ ನಾಯಕರು ಈ ಬಗ್ಗೆ ಸಭೆ ನಡೆಸಿದ್ದಾರೆ.
ಈ ಸಭೆಯ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಉಪಚುನಾವಣೆ ಸಮಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿಯೇ ಒಟ್ಟಿಗೆ ಹೋದ್ರೆ ಎರಡೂ ಪಕ್ಷಕ್ಕೂ ಲಾಭ ಆಗುತ್ತೆ. ಆದ್ರೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಮೈತ್ರಿ ಪಕ್ಷ ಒಟ್ಟಿಗೆ ಹೋಗಬೇಕು ಅನ್ನೋ ಬಗ್ಗೆ ಸಭೆಯಲ್ಲಿ ಚರ್ಚೆ ಆಯ್ತು ಅಂತ ತಿಳಿಸಿದ್ರು.