ಬಾಂಗ್ಲಾದೇಶದಲ್ಲಿ (Bangladesh) ನಡೆಯುತ್ತಿರುವ ಹಿಂಸಾಚಾರದಲ್ಲಿ ಹಿಂದೂಗಳನ್ನೇ (Hindu) ಟಾರ್ಗೆಟ್ ಮಾಡಲಾಗಿದೆ. ಈಗಾಗಲೇ ಭೀಕರ ಘಟನೆಯೊಂದರಲ್ಲಿ ಹಿಂದೂ ಕೌನ್ಸಿಲರ್ ಒಬ್ಬರನ್ನ ಕಿಡಿಗೇಡಿಗಲಳು ಜೀವಂತವಾಗಿ ಸುಟ್ಟು ಹಾಕಿದ್ದಾರೆ.
ರಂಗಪುರದ ಹಿಂದೂ ಕೌನ್ಸಿಲರ್ ಕಾಜಲ್ ರಾಯ್ (counciler kajol rao) ಎಂಬುವವರನ್ನ ಉದ್ರಿಕ್ತರು ಸಜೀವ ದಹನ ಮಾಡಿದ್ದು, ಹಿಂದೂಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರತಿಭಟನೆ ನೆಪದಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕಿಡಿಗೇಡಿಗಳು ಅಟ್ಯಾಕ್ ಮಾಡಿದ್ದಾರೆ.
ಈಗಾಗಲೇ ನಾಲ್ಕು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದ್ದು, ಇಸ್ಕಾನ್ ಟೆಂಪಲ್ (ISCON temple) ಹಾಗೂ ಕಾಳಿ ದೇವಾಲಯಗಳ (kall temple) ಮೇಲೆ ದಾಳಿ ಮಾಡಿ ಧ್ವಂಸಗೊಳಿಸಲಾಗಿದೆ. ಹಿಂದೂಗಳ ಮನೆ ಗುರಿಯಾಗಿಸಿಕೊಂಡು ಹಿಂಸಾತ್ಮಕ ದಾಳಿ ನಡೆಸಲಾಗಿದ್ದು, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಹೀಗಾಗಿ ಬಾಂಗ್ಲಾ ಹಿಂದೂಗಳಲ್ಲಿ ತೀವ್ರ ಆತಂಕ ಹೆಚ್ಆಗಿದ್ದು, ಭಾರತದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.