
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಾರೀ ಮಳೆಯಿಂದಾಗಿ ಅನುಹಾತವಾಗಿದ್ದು, ಪ್ರವಾಹ ಸೃಷ್ಟಿಯಾಗಿದ್ದು, ಜನರು ಬೇರೆಡೆ ಸ್ಥಾಳಾಂತರಗೊಳ್ಳುತ್ತಿದ್ದಾರೆ. ಇನ್ನೂ ಕಲ್ಬುರ್ಗಿ ಜಿಲ್ಲೆಯಲ್ಲೂ ಪ್ರವಾಹ ಉಂಟಾಗಿದ್ದು ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಳೆ ಹೆಬ್ಬಾಳ ಗ್ರಾಮವು ಹವಾಮನ ವೈಪರಿತ್ಯಯಿಂದಾಗಿ ಇಡೀ ಗ್ರಾಮವೇ ಸಂಪೂರ್ಣ ಜಲಾವೃತವಾಗಿದ್ದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾರದ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತ ನಿರಂತರ ಮಳೆಯಿಂದ ಬೆಣ್ಣೆತೊರ ಜಲಾಶಯದ ನೀರು ಹರಿಬಿಟ್ಟಿದ್ದರಿಂದ ಹಳೆ ಹೆಬ್ಬಾಳ ಗ್ರಾಮಕ್ಕೆ ನೀರು ನುಗ್ಗಿದ್ದರಿಂದಾಗಿ ಗ್ರಾಮವು ಜಲಾವೃತವಾಗಿದ್ದು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವರ ಸಮಯ ಪ್ರಜ್ಞೆ ಮತ್ತು ಜಿಲ್ಲಾಡಳಿತ ಅಧಿಕಾರಗಳ ಕಾರ್ಯಕ್ಷಮತೆಯಿಂದ ಗ್ರಾಮಸ್ಥರು ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಸ್ಥಾಳಂತರಗೊಂಡಿದ್ದು ನಿವಾಸಿಗಳು ತಾತ್ಕಾಲಿಕವಾಗಿ ನಿರ್ಮಿಸಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಇನ್ನೂ ಮಳೆಯಿಂದ ಹಾನಿಗೊಳಗಾಗಿರುವ ಮನೆಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಉಸ್ತುವಾರಿ ಸಚಿವರ ಗಮನಕ್ಕೆ ತರುವುದರ ಜೊತೆಗೆ ಮನೆಗಳ ಪುನರ್ ನಿರ್ಮಾಣಕ್ಕೆ ಹಾಗೂ ಮನೆಗಳ ದುರಸ್ಥಿ ವಿಚಾರವಾಗಿ ಸಚಿವರ ಬಳಿ ಮನವಿಸಲ್ಲಿಸಿದ್ದಾರೆ.
ಸಚಿವರು ಹಾನಿಗೊಳಾಗದ ಮನೆಗಳ ಬಗ್ಗೆ ಸರ್ವೆ ನಡೆಸಿ ಅತೀ ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಗ್ರಾಮಸ್ಥರು ಸಭೆ ನಡೆಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಎಸಿ ಸಾಹಿತ್ಯ ಸೇರಿದಂತೆ ಹಲವು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಇತ್ತ ಗ್ರಾಮಸ್ಥರ ಅಗತ್ಯತೆಯನ್ನು ತಿಳಿದು ಅವುಗಳನ್ನು ಕೂಡಲೇ ಪುರೈಸುವಂತೆ ತಹಶೀಲ್ದಾರ್ ಕಾಳಗಿ ಅವರಿಗೆ ಸಚಿವರು ತಮ್ಮದೆ ಶೈಲಿಯಲ್ಲಿ ತಿಳಿ ಹೇಳಿದರು.