ಸಲಗ (Salaga) ಬಿಗ್ ಸಕ್ಸಸ್ ನಂತರ ನಟ ದುನಿಯಾ ವಿಜಯ್ (duniya vijay) ನಟಿಸಿ, ನಿರ್ದೇಶನ ಮಾಡಿರೋ ಭೀಮ (Bheema) ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಸುಮಾರು 400ಕ್ಕೂ ಅಧಿಕ ಸ್ತ್ರೀನ್‌ಗಳಲ್ಲಿ ಭೀಮಾ ಚಿತ್ರ ರಿಲೀಸ್ ಆಗಿದ್ದು, ಈಗಾಗಲೇ ಹಲವೆಡೆ ಥಿಯೇಟರ್‌ಗಳಲ್ಲಿ ಶೋಗಳು ಹೌಸ್ ಫುಲ್ ಆಗಿವೆ.
ಯಾವುದೇ ಮಿಡ್ ನೈಟ್ ಶೋ (Mid night show) ಅಥವಾ ಫ್ಯಾನ್ ಶೋ (fans show) ಯಾವುದೂ ಇಲ್ಲದೇ ಏಕಕಾಲದಲ್ಲಿ ಭೀಮ ಸಿನಿಮಾ ಎಲ್ಲೆಡೆ ಪ್ರದರ್ಶನ ನಡೆಸಲಾಗಿದೆ. ಈಗಾಗಲೇ ಸಖತ್ ಕ್ರೇಜ್ ಹುಟ್ಟಿಸಿರೋ ಭೀಮ ಸಿನಿಮಾ ಬಿಗ್ ಓಪನಿಂಗ್ ಪಡೆದುಕೊಳ್ಳುವ ಸೂಚನೆ ನಿಡಿದೆ.

ಭೀಮ ಸಿನಿಮಾ ಲಾಂಚ್ ವೇಳೆ ಅಭಿಮಾನಿಗಳು ಗಲಾಟೆ ಮಾಡಿಕೊಂಡಿರುವ ಘಟನೆ ವಿಜಯನಗರದ ಹೊಸಪೇಟೆಯಲ್ಲಿ (Vijayanagar, hosapete) ನಡೆದಿದೆ. ಸರಸ್ವತಿ ಥಿಯೇಟರ್ ನಲ್ಲಿ (Saraswathi theatre) ಭೀಮ ಮೊದಲ ಶೋ 6 ಗಂಟೆಗೆ ಆರಂಭ ಆಗಬೇಕಿತ್ತು.ಆದ್ರೆ 7 ಗಂಟೆಯಾದ್ರೂ ಆರಂಭವಾಗದೇ ಇದ್ದಿದ್ರಿಂದ ಸಿಟ್ಟಿಗೆದ್ದ ಅಭಿಮಾನಿಗಳು ಥಿಯೇಟರ್ ಸಿಬ್ಬಂಧಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ರು.. ಈ ವೇಳೆ ನೂಕಾಟ -ತಳ್ಳಾಟ, ಚೀರಾಟದ ಬಳಿಕ ಥಿಯೇಟರ್ ಸಿಬ್ಬಂದಿ ಸಿನಿಮಾ ಆರಂಭಿಸಿದ್ರು.


