ಭ್ರಷ್ಟಾಚಾರದ ಆರೋಪ ಮಾಡಿ, ಮುಡಾ ಹಗರಣದ (MUDA scam) ವಿರುದ್ಧ ಧ್ವನಿ ಎತ್ತಿ ಬಿಜೆಪಿ- ಜೆಡಿಎಸ್ (Bjp-Jds) ಕೈಗೊಂಡಿಂದ ಜಂಟಿ ಪಾದಯಾತ್ರೆ ಬೆಂಗಳೂರಿನಿಂದ ಆರಂಭವಾಗಿ ಶುಕ್ರವಾರ ಮೈಸೂರಿನಲ್ಲಿ ಕೊನೆಗೊಂಡಿದೆ.

ಸಿಎಂ ರಾಜೀನಾಮೆಗೆ ಒತ್ತಾಯಿಸಿ ಆ.3 ರಂದು ಬೆಂಗಳೂರಿನ ಕೆಂಗೇರಿಯಿಂದ ಪ್ರಾರಂಭವಾಗಿದ್ದ ಪಾದಯಾತ್ರೆ ನಿನ್ನೆ ಮೈಸೂರಿನಲ್ಲಿ (Mysore) ಮುಕ್ತಾಯಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೆಯೇಂದ್ರ (BY Vijayendra), ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ (Nikhil kumaraswamy) ನೇತೃತ್ವದಲ್ಲಿ ಪಾದಯಾತ್ರೆ ಸಮಾಪ್ತಿಯಾಗಿದೆ.
ಇನ್ನು ಇವತ್ತು ಬೆಳಗ್ಗೆ 10 ಗಂಟೆಗೆ ಮೈಸೂರಿನ ಮಹಾರಾಜ ಮೈದಾನದಲ್ಲಿ (Maharaja ground) ಪಾದಯಾತ್ರೆ ಸಮಾರೋಪ ಸಮಾರಂಭ ನಡೆಯಲಿದೆ. ಸಿಎಂ ರಾಜೀನಾಮೆಗೆ ಆಗ್ರಹಿಸಿ ಕಮಲದಳ ನಾಯಕರು ಒಟ್ಟು 128 ಕಿ.ಮೀ ಹೆಜ್ಜೆ ಹಾಕಿದ್ದು, ಇಂದು ಮೈಸೂರಿನಲ್ಲಿ ಲಕ್ಷಾಂತರ ಕಾರ್ಯಕರ್ತರನ್ನ ಸೇರಿಸಿ ಸಿಎಂ ವಿರುದ್ದ ಕಹಳೆ ಮೊಳಗಿಸಲಿದ್ದಾರೆ.