ಬುಧವಾರ ಗೂಗಲ್ ತನ್ನ 2021ನೇ ವರ್ಷದ ಹುಡುಕಾಟ (search) ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ವರ್ಷದ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ ವಿಚಾರಗಳನ್ನು ಈ ವರದಿಯು ಬಹಿರಂಗಪಡಿಸುತ್ತದೆ. ‘ಇಂಡಿಯನ್ ಪ್ರೀಮಿಯರ್ ಲೀಗ್’ ಮತ್ತು ‘ಐಸಿಸಿ ಟಿ 20 ವಿಶ್ವಕಪ್’ ಭಾರತದಲ್ಲಿನ ಪ್ರಮುಖ ಪ್ರಶ್ನೆಗಳ ಒಟ್ಟಾರೆ ಪಟ್ಟಿಯಲ್ಲಿ ಅಗ್ರ ಸ್ಥಾನಗಳಲ್ಲಿ ಹೊರಹೊಮ್ಮುವುದರೊಂದಿಗೆ ಈ ವರ್ಷವೂ ಕ್ರಿಕೆಟ್ ಹುಡುಕಾಟದ ಚಾರ್ಟ್‌ಗಳಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ‘ಕೋವಿನ್’ ಮತ್ತು ‘ಕೋವಿಡ್ ಲಸಿಕೆ’ ಗಾಗಿ ಹುಡುಕಾಟಗಳು ಸಹ ನಡೆದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ದೇಶವನ್ನು ಭಾದಿಸಿದ ಆಮ್ಲನಜಕ ಕೊರತೆಯೂ ಗೂಗಲ್ ಹುಡುಕಾಟದ ಪಟ್ಟಿಯಲ್ಲಿದ್ದು ಮನೆಯಲ್ಲೇ ಆಮ್ಲಜನಕ ತಯಾರಿಸುವುದು ಹೇಗೆ ಎಂಬುವುದು ಹೇಗೆ (how) ವಿಭಾಗದಲ್ಲಿ ಟ್ರೆಂಡಿಂಗ್ ಆಗಿದೆ.
2020 ರಲ್ಲಿ, ಭಾರತದಲ್ಲಿನ ಟಾಪ್ ಗೂಗಲ್ ಹುಡುಕಾಟಗಳು “ಡಾಲ್ಗೋನಾ ಕಾಫಿ ಮಾಡುವುದು ಹೇಗೆ”, “ಯುಎಸ್ ಚುನಾವಣಾ ಫಲಿತಾಂಶಗಳು” ಮತ್ತು “ನನ್ನ ಹತ್ತಿರದಲ್ಲಿರುವ COVID ಪರೀಕ್ಷೆ” ಮುಂತಾದ ಪದಗಳಾಗಿದ್ದವು. ಒಂದು ವರ್ಷದ ನಂತರ, ಜನಪ್ರಿಯ ಹುಡುಕಾಟಗಳಲ್ಲಿನ ಬದಲಾವಣೆಯು COVID-19 ರ ವಿನಾಶಕಾರಿ ಎರಡನೇ ಅಲೆಯು ಜನಜೀವನವನ್ನು ಹೇಗೆ ಭಾದಿಸಿದೆ ಎಂಬ ಸಂಪೂರ್ಣ ಚಿತ್ರವನ್ನು ಚಿತ್ರಿಸುತ್ತದೆ.
ಒಟ್ಟಾರೆಯಾಗಿ ಹೆಚ್ಚು ಹುಡುಕಲ್ಪಟ್ಟ ಪದವೆಂದರೆ “ಇಂಡಿಯನ್ ಪ್ರೀಮಿಯರ್ ಲೀಗ್” ಆಗಿದ್ದರೂ ಅದರ ನಂತರದ ಹುಡುಕಾಟಗಳು ಅನೇಕ ಭಾರತೀಯರು ಎದುರಿಸಿದ ಕಷ್ಟಗಳನ್ನು ಸೂಚಿಸುತ್ತವೆ. “COVID ಲಸಿಕೆಗಾಗಿ ನೋಂದಾಯಿಸಿಕೊಳ್ಳುವುದು ಹೇಗೆ” ಎಂಬುವುದು ಹೇಗೆ ವಿಭಾಗದಲ್ಲಿ ಅತಿ ಹೆಚ್ವು ಬಾರಿ ಹುಡುಕಲ್ಪಟ್ಟಿದೆ. ನಂತರ “ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ?” “ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವುದು ಹೇಗೆ?” “ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡುವುದು ಹೇಗೆ?” ಮತ್ತು “ಆಮ್ಲಜನಕವನ್ನು ಮನೆಯಲ್ಲೇ ತಯಾರಿಸುವುದು ಹೇಗೆ?” ಎಂಬ ಪ್ರಶ್ನೆಗಳು ಟ್ರೆಂಡಿಂಗ್ ಪಟ್ಟಿಯಲ್ಲಿವೆ.
ದೆಹಲಿಯಾದ್ಯಂತ ಆಸ್ಪತ್ರೆಗಳು ತಮ್ಮ ರೋಗಿಗಳ ದುಃಸ್ಥಿತಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ಗೆ ತೆರಳಿತ್ತು. ಈ ಬಗೆಗಿನ ವಿಚಾರಣೆ ಸಂದರ್ಭದಲ್ಲಿ ಭಾರತದಲ್ಲಿ ಆಮ್ಲಜನಕದ ಕೊರತೆ ಇಲ್ಲ ಎಂದು ಕೇಂದ್ರವು ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಬದಲಿಗೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದಂತೆ ಆಮ್ಲಜನಕದ ಸರಬರಾಜುಗಳನ್ನು ಅಸಮರ್ಪಕವಾಗಿ ನಿರ್ವಹಿಸಿರುವುದರಿಂದ ಕೊರತೆ ಉಂಟಾಗಿದೆ ಎಂದಿತ್ತು.
ದೆಹಲಿಯಲ್ಲಿ ಆಮ್ಲಜನಕದ ಕೊರತೆಯ ವರದಿಯಾದ ಏಪ್ರಿಲ್ ಮತ್ತು ಮೇ ನಡುವೆ “ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವುದು ಹೇಗೆ” ಎಂಬ ಹುಡುಕಾಟಗಳು ಹೆಚ್ಚಾಗಿ ನಡೆದಿದೆ. “ಮನೆಯಲ್ಲಿ ಆಮ್ಲಜನಕವನ್ನು ಹೇಗೆ ತಯಾರಿಸುವುದು” ಎಂಬ ಹುಡುಕಾಟವೂ ಅದೇ ಸಮಯದಲ್ಲಿ ನಡೆದಿದೆ. ವಿದ್ಯುದ್ವಿಭಜನೆ (electrolysis)ಯನ್ನು ಬಳಸಿಕೊಂಡು ಆಮ್ಲಜನಕವನ್ನು ತಯಾರಿಸುವ ಯೂಟ್ಯೂಬ್ ವೀಡಿಯೊಗಳನ್ನು ಏಪ್ರಿಲ್ ಮತ್ತು ಮೇನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಗಟ್ಟಲೆ ವೀಕ್ಷಣೆಗಳನ್ನು ಪಡೆದಿದೆ. ಆದರೆ ಅಂತಹ ಉತ್ಪಾದನಾ ವಿಧಾನಗಳು ವಿಷಕಾರಿ ರಾಸಾಯನಿಕ ಅಪಘಾತಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ಕಾರ್ಯಕರ್ತರು ಆತಂಕವನ್ನು ವ್ಯಕ್ತಪಡಿಸಿದ್ದರು.
ರಾಜಕೀಯ ಮೇಲಾಟಗಳ ನಡುವೆಯೂ ಭಾರತದಲ್ಲಿ ಆಮ್ಲಜನಕ ಕೊರೆತೆಯಿಂದಾದ ಒಟ್ಟು ಸಾವಿನ ಬಗ್ಗೆ ಯಾವುದೇ ನಿಖರ ಅಂಕಿಅಂಶಗಳು ಲಭ್ಯವಿಲ್ಲ. ಉತ್ತರ ಪ್ರದೇಶದಲ್ಲಿ COVID-19 ನಿಂದ 22,915 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ತೋರಿಸಿದೆ, ಆದರೆ ಅವರ ಮರಣ ಪ್ರಮಾಣಪತ್ರದಲ್ಲಿ “ಆಮ್ಲಜನಕದ ಕೊರತೆ” ಕಾರಣ ಎಂದು ಯಾವುದೇ ಉಲ್ಲೇಖವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ.
ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಡಿಸೆಂಬರ್ 3 ರಂದು ಪಂಜಾಬ್ ಮತ್ತು ಅರುಣಾಚಲ ಪ್ರದೇಶ ಎಂಬ ಎರಡು ರಾಜ್ಯಗಳು ಮಾತ್ರ ಎರಡನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ COVID ರೋಗಿಗಳ ಸಾವಿನ ಬಗ್ಗೆ ಕೇಂದ್ರ ಮಾಹಿತಿ ಕೇಳಿದಾಗ ಪ್ರತಿಕ್ರಿಯಿಸಿವೆ ಎಂದು ಹೇಳಿದ್ದಾರೆ.
ಅಧಿಕೃತವಾಗಿ, ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಭಾರತವು COVID-19 ನಿಂದ 4.778 ಲಕ್ಷಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದೆ. ಒಂದು ಅಧ್ಯಯನದ ಪ್ರಕಾರ ಮೊದಲ ಮತ್ತು ಎರಡನೆಯ ಅಲೆಗಳ ಸಮಯದಲ್ಲಿ ಅಂದಾಜು ಹೆಚ್ಚುವರಿ ಸಾವಿನ ಸಂಖ್ಯೆ ಸುಮಾರು 3.9 ಮಿಲಿಯನ್ ಆಗಿತ್ತು ಆದರೆ ಸಂಖ್ಯೆಯನ್ನು ಕೇಂದ್ರವು ಸಾರಾಸಗಟಾಗಿ ನಿರಾಕರಿಸಿದೆ.
ಗೂಗಲ್ ಪ್ರತಿಸ್ಪರ್ಧಿ ಯಾಹೂ ಸಹ ತನ್ನ 2021 ನೇ ವರ್ಷದ ಹುಡುಕಾಟದ ವಿವರವನ್ನು ಬಹಿರಂಗಪಡಿಸಿದೆ. ಅಲ್ಲಿ ಅದು ನರೇಂದ್ರ ಮೋದಿ, ವಿರಾಟ್ ಕೊಹ್ಲಿ, ಮಮತಾ ಬ್ಯಾನರ್ಜಿ, ಸಿದ್ಧಾರ್ಥ್ ಶುಕ್ಲಾ, ರಾಹುಲ್ ಗಾಂಧಿ ಮತ್ತು ಎಂಎಸ್ ಧೋನಿ ಅವರನ್ನು ತನ್ನ ಸರ್ಚ್ ಇಂಜಿನ್‌ನಲ್ಲಿ ಹೆಚ್ಚು ಹುಡುಕಲಾದ ವ್ಯಕ್ತಿಗಳೆಂದು ಉಲ್ಲೇಖಿಸಿದೆ. Yahoo ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಯುತ್ತಿರುವ ರೈತರ ಪ್ರತಿಭಟನೆ ಜೊತೆಗೆ ಆರ್ಯನ್ ಖಾನ್, 2021 ರ ಯೂನಿಯನ್ ಬಜೆಟ್ ಆಫ್ ಇಂಡಿಯಾ, ರಾಜ್ ಕುಂದ್ರಾ ಮತ್ತು ಬ್ಲ್ಯಾಕ್ ಫಂಗಸ್ ಅನ್ನು ವರ್ಷದ ಪ್ರಮುಖ ಸುದ್ದಿಯಲ್ಲಿ ಪಟ್ಟಿ ಮಾಡಿದೆ.