ಬಿಕ್ಕಳಿಕೆ ಪ್ರತಿಯೊಬ್ಬರಿಗು ಬರುತ್ತದೆ.ಬಿಕ್ಕಳಿಕೆ ಬಂದಾಗ ಒಂದು ರೀತಿಯ ಹಿಂಸೆ,ಕಲವರು ಬಿಕ್ಕಳಿಕೆ ಬಂದ ತಕ್ಷಣ ಒಂದು ಲೋಟ ನೀರನ್ನು ಕುಡಿಯುತ್ತಾರೆ.ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ..ಮುಖ್ಯಾವಾಗಿ ಬಿಕ್ಕಳಿಕೆ ಬರುವುದು,ಅತಿಯಾಗಿ ಕಾರವಿರುವ ಪದಾರ್ಥಗಳನ್ನು ಸೇವಿಸಿದಾಗ,ಮಸಾಲೆ ಹೆಚ್ಚಿದ್ದಾರೆ,ದೇಹದಲ್ಲಿ ನೀರಿನ ಕೊರತೆಯಾದಗ ಹಾಗೂ ಮುಖ್ಯವಾಗಿ ಎದೆಯ ಕೆಳಭಾಗದಲ್ಲಿ ಹಾಗೂ ಹೊಟ್ಟೆಯ ಮೇಲ್ಭಾಗದಲ್ಲಿ ಡಯಾಫ್ರಂ ಎನ್ನುವ ಒಂದು ಪದರವಿರುತ್ತದೆ. ಇದು ಯಾವುದೇ ಕ್ಷಣದಲ್ಲಿ ಸಡನ್ ಆಗಿ ಸೆಳೆತಕ್ಕೆ ಒಳಗಾದರೆ ಅದರ ಪ್ರಭಾವದಿಂದ ನಮಗೆ ಬಿಕ್ಕಳಿಕೆ ಬರುತ್ತದೆ.ಹಾಗೂ ಒತ್ತಡ, ಮಧ್ಯಪಾನ ಸೇವಿಸುವುದರಿಂದ,ದೇಹದ ತಾಪಮಾನ ಬದಲಾದಾಗ,ಹೆಚ್ಚು ತಿನ್ನುವುದರಿಂದ,ಕಾರ್ಬೊನೇಟೆಡ್ ಜ್ಯೂಸ್ಗಳನ್ನು ಸೇವಿಸುವುದರಿಂದ ಬಿಕ್ಕಳಿಗೆ ಶುರುವಾಗುತ್ತದೆ.. ಆದ್ರೆ ಒಂದು ಲೋಟ ನೀರು ಕುಡಿದರು ಒಂದಿಷ್ಟು ಜನಕ್ಕೆ ಬಿಕ್ಕಳಿಗೆ ನಿಲ್ಲುವುದಿಲ್ಲ ಅಂತಹ ಸಂಧರ್ಭದಲ್ಲಿ ಈ ಟ್ರಿಕ್ಸ್ನ ಟ್ರೈ ಮಾಡಿ.
![](https://pratidhvani.com/wp-content/uploads/2024/07/IMG_8586.jpeg)
ಸಕ್ಕರೆ ಸೇವಿಸಿ
ಬಿಕ್ಕಳಿಕೆ ಹೆಚ್ಚಾದರೆ ಒಂದು ಟೇಬಲ್ ಸ್ಪೂನ್ ಅಷ್ಟು ಸಕ್ಕರೆಯನ್ನು ಸೇವಿಸಿ, ನಂತ್ರ ಅರ್ಧ ಲೋಟದಷ್ಟು ಬೆಚ್ಚಗಿನ ನೀರನ್ನು ಕುಡಿಯುದರಿಂದ ಬಿಕ್ಕಳಿಗೆ ನಿಲ್ಲುತ್ತದೆ..ಸಕ್ಕರೆಯಲ್ಲಿ ಕ್ಯಾಲೋರಿಗಳು ಹೆಚ್ಚಿರುತ್ತದೆ. ಹಾಗೂ ಬಿಕ್ಕಳಿಕೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಲು ಇದೊಂದು ಒಳ್ಳೆಯ ಮಾರ್ಗ.
![](https://pratidhvani.com/wp-content/uploads/2024/07/IMG_8591.jpeg)
ಉಸಿರನ್ನು ಬಿಗಿ ಹಿಡಿದುಕೊಳ್ಳಿ
ಬಿಕ್ಕಳಿಕೆ ಹೆಚ್ಚಾದಾಗ ಇದನ್ನು ಕಡಿಮೆ ಮಾಡುವುದು ಒಂದು ಸಾಹಸದ ಕೆಲಸ,ಇಂತಹ ಟೈಮ್ನಲ್ಲಿ ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಂಡು,೨೦ ಸೆಕೆಂಡ್ಗಳ ಕಾಲ ಹಾಗೆ ಇರಿ,ನಂತರ ಉಸಿರನ್ನು ನಿಧಾನವಾಗಿ ಹೊರಬಿಡಿ.ಹೀಗೇ ಮಾಡುವುದರಿಂದ ಬಿಕ್ಕಳಿಕೆ ತಕ್ಷಣಕ್ಕೆ ಕಡಿಮೆಯಾಗುತ್ತದೆ..
![](https://pratidhvani.com/wp-content/uploads/2024/07/IMG_8589.jpeg)
ನಿಂಬೆ ಹಣ್ಣಿನ ರಸ
ಒಂದು ಚಿಕ್ಕ ಲೋಟಕ್ಕೆ ಒಂದು ಹೋಳಷ್ಟು ನಿಂಬೆ ರಸ ಹಾಗೂ ಅದಕೆ ಸ್ವಲ್ಪ ಉಪ್ಪನ್ನು ಬೆರಸಿ,ಅದನ್ನು ಕುಡಿಯುವುದರಿಂದ ಬಿಕ್ಕಳಿಕೆ ತಕ್ಷಣಕ್ಕೆ ಕಡಿಮೆಯಾಗುತ್ತದೆ..ಇಲ್ಲವಾದಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕೂಡಾ ಒಂದು ಸಿಂಪಲ್ ರೆಮಿಡಿ..
![](https://pratidhvani.com/wp-content/uploads/2024/07/IMG_8588.jpeg)
ವಿನೆಗರ್
ವಿನೆಗರ್ ರುಚಿ ಅಷ್ಟು ಚೆನ್ನಾಗಿರುವುದಿಲ್ಲ..ಕೆಲವರಿ ವಾಕರಿಕೆಯನ್ನು ತರಿಸುತ್ತದೆ.. ಆದರೆ ಬಿಕ್ಕಳಿಕೆ ಬಂದಂತಹ ಸಂದರ್ಭದಲ್ಲಿ ನಾಲಿಗೆಯ ಮೇಲೆ ಒಂದು ಡ್ರಾಪ್ ಅಷ್ಟು ವಿನೆಗರ್ ಹಾಕಿಕೊಂಡು ಚಪ್ಪರಿಸುವುದರಿಂದ ಬಿಕ್ಕಳಿಕೆಯಿಂದ ಮುಕ್ತಿ ಕಾಣಬಹುದು.
![](https://pratidhvani.com/wp-content/uploads/2024/07/IMG_8590.jpeg)