ಇಯರ್ಫೋನ್ ಬಳಕೆ ಮಾಡುವವರಿಗೆ ನಮ್ಮಲ್ಲಿ ಯಾವುದೇ ಕೊರತೆಯಿಲ್ಲ. ಇಯರ್ ಬಡ್ಗಳ ಆವಿಷ್ಕಾರವಾದ ಮೇಲಂತೂ ಇವುಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಯರ್ ಬಡ್ಗಳಿಂದ ಕಿವಿಗೆ ಹಾನಿಯುಂಟಾದ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿದ್ದರೂ ಸಹ ಇದರ ಮೇಲಿನ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ.
![](https://pratidhvani.com/wp-content/uploads/2023/06/download.jpeg)
ಆದರೆ ದೀರ್ಘಕಾಲದ ಇಯರ್ಫೋನ್ಗಳ ಬಳಕೆ ಶಾಶ್ವತ ಕಿವುಡತನಕ್ಕೆ ಕಾರಣವಾಗಬಹುದು ಅಂತಾ ಅಧ್ಯಯನಗಳು ಹೇಳಿವೆ. ಹೀಗಾಗಿ ಅತ್ಯಂತ ಮಿತಿಯಲ್ಲಿ ಇಯರ್ಫೋನ್ಗಳ ಬಳಕೆ ಮಾಡುವುದು ಉತ್ತಮ, 100 ಡಿಬಿ ಹೆಚ್ಚಿನ ಶಬ್ದ 15 ನಿಮಿಷಕ್ಕಿಂತ ಹೆಚ್ಚುಕಾಲ ಕಿವಿಯ ಮೇಲೆ ಬಿದ್ದರೆ ಅಪಾಯ ಎಂದು ಶ್ರವಣ ತಜ್ಞರು ಹೇಳ್ತಾರೆ, ಹೀಗಾಗಿ ಕಡಿಮೆ ಧ್ವನಿಯಲ್ಲಿ ಇಯರ್ಫೋನ್ಗಳಲ್ಲಿ ಕೇಳುವುದು ಉತ್ತಮ.
ಎಂದಿಗೂ ಹೈ ವಾಲ್ಯೂಮ್ನಲ್ಲಿ ಇಯರ್ಫೋನ್ಗಳಲ್ಲಿ ಏನನ್ನೂ ಕೇಳಲೇಬಾರದು. ಮ್ಯುಸಿಕ್, ಸಿನಿಮಾ ಹೀಗೆ ಯಾವುದೇ ಆಗಿದ್ದರೂ ಕಡಿಮೆ ವಾಲ್ಯೂಮ್ನಲ್ಲಿಯೇ ಕೇಳುವುದು ಕಿವಿಯ ಆರೋಗ್ಯದ ದೃಷ್ಟಿಯಿಂದ ಉತ್ತಮ