• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಕಳೆದೆರಡು ವರ್ಷಗಳಲ್ಲಿ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡವರೆಷ್ಟು ಮಂದಿ?

ರಾಜರಾಮ್ ತಲ್ಲೂರ್ by ರಾಜರಾಮ್ ತಲ್ಲೂರ್
January 9, 2022
in Uncategorized
0
ಕಳೆದೆರಡು ವರ್ಷಗಳಲ್ಲಿ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡವರೆಷ್ಟು ಮಂದಿ?
Share on WhatsAppShare on FacebookShare on Telegram

ಈ ಹಿಂದೆ ಹೃದಯದ ರಕ್ತನಾಳಗಳಲ್ಲಿ ಯಾವುದೇ ತೊಂದರೆಯ ಹಿನ್ನೆಲೆ ಇಲ್ಲದ, 20-45ವರ್ಷಗಳ ನಡುವಿನ ಪೀಕ್ ಉತ್ಪಾದಕ ಪ್ರಾಯವರ್ಗದ, ದೈಹಿಕವಾಗಿ ಸದೃಢರೂ-ಚಟುವಟಿಕೆ ಭರಿತರೂ ಆಗಿರುವ ಎಷ್ಟು ಮಂದಿ ನಿಮ್ಮ ಕುಟುಂಬ-ಪರಿಚಿತ ವರ್ಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಠಾತ್ “ಹೃದಯಾಘಾತ/ಹೃದಯ ಸ್ಥಂಭನ/ಸ್ಟ್ರೋಕ್ (ಲಕ್ವಾ)” ಆಗಿ ಅಗಲಿಹೋಗಿದ್ದಾರೆ? ನನಗೆ ನನ್ನ ಕುಟುಂಬ-ಪರಿಚಯವರ್ಗದಲ್ಲಿ ಕನಿಷ್ಠ 15-20 ಇಂತಹ ಪ್ರಕರಣಗಳು ಗಮನಕ್ಕೆ ಬಂದಿವೆ. ಫೇಸ್‌ಬುಕ್/ಟ್ವಿಟ್ಟರ್‌ನಂತಹ ಸೋಷಿಯಲ್ ಮೀಡಿಯಾಗಳಲ್ಲಿ ಪ್ರತೀ ವಾರ ಇಂತಹ ಕನಿಷ್ಠ ಎರಡು ಪೋಸ್ಟ್‌ಗಳನ್ನು ಗಮನಿಸುತ್ತಿದ್ದೇನೆ.

ADVERTISEMENT

ನಮ್ಮ ಆರೋಗ್ಯ ವ್ಯವಸ್ಥೆಗೆ ಇದು ಇನ್ನೂ ಯಾಕೆ ಗಂಭೀರ ಸಂಗತಿ ಅನ್ನಿಸುತ್ತಿಲ್ಲ?

ಭಾರತದ ಹೃದ್ರೋಗಗಳ ಸೊಸೈಟಿ (CSI) ಪ್ರಕಾರ ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಹೃದಯದ ರಕ್ತನಾಳಗಳ ತೊಂದರೆ (CVD)ಇರುವವರ ಸಂಖ್ಯೆ 3.6ಕೋಟಿ ಇದ್ದದ್ದು, ಕೋವಿಡ್ ಬರುವ ಮುನ್ನವೇ 6.2ಕೋಟಿಗೆ ಏರಿದೆ. ಈಗ ಕೋವಿಡ್ ಕಾಲದ ಲೆಕ್ಕಾಚಾರಗಳು ಇನ್ನೂ ಲಭ್ಯವಿಲ್ಲ. ಆದರೆ, ಕೋವಿಡ್ ಮೊದಲ ಅಲೆಯ ಕಾಲದಲ್ಲಿ ಲಾಕ್‌ಡೌನ್ ಕಾರಣದಿಂದಾಗಿ, ಆಸ್ಪತ್ರೆಗಳು ಕೋವಿಡ್ ಗದ್ದಲದಲ್ಲಿ ಮೈಮರೆತಿದ್ದ ಕಾರಣದಿಂದಾಗಿ ಹೃದ್ರೋಗಗಳು ವರದಿಯಾಗುವ ಪ್ರಮಾಣ ಬಹಳ ಕಡಿಮೆಯಾಗಿತ್ತು. ಇದರಿಂದಾಗಿ ಬಹಳ ಮಂದಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ತೊಂದರೆಗೀಡಾಗಿರಬಹುದು, ಅವರ ರೋಗ ಉಲ್ಭಣಗೊಂಡಿರಬಹುದು ಎಂದು ಅಧ್ಯಯನಗಳು ಶಂಕೆ ವ್ಯಕ್ತಪಡಿಸಿದ್ದಿದೆ.

ಕೋವಿಡ್ ರೋಗ ಬಂದವರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಗಳು ಇದ್ದು, ಅದರಿಂದ ಹೃದಯಾಘಾತ, ಮೆದುಳಿನ ಆಘಾತ (ಲಕ್ವಾ) ಆಗುವ ಸಾಧ್ಯತೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಹೃದಯ-ಮೆದುಳು ಮಾತ್ರವಲ್ಲದೇ ಶ್ವಾಸಕೋಶ, ಕಾಲುಗಳು, ಪಿತ್ತಜನಕಾಂಗ, ಮೂತ್ರಪಿಂಡಗಳ ಮೇಲೂ ರಕ್ತ ಹೆಪ್ಪುಗಟ್ಟುವಿಕೆ ಪರಿಣಾಮ ಬೀರಬಹುದು ಎಂಬುದು ಖಚಿತವಾಗಿದೆ. ಇದೆಲ್ಲ ವೈಜ್ಞಾನಿಕವಾಗಿಯೇ ಖಚಿತವಾಗಿರುವಾಗ, ಭಾರತದಲ್ಲಿ ಈ ಬಗ್ಗೆ ಆರೋಗ್ಯ ವ್ಯವಸ್ಥೆ ಏನು ಕ್ರಮಗಳನ್ನು ಕೈಗೊಂಡಿದೆ?

೧. ದೊಡ್ಡ ಪ್ರಮಾಣದಲ್ಲಿ “ಅಸಿಂಪ್ಟಮ್ಯಾಟಿಕ್” ಕೋವಿಡ್ ಬಂದುಹೋದವರು ದೇಶದಲ್ಲಿದ್ದಾರೆ (ಸರ್ಕಾರದ್ದೇ ಸೀರೊಸರ್ವೇ ಪ್ರಕಾರ ದೇಶದ ಪ್ರತೀ ಮೂವರಲ್ಲಿ ಇಬ್ಬರು ಈಗ ಸೋಂಕು ತಗುಲಿಸಿಕೊಂಡಾಗಿದೆ). ಇವರಲ್ಲಿ ರಕ್ತ ಹೆಪ್ಪುಗಟ್ಟುವ ಮತ್ತು ಅದರ ಪರಿಣಾಮಗಳುಂಟಾಗುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆದಿದೆಯೆ?

೨. ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಆಗಿರುವ ಅಕಾಲಿಕ ಹೃದಯಾಘಾತ-ಸ್ಟ್ರೋಕ್ ಸಾವುಗಳಲ್ಲಿ ರೋಗಿಗಳ ವಿವರವಾದ ಅಟಾಪ್ಸಿ ನಡೆದಿದೆಯೆ? ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆಹಚ್ಚುವ ಮತ್ತು ಉಳಿಸಬಹುದಾದ ಜೀವಗಳನ್ನು ಉಳಿಸುವ ಪ್ರಯತ್ನಗಳು ನಡೆದಿವೆಯೆ?

೩. ಅಮೆರಿಕದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪ್ರಾಯೋಗಿಕ ಹಂತದಲ್ಲಿ ರಕ್ತ ಹೆಪ್ಪುಗಟ್ಟಿಸಿದ ಕಾರಣಕ್ಕೆ ಒಂದೆರಡು ದಿನ ಅಧ್ಯಯನವನ್ನು ಸ್ಥಗಿತಗೊಳಿಸಲಾಗಿತ್ತು. ಈಗಲೂ ಮಕ್ಕಳ ಮೇಲೆ ಲಸಿಕೆ ಪ್ರಯೋಗದ ವೇಳೆ ಹೆಪ್ಪುಗಟ್ಟುವಿಕೆ ದೂರುಗಳ ಹಿನ್ನೆಲೆಯಲ್ಲಿ ಅಧ್ಯಯನಗಳನ್ನು ಸ್ಥಗಿತಗೊಳಿಸಿರುವ ವರದಿಗಳು ಯುರೋಪಿನಲ್ಲಿ ಕೇಳಿಬರುತ್ತಿವೆ. ಲಸಿಕೆಗಳಿಂದ ಈ ರೀತಿಯ ಅಡ್ಡಪರಿಣಾಮಗಳ ಸಾಧ್ಯತೆಯೇನಾದರೂ ಇದೆಯೇ ಎಂಬುದನ್ನು ಭಾರತದಲ್ಲಿ ಔಷಧಿ ಸುರಕ್ಷಾ ವ್ಯವಸ್ಥೆಗಳು ಖಚಿತಪಡಿಸಿಕೊಂಡಿವೆಯೆ?

೪. ಅಕಾಲಿಕವಾಗಿ, ಹಠಾತ್ ಹೃದಯಾಘಾತ-ಸ್ಟ್ರೋಕ್ ಆದವರ ಲಸಿಕೆ ಹಿನ್ನೆಲೆ, ಕೋವಿಡ್ ಸೋಂಕಿನ ಹಿನ್ನೆಲೆಗಳ ಡೇಟಾ ಏನಾದರೂ ಗ್ರಾಮ/ನಗರ ಮಟ್ಟದಲ್ಲಿ ಸಂಗ್ರಹಿಸಿಡಲಾಗಿದೆಯೆ? ಇಂತಹ ದಾಖಲೆಗಳು ಮುಂದೊಂದು ದಿನ ಹಿಂತಿರುಗಿ ನೋಡಿ ವಿಶ್ಲೇಷಿಸುವುದಕ್ಕೆ ಮಹತ್ವದವು ಎಂದು ಆರೋಗ್ಯ ವ್ಯವಸ್ಥೆಗೆ ಅನ್ನಿಸಿಲ್ಲವೆ?

ಅಕಾಲಿಕವಾದ CVD ಸಾವುಗಳೆಲ್ಲವೂ ಅನ್ಯಾಯದ ಸಾವುಗಳು. ಆರೋಗ್ಯ ವ್ಯವಸ್ಥೆ ಪರಿಣಾಮಕಾರಿಯಾಗಿದ್ದರೆ, ಉಳಿಸಿಕೊಳ್ಳಬಹುದಾಗಿದ್ದ ಜೀವಗಳವು. ಜನರ ಜೀವಕ್ಕಿಂತ ದುಡ್ಡು ಮುಖ್ಯವಾದಾಗ ಮಾತ್ರ ಇಂತಹ “ದಿವ್ಯ ನಿರ್ಲಕ್ಷ್ಯ” ಕಾಣಿಸಿಕೊಳ್ಳಲು ಸಾಧ್ಯ. ನಾಳೆ ಜನರೇ ಇಲ್ಲದಿದ್ದರೆ ದುಡ್ಡು ಹಿಡ್ಕೊಂಡು ಏನು ಮಾಡ್ತೀರಿ ಸಾರ್?

COVID19 #CLOTS #MI #HeartAttack #Stroke #Vaccine

Tags: Covid 19ಕರೋನಾಕಳೆದ ಎರಡು ವರ್ಷಕೋವಿಡ್-19ಭಾರತಹಾರ್ಟ್ ಅಟ್ಯಾಕ್
Previous Post

ಭೂಗತ ಜಗತ್ತಿನ ‘ವಾಸ್ತವ್’ ಚಿತ್ರಣ

Next Post

ಜೀವನ ಜೀವನೋಪಾಯ ಮತ್ತು ಘನತೆಯ ಬದುಕು – ಭಾಗ – 1

Related Posts

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 
Uncategorized

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 

by Chetan
July 3, 2025
0

ಇಂದಿನಿಂದ ಜಮ್ಮು ಕಾಶ್ಮೀರದಲ್ಲಿ (Jammu Kashmir) ಅಮರನಾಥ ಯಾತ್ರೆ (Amaranatha yatra) ಆರಂಭವಾಗಲಿದೆ. ಈ ಯಾತ್ರೆಯ ಯಾತ್ರಾರ್ಥಿಗಳು ಕಾಶ್ಮೀರದ ಪಹಲ್ಗಾಮ್ (Pahalgam) ಮೂಲಕವೇ ಸಾಗಿ ಹೋಗಬೇಕಿದೆ. ಹೀಗಾಗಿ...

Read moreDetails
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025
Next Post
ಜೀವನ ಜೀವನೋಪಾಯ ಮತ್ತು ಘನತೆಯ ಬದುಕು – ಭಾಗ – 1

ಜೀವನ ಜೀವನೋಪಾಯ ಮತ್ತು ಘನತೆಯ ಬದುಕು - ಭಾಗ - 1

Please login to join discussion

Recent News

Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 
Top Story

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada