ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿ ಕಾಂಗ್ರೆಸ್ ಉಭಯ ನಾಯಕರ ಕುರಿತು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಜಾತಿವಾದಿಗಳು, ಕಾಂಗ್ರೆಸ್ ಪಕ್ಷವನ್ನ ಜಾತಿ ಪಕ್ಷ ಮಾಡಲು ಹೊರಟಿದ್ದಾರೆ, ಮೊದಲು ಗೆದ್ದು ತೋರಿಸಲಿ ಎಂದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸಿಎಂ ಆಗ್ತೀವಿ ಅಂತಿದ್ದಾರೆ. ಇನ್ನೂ ಹೆಣ್ಣು ನೋಡಿಲ್ಲ, ನಿಶ್ಚಿತಾರ್ಥ ಆಗಿಲ್ಲ, ಮದುವೆ ಆಗಿಲ್ಲ, ಅಷ್ಟರಲ್ಲೇ ಮಗುವಿನ ನಾಮಕರಣಕ್ಕೆ ತಯಾರಿ ನಡೀತಿದೆ. ಒಂದೇ ಮಗುವಿಗೆ ಇಬ್ಬರು ಅಪ್ಪಂದಿರಾಗಲು ಹೇಗೆ ಸಾಧ್ಯ? ಚುನಾವಣೆಯಲ್ಲಿ ಆಯ್ಕೆ ಮಾಡಲಿ, ಆಮೇಲೆ ಮುಖ್ಯಮಂತ್ರಿಯಾಗಲು ಪೈಪೋಟಿ ನಡೆಸಲಿ ಎಂದು ಹೇಳಿದ್ದಾರೆ.