• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ವಿಶಿಷ್ಟ ರೀತಿಯ ಮತದಾನ ಜಾಗೃತಿ ಅಭಿಯಾನ….,….

ಪ್ರತಿಧ್ವನಿ by ಪ್ರತಿಧ್ವನಿ
May 2, 2024
in ಇದೀಗ
0
ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ವಿಶಿಷ್ಟ ರೀತಿಯ ಮತದಾನ ಜಾಗೃತಿ ಅಭಿಯಾನ….,….
Share on WhatsAppShare on FacebookShare on Telegram

ನಮ್ಮ ನಡೆ ಮತಗಟ್ಟೆ ಕಡೆ, ಮತದಾನ ಮಾಡಿದವನೇ ಹೀರೊ , ಮತದಾನ ನಮ್ಮ ಹಕ್ಕು , ಚುನಾವಣಾ ಪರ್ವ ದೇಶದ ಗರ್ವ
ಹೈಲೈಟ್ಸ್ :..
“ ಯಕ್ಷಗಾನದಮೂಲಕಮತದಾನಜಾಗೃತಿಅಭಿಯಾನ “
ಧ್ವಜಾರೋಹಣ ಕಾರ್ಯಕ್ರಮ. ಮತದಾನ ಜಾಗೃತಿ *ಮತದಾನ ನಮ್ಮ ಕರ್ತವ್ಯ-ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳೋಣ :

ADVERTISEMENT

ಹೊಸಗುಂದ : Sagara : May 01 : ತಾಲ್ಲೂಕು ಸ್ವೀಪ್ ಸಮಿತಿ ಸಾಗರ ರವರಿಂದ ಸಾಗರ ತಾಲ್ಲೂಕು ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಗುಂದ ಗ್ರಾಮದ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ದಿನಾಂಕ : 30-04-2024 ರಂದು ವಿಶಿಷ್ಟ ರೀತಿಯ ಜನಜಾಗೃತಿ ಸ್ವೀಪ್ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸದೃಢ ದೇಶ ಕಟ್ಟುವ ಕೆಲಸವನ್ನು ಮತ ಚಲಾಯಿಸುವ ಮೂಲಕ ನಾವೆಲ್ಲ ಮಾಡಬೇಕು – ಕಾರ್ಯ ನಿರ್ವಾಹಕ ಅಧಿಕಾರಿ ಸುನೀತಾ ಎ .ಎಸ್
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿಯ ಸರ್ಕಾರ ರಚಿಸಬೇಕು ಎಂಬ ಅಧಿಕಾರ ಪ್ರಜೆಗಳಿಗೆ ಇರುತ್ತದೆ , ದೇಶವನ್ನು ಕಾಯುವ ಕೆಲಸ ಸೈನಿಕ ಮಾಡುತ್ತಾನೆ. ಆದರೆ ದೇಶವನ್ನು ಕಟ್ಟುವ ಕೆಲಸ ಮತದಾನದ ಮೂಲಕ ಆಗಬೇಕು, ಭಾರತೀಯ ಸಂವಿಧಾನ ನಮಗೆ ಮತದಾನ ಮಾಡುವ ಹಕ್ಕನ್ನು ನೀಡಿದ್ದು, ನಾವೆಲ್ಲರೂ ಮತದಾನವನ್ನು ನಮ್ಮ ಕರ್ತವ್ಯ ಎಂದು ಭಾವಿಸಿ ಮತದಾನ ಮಾಡೋಣ , ಅದಕ್ಕಾಗಿ ಐದು ವರ್ಷಕ್ಕೆ ಒಮ್ಮೆ ಬರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಸದೃಢ ದೇಶ ಕಟ್ಟುವ ಕೆಲಸವನ್ನು ಮತ ಚಲಾಯಿಸುವ ಮೂಲಕ ನಾವೆಲ್ಲ ಮಾಡಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಸುನೀತಾ ಎ .ಎಸ್ ಕರೆ ನೀಡಿದರು.

ಯಕ್ಷಗಾನದಮೂಲಕಮತದಾನಜಾಗೃತಿಅಭಿಯಾನ
ಮತದಾನ ಜಾಗೃತಿ ಅಭಿಯಾನದಲ್ಲಿ ಶ್ರೀ ಚೌಡಮ್ಮ ದೇವಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸಿಗಂದೂರುರವರಿಂದ ವಿಶಿಷ್ಟ ರೀತಿಯ ಯಕ್ಷಗಾನ ಪ್ರದರ್ಶನದ ಮೂಲಕ ಮತದಾನ ಜಾಗೃತಿಯನ್ನು ಮೂಡಿಸಲಾಯಿತು.
ಮತದಾನ ಜಾಗೃತಿ ಅಭಿಯಾನ ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯ ಮುಂಭಾಗದಲ್ಲಿ ಜಾಗೃತ ಮತದಾರರ ವೇದಿಕೆ ಹಾಗೂ ಗ್ರಾಮ ಪಂಚಾಯತ್ ಸ್ವೀಪ್ ಸಮಿತಿಯಿಂದ ಏ.30 ರಂದು ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರು ನಮ್ಮ ನಡೆ ಮತಗಟ್ಟೆ ಕಡೆ, ಮತದಾನ ಮಾಡಿದವನೇ ಹೀರೊ , ಮತದಾನ ನಮ್ಮ ಹಕ್ಕು , ಚುನಾವಣಾ ಪರ್ವ ದೇಶದ ಗರ್ವ &, *ಮತದಾನ ನಮ್ಮ ಕರ್ತವ್ಯ-ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳೋಣ : ಎಂದು ವಿಶಿಷ್ಟ ರೀತಿಯಲ್ಲಿ – ಸದರಿ ಯಕ್ಷಗಾನ ಪ್ರದರ್ಶನವನ್ನು ಶ್ರೀ ಆನಂದ್ ಅಂಕೋಲಾ ರವರ ಭಾಗವತಿಕೆಯಲ್ಲಿ ಮತ್ತು ಉದಯ್ ಕಲ್ಲಾಳ್, ಧನಂಜಯ್ ಪುರದಮಠ, ದೇವೇಂದ್ರ ಇಡುವಾಣಿ, ಮಹೇಶ, ನಾರಾಯಣ , ಗೌಡ ನಾಗಭೂಷಣ ಮುಂತಾದ ಪಾತ್ರಧಾರಿಗಳು ಶ್ರೀ ಚಂದ್ರಪ್ಪ ರವರ ನಿರ್ದೇಶನದಡಿಯಲ್ಲಿ ಯಕ್ಷಗಾನ ಪ್ರದರ್ಶನದ ಮೂಲಕ ಮತದಾನ ಜಾಗೃತಿಯನ್ನು ಮೂಡಿಸಿದರು.
” ಮತದಾನದ ಬಗ್ಗೆ ಜಾನಪದ ಶೈಲಿಯಹಾಡು “
ಮತದಾನ ಮಾಡುವ ಬಗ್ಗೆ ಜಾನಪದ ಶೈಲಿಯಲ್ಲಿ ಹಾಡು ಹೇಳುವ ಮೂಲಕ ಮತ ದಾನದ ಬಗ್ಗೆ ಜಾಗೃತಿ ಮೊಡಿಸುವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಾಗರ ತಾಲ್ಲೂಕು ಪಂಚಾಯತಿಯ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಪಂ.ಸಾಗರ ರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಾಗರ ತಾಲ್ಲೂಕಿನ 35 ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಚಿತ್ರ – ಮಾಹಿತಿ – ತೀರ್ಥಹಳ್ಳಿ ಅನಂತ ಕಲ್ಲಾಪುರ

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಪ್ರಧಾನ ಮಂತ್ರಿ ಸಾ** ಬಯಸುತ್ತಿದ್ದಾರೆ ಕಾಂಗ್ರೆಸ್‌ನವರು

Next Post

ಸಿದ್ದರಾಮಯ್ಯ ಅವರೇ ನಿಮ್ಮನ್ನು ಯಾರೊ ಕರಿತಿದ್ದಾರೆ ನೋಡಿ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post

ಸಿದ್ದರಾಮಯ್ಯ ಅವರೇ ನಿಮ್ಮನ್ನು ಯಾರೊ ಕರಿತಿದ್ದಾರೆ ನೋಡಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada