ಅನ್ಯ ಧರ್ಮದ ಯುವಕ ತಮ್ಮ ಮಗಳನ್ನು ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ಕುಪಿತಗೊಂಡ ಯುವತಿ ತಂದೆ ಹಾಗೂ ಇತರರು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದಿದೆ.
ಜೈನ ಧರ್ಮದ ಯುವಕ ಭಜಬಲಿ ಖರ್ಜಗಿ(34) ಹತ್ಯೆಯಾದ ಯುವಕ ಎಂದು ತಿಳಿದುಬಂದಿದೆ. ಕ್ಷತ್ರಿಯಾ ಸಮುದಾಯಕ್ಕೆ ಸೇರಿದ್ದ ಯುವತಿ ಭಾಗ್ಯಶ್ರೀ ಪಾಟೀಲ್ ತಂದೆ ತಮ್ಮನಗೌಡ ಪಾಟೀಲ್ ಯುವಕನನ್ನು ಹತ್ಯೆ ಮಾಡಿರುವವರು ಎಂದು ತಿಳಿದು ಬಂದಿದೆ.
![](https://pratidhvani.com/wp-content/uploads/2022/12/bujaballi1671341511.jpg)
ಶನಿವಾರ ರಾತ್ರಿ ಜಮಖಂಡಿ ತಾಲ್ಲೂಕಿನ ಟಕ್ಕೋಡದಲ್ಲಿ ಹಮುನ ದೇವರ ಪಲ್ಲಕ್ಕಿ ಉತ್ಸವದ ಬಳಿಕ ಮನೆಗೆ ವಾಪಸ್ ಆಗುವ ವೇಳೆ ತಮ್ಮನಗೌಡ ಪಾಟೀಲ್ ಹಾಗೂ ಇತರೆ ಮೂವರು ಯುವಕನ ಮುಖಕ್ಕೆ ಖಾರದಪುಡಿ ಎರಚಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಹತ್ಯೆಯ ಪ್ರಮುಖ ಅರೋಪಿ ತಮ್ಮನಗೌಡ ಪಾಟೀಲ್ನನ್ನು ಸಾವಳಲಿ ಪೊಲೀಸ್ ಠಾಣಾ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನುಳಿದ ಆರೋಪಿಗಳ ಶೋದಕ್ಕೆ ತಂಡ ರಚಿಸಿರುವುದಾಗಿ ತಿಳಿಸಿದ್ದಾರೆ.