ಇಂದು ವಿಧಾನಸಭೆಯ ಬಜೆಟ್ ಅಧಿವೇಶನ (Budget session) ಭಾರೀ ಸದ್ದು ಗದಲ್ಲಕ್ಕೆ ಸಾಕ್ಷಿಯಾಗಿದೆ. ನಿನ್ನೆ ಸಚಿವರು ಪ್ರಸ್ತಾಪಿಸಿದ ಹನಿ ಟ್ರ್ಯಾಪ್ ಪ್ರಕರಣ (Honey trap ) ವಿಪಕ್ಷಗಳಿಗೆ ಅಸ್ತ್ರವಾಗಿದ್ದು, ಇದೇ ವಿಚಾರವನ್ನು ಬಿಜೆಪಿ ಅಸ್ತ್ರವನ್ನಾಗಿಸಿಕೊಂಡಿದೆ.

ಈ ಹನಿಟ್ರ್ಯಾಪ್ ಕೇಸ್ ಸಂಬಂಧ ಯಾರನ್ನೂ ಕೂಡ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Cm siddaramaiah) ಹೇಳಿದ್ದಾರೆ.
ಈ ಬಗ್ಗೆ ಸಚಿವರಾದ ಕೆ ಎನ್ ರಾಜಣ್ಣ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಆರಗ ಜ್ಞಾನೇಂದ್ರ, ಶಾಸಕ ಸುನೀಲ್ ಕುಮಾರ್, ಅವರು ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿ ತನಿಖೆಗೆ ಆಗ್ರಹಿಸಿದ್ದರು.ಈ ಬಗ್ಗೆ ಸಿಎಂ ಸದನದಲ್ಲಿ ಉತ್ತರಿಸಬೇಕು ಎಂದು ಆಗ್ರಹಿಸಿದ್ದರು.

ಈ ರೀತಿ ಹನಿ ಟ್ರ್ಯಾಪ್ ಮಾಡುತ್ತಿರುವ, ಇದರ ಹಿಂದೆ ಇರುವವರನ್ನು ವಜಾ ಮಾಡಿ, ಈ ಬಗ್ಗೆ ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದರು.ಈ ವೇಳೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈ ರೀತಿಯ ಪ್ರಕರಣಗಳಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯಿಲ್ಲ ಎಂದಿದ್ದಾರೆ.