
ತುಮಕೂರು: ಮಧುಗಿರಿಯ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ರಾಜೇಂದ್ರ ಬೇಸರ ಹೊರಹಾಕಿದ್ದು, ಹನಿಟ್ರ್ಯಾಪ್ ವಿಚಾರವಾಗಿ ವೇದಿಕೆಯಲ್ಲಿ ಬೇಸರ ಹೊರ ಹಾಕಿದ್ದಾರೆ. ನಿಮಗೆ ಹೀಗೆ ಮಾಡೊದ್ರಿಂದ ಏನ್ ಖುಷಿ ಸಿಗುತ್ತೆ..? ನಾಳೆ ಬೆಳಗ್ಗೆ ನಿಮ್ಮ ಮನೆಯಲ್ಲೂ ನಿಮಗೂ ತಾಯಿ ಇದ್ದಾರೆ. ಹೆಂಡತಿ, ಮಕ್ಕಳು ಇದ್ದಾರೆ. ನೀವು ನಿಮ್ಮ ಮನೆಯಲ್ಲಿ ನೋಡಬೇಕಲ್ವಾ..? ಎಂದು ಪ್ರಶ್ನಿಸಿದ್ದಾರೆ.

ಯಾರು ಮಾಡಿಸುತ್ತಿದ್ದಾರೆಂದು ಇರಬಹುದು, ಇವತ್ತು ಬಹಳ ದೊಡ್ಡ ದೊಡ್ಡ ವ್ಯಕ್ತಿಗಳು ಇದರ ಹಿಂದೆ ಇದ್ದಾರೆ.. ರಾಜಣ್ಣನವರನ್ನ ಕೂಡ ಬಹಳ ಪ್ರಯತ್ನ ಮಾಡಿದ್ರು.
ನನ್ನ ಮೇಲೆ ಕೂಡ ಪ್ರಯತ್ನ ಮಾಡಿದ್ರು, ನನ್ನ ಮೇಲೆ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಈ ವಿಚಾರದಲ್ಲಿ ಮಾಧ್ಯಮಗಳಿಗೂ ಹೇಳಿದ್ದೇನೆ ಎಂದಿದ್ದಾರೆ.

ನಾನು ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯರನ್ನ ನೋಡಬೇಕಿತ್ತು.. ಸಂಜೆ ಮನೆಗೆ ಬರಲು ಹೇಳಿದ್ರು, ಆದರೆ ಪರಿಷತ್ತನಲ್ಲಿ ಬಿಲ್ ಪಾಸ್ ಆಗುವುದಿತ್ತು.. ಅದು ಮುಗಿಯಲು ತಡವಾಯ್ತು.. ಹೀಗಾಗಿ ಇವತ್ತು ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳು ಸಮಯ ನೀಡಿದ್ದಾರೆ.. ನಾನು ಸಂಜೆ 6 ಗಂಟೆಗೆ ಸಿಎಂ ಭೇಟಿಯಾಗಿ ಯಾರೆಲ್ಲಾ ಇದರ ಹಿಂದೆ ಇದ್ದಾರೆ.. ಯಾರು ಏನೆನಲ್ಲಾ ಮಾಡಿದ್ದಾರೆ, ಅನ್ನೋ ಮಾಹಿತಿ ನನ್ನ ಬಳಿ ಇದೆ.. ಮಾಹಿತಿ ಜೊತೆಗೆ ಸಿಎಂ ಬಳಿ ಹೋಗುತ್ತೇನೆ ಎಂದಿದ್ದಾರೆ..
ನನ್ನ ಮೇಲೆ ಯಾವ ರೀತಿ ಪ್ರಯೋಗ ಮಾಡ್ತಿರೋ ಎಲ್ಲಾ ದಾಖಲೆಗಳಿವೆ.. ಆ ದಾಖಲೆಗಳನ್ನು ನೀಡಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ.. ಆ ಬಳಿಕ ಸಿಎಂ ಏನ್ ಹೇಳ್ತಾರೋ ಅದನ್ನ ನಾನು ಮಾಡ್ತಿನಿ.. ಹೋಗಿ ದೂರು ಕೋಡಿ ಅಂದ್ರೆ ಪೊಲೀಸರಿಗೆ ದೂರು ಕೊಡ್ತಿನಿ.. ಇಲ್ಲ ಇಲ್ಲಿಗೆ ನಿಲ್ಲಿಸಪ್ಪ ಅಂತಾ ಸಿಎಂ ಹೇಳಿದ್ರೆ ನಿಲ್ಲಿಸ್ತಿನಿ.. ಆದರೆ ಇದು ಇಲ್ಲಿಗೆ ಎಂಡ್ ಆಗಬೇಕು..

ರಾಜಣ್ಣನವರ ಮೇಲೆ ಆಗುತ್ತದೆ, ನಮ್ಮ ಮೇಲೆ ಆಗುತ್ತದೆ, ಮತ್ತೊಬ್ಬರ ಮೇಲೆ ಆಗುತ್ತದೆ.. ಯಾರ ಮೇಲೆ ಆದ್ರೂ ಇದು ತಪ್ಪೆ.. ಇಡೀ ರಾಷ್ಟ್ರದಲ್ಲಿ ಯಾವುದೇ ವ್ಯಕ್ತಿಯ ಘನತೆಗೆ ಅಗೌರವ ತರೋದು ತಪ್ಪೆ. ಇದನ್ನ ನಿಲ್ಲಿಸೋದಕ್ಕೆ ರಾಜಣ್ಣನವರಿಂದಲೇ ಪ್ರಾರಂಭವಾಗಲಿ.. ಇದು ತನಿಖೆಯಾಗಲಿ, ಯಾರೇ ಇದರ ಹಿಂದೆ ಇರಲಿ. ತನಿಖೆಯ ಬಳಿಕ ಉತ್ತರ ಸಿಗಲಿದೆ.. ತನಿಖೆಯಿಂದ ಯಾರು ಇದ್ದಾರೆ ಅನ್ನೋ ಸತ್ಯ ಹೊರಬರಲಿ ಎಂದಿದ್ದಾರೆ.. ಆದರೆ ಇದೆಲ್ಲವೂ ಸಿಎಂ ಸಿದ್ದರಾಮಯ್ಯರ ನಿರ್ಧಾರದ ಮೇಲೆ ನಿರ್ಧಾರ ಆಗುತ್ತದೆ ಎಂದಿದ್ದಾರೆ..