ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಹನಿ ಟ್ರ್ಯಾಪ್ (Honey trap) ಪ್ರಕರಣ ಕಾಂಗ್ರೆಸ್ ನಲ್ಲಿ (Congress) ಸಂಚಲನ ಮೂಡಿಸಿದೆ.ಈ ಮಧ್ಯೆ ಸಿಎಂ ಸಿದ್ದರಾಮಯ್ಯರನ್ನ (Cm siddaramaiah) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna kharge) ಭೇಟಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಮ್ಮ ಮನೆಗೆ ಬರುತ್ತೇನೆ ಅಂದಿದ್ದರು.ಆಗ ನಾನೇ ಆರೋಗ್ಯ ವಿಚಾರಿಸಲು ನಾನೇ ಬರುತ್ತೇನೆ ಅಂದೆ.ಅವರನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ,ಇದು ಸೌಜನ್ಯದ ಭೇಟಿ ಅಷ್ಟೇ ಎಂದಿದ್ದಾರೆ. ಆದ್ರೆ ಹೈನಿ ಟ್ರ್ಯಾಪ್ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇನ್ನು ಸರ್ಕಾರಕ್ಕೆ ಎರಡು ವರ್ಷ ತುಂಬಿದಕ್ಕೆ ಪ್ಲಾನ್ ನಡೆಯುತ್ತಿರುವ ವಿಚಾರವಾಗಿ, ಅವರೇ ದೆಹಲಿಗೆ ಬರ್ತೇನೆ ಅಂತ ಹೇಳಿದ್ದಾರೆ.ಇದರ ಬಗ್ಗೆ ಅಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಪಕ್ಷದ ಆಂತರಿಕ ತಿಕ್ಕಾಟದ ಬಗ್ಗೆ ಮೇಲ್ನೋಟಕ್ಕೆ ಭಾಸವಾಗುತ್ತಿದ್ದರೂ ಖರ್ಗೆ ಏನನ್ನೂ ಬಿಟ್ಟುಕೊಟ್ಟಿಲ್ಲ .