ಮುಖದ ಸೌಂದರ್ಯ ಹೆಚ್ಚಿಸಲು ಕಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ..ಯಾವುದೆ ವ್ಯಕ್ತಿಯನ್ನು ನೋಡುವಾಗ ಹಾಗೂ ಮಾತನಾಡುವಾಗ ಜನ ಗಮನಿಸೋದು ಕಣ್ಣುಗಳನ್ನ..ಇನ್ನು ಕಣ್ಣುಗಳ ಅಂದವನ್ನು ಹೆಚ್ಚು ಮಾಡುವುದು ರೆಪ್ಪೆಗಳು..ಹಾಗೂ ಹುಬ್ಬು ಕೆಲವರಿಗೆ ದಟ್ಟವಾದ ಹುಬ್ಬು – ರೆಪ್ಪೆಗಳಿರುತ್ತವೆ..ಅವು ಕಣ್ಣುಗಳನ್ನು ಇನ್ನಷ್ಟು ಚಂದವಾಗಿಸುತ್ತದೆ..ಇನ್ನು ಕೆಲವರಿಗೆ ತುಂಬಾ ತೆಳುವಾದ ರೆಪ್ಪೆಗಳಿರುತ್ತವೆ..ಅಂಥವರು ಈ ರೆಮಿಡಿಯನ್ನ ಬಳಸುವುದರಿಂದ ಕಪ್ಪಾದ ರೆಪ್ಪೆ ಹಾಗೂ ಹುಬ್ಬುಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ವಿಟಮಿನ್ ಇ ಆಯ್ಲ್
ಪ್ರತಿದಿನ ರಾತ್ರಿ ಮಲಗುವ ಮುನ್ನ ವಿಟಮಿನ್ ಇ ಆಯಿಲ್ ಅನ್ನ ನಿಮ್ಮ ಹುಬ್ಬುಗಳಿಗೆ ಹಾಗೂ ಕಣ್ಣಿನ ರೆಪ್ಪೆಯ ಮೇಲೆ ಹಚ್ಚುವುದರಿಂದ ಕಪ್ಪದ ಹಾಗೂ ದಟ್ಟವಾದ ಹುಬ್ಬುಗಳು ನಿಮ್ಮದಾಗುತ್ತವೆ ಮಾತ್ರವಲ್ಲದೆ ಕಣ್ಣಿನ ಸುತ್ತ ಇರುವಂತಹ ಕಪ್ಪು ಕಲೆಗಳು ಕೂಡ ನಿವಾರಣೆಯಾಗುತ್ತದೆ.

ಕೋಕೋ ಪೌಡರ್
ಅರ್ಧ ಟೇಬಲ್ ಸ್ಫೂನಷ್ಟು ಕೋಕೋ ಪೌಡರ್ ಅನ್ನು ಆಲಿವ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ನಂತರ ಆ ಮಿಶ್ರಣವನ್ನು ನಿಮ್ಮ ಹುಬ್ಬುಗಳು ಹಾಗೂ ಕಣ್ಣಿನ ರೆಪ್ಪೆಗಳಿಗೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ. ಐಬ್ರೋಸ್ ಮತ್ತು ಲ್ಯಾಶಸ್ ಡಾರ್ಕ್ ಆಗುತ್ತದೆ.

ತ್ರಿಫಲ ಪುಡಿ
ತ್ರಿಫಲ ಪುಡಿ ತುಂಬಾನೇ ಒಳ್ಳೆಯದು. ಇದನ್ನು ಕೊಬ್ಬರಿ ಎಣ್ಣೆ ಜೊತೆಗೆ ಮಿಕ್ಸ್ ಮಾಡಿ ಪ್ರತಿದಿನ ಆ ಮಿಶ್ರಣವನ್ನು ಹುಬ್ಬುಗಳಿಗೆ ಮತ್ತು ಲಾಸಸ್ ಗಳಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ವಾಶ್ ಮಾಡಿ.
