• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮನೆ ಊಟಕ್ಕೆ ದರ್ಶನ್​ ಅರ್ಜಿ; ಜು.25ಕ್ಕೆ ಆದೇಶ..

ಪ್ರತಿಧ್ವನಿ by ಪ್ರತಿಧ್ವನಿ
July 22, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ಮನೆ ಊಟಕ್ಕೆ ದರ್ಶನ್​ ಅರ್ಜಿ; ಜು.25ಕ್ಕೆ ಆದೇಶ..
Share on WhatsAppShare on FacebookShare on Telegram

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ(Renuka Swamy Murder Case A2 Darshan) ಎ2 ಆಗಿರುವ ದರ್ಶನ್​ ಅವರು ಮನೆ ಊಟ, ಹಾಸಿಗೆ ಹಾಗೂ ಪುಸ್ತಕ ಕೋರಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಇಂದು ನಡೆಯಿತು. ಬೆಂಗಳೂರಿನ ಆರ್ಥಿಕ ಅಪರಾಧಗಳ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಮಾಡಲಾಯಿತು. ದರ್ಶನ್​ ಪರ ವಕೀಲ ರಾಘವೇಂದ್ರ (Raghavendra) ಅವರು ವಾದ ಮಂಡಿಸಿದರು. ಆದರೆ ಕೊಲೆ ಆರೋಪಿಗೆ ಈ ಸೌಕರ್ಯಗಳನ್ನು ನೀಡಲು ಸಾಧ್ಯವಿಲ್ಲ ಎಂದು ಪೊಲೀಸರ ಪರ ವಕೀಲರಾದ ಎಸ್​ಪಿಪಿ ಪ್ರಸನ್ನ ಕುಮಾರ್ ವಾದಿಸಿದರು. ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್(Justice Vishwanath C Goudar) ಅವರು ಆದೇಶ ಕಾಯ್ದಿರಿಸಿದ್ದಾರೆ. ಜು.25ರಂದು(July 25) ತೀರ್ಪು ಬರಲಿದೆ.

ADVERTISEMENT

‘ಸ್ಟಾರ್(Star) ಎಂಬ ಕಾರಣಕ್ಕೆ ಕೈದಿಯ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಹಾಗಾಗಿ ದರ್ಶನ್​ ಅವರಿಗೆ ಮನೆ ಊಟ ನೀಡಲು ಅವಕಾಶ ಕಲ್ಪಿಸಬೇಕು’ ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು. ‘ಸ್ಟಾರ್ ಎಂಬ ಕಾರಣಕ್ಕೆ ನಿರಾಕರಿಸುತ್ತಿಲ್ಲ. ಕೊಲೆ ಆರೋಪಿಯಾದ ಕಾರಣಕ್ಕೆ ನಿರಾಕರಿಸಬೇಕು’ ಎಂದು ಪೊಲೀಸರ ಪರ‌ ವಕೀಲರು ವಾದ ಮುಂದಿಟ್ಟರು. ಜೈಲು ಊಟದ‌ ಜೊತೆಗೆ ಹೆಚ್ಚಿನ ಪ್ರೊಟೀನ್ ಬೇಕು ಎಂದು ದರ್ಶನ್​ ಕೇಳಿದ್ದಾರೆ. ವ್ಯಾಯಾಮ ಮಾಡುತ್ತಿರುವುದರಿಂದ‌ ಪ್ರೊಟೀನ್​ ಬೇಕೆಂದು ಕೇಳಿದ್ದಾರೆ‌. ತಮ್ಮ ದೇಹದ ತೂಕ 10 ಕೆಜಿ ಇಳಿದಿದೆ, ಹೀಗಾಗಿ‌ ಮನೆ‌ ಊಟ ಬೇಕು ಎಂದು ಅವರು ಕೋರಿದ್ದಾರೆ. ‘ಜೈಲಿನಲ್ಲಿ ಇರುವವರಿಗೆ ಎಲ್ಲಾ‌ ಮೂಲಭೂತ ಹಕ್ಕು ಸಿಗುವುದಿಲ್ಲ. ಮೂಲಭೂತ ಹಕ್ಕಿನ‌ ಕೆಲ ಅಂಶಗಳು ಮಾತ್ರ ಸಿಗುತ್ತವೆ’ ಎಂದು ಸುಪ್ರೀಂ ಕೋರ್ಟ್​ನ(Supreme Court) ತೀರ್ಪು ಉಲ್ಲೇಖಿಸಿ ಎಸ್​​ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.

ಚಾರ್ಲ್ಸ್‌ ಶೋಭರಾಜ್ ತೀರ್ಪಿನಲ್ಲೂ (Charles Shobharaj) ಸಂಪೂರ್ಣ ಹಕ್ಕುಗಳಿಲ್ಲ ಎಂದು ಹೇಳಲಾಗಿದೆ. ಜೈಲು ಕೈಪಿಡಿಯಲ್ಲಿ‌ ಮನೆ‌ ಊಟಕ್ಕೆ ಅವಕಾಶವಿಲ್ಲ. ಬಡವ, ಶ್ರೀಮಂತ, ಹೀರೋ, ಸ್ಟಾರ್ ಎಲ್ಲರೂ ಸಮಾನರೇ. ಸಿನಿಮಾ ಸ್ಟಾರ್ ಎಂದು ತಾರತಮ್ಯ ಮಾಡುವಂತಿಲ್ಲ. ಜೈಲಿನಲ್ಲಿ ಐದು ಸಾವಿರಕ್ಕೂ ಅಧಿಕ ಕೈದಿಗಳಿದ್ದಾರೆ. ಹೀಗಾಗಿ ಈ ಕೇಸಿನಲ್ಲಿ ಯಾವುದೇ ವಿಶೇಷ ವಿನಾಯಿತಿ ನೀಡದಂತೆ ಪ್ರಸನ್ನ ಕುಮಾರ್​ (Prasanna Kumar) ಮನವಿ ಮಾಡಿದರು.

ಆಹಾರ ಜೀರ್ಣವಾಗುತ್ತಿಲ್ಲ ಹಾಗೂ ಭೇದಿ ಆಗಿದೆ ಎಂದು ದರ್ಶನ್​ ಪರ ವಕೀಲರು ವಾದ ಮಂಡಿಸಿದ್ದಾರೆ. ವೈದ್ಯರ ವರದಿಯನ್ನು ಕೋರ್ಟ್​ಗೆ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಒಂದು ಬಾರಿಯೂ ಭೇದಿಯಾಗಿದೆ ಎಂದು ವೈದ್ಯರಿಗೆ ಹೇಳಿಲ್ಲ. ಆಹಾರ ಜೀರ್ಣವಾಗುತ್ತಿಲ್ಲ ಎಂದು ಕೂಡ ದರ್ಶನ್ ಹೇಳಿಲ್ಲ. ಕೇವಲ ಶೂಟಿಂಗ್ ವೇಳೆ ಆದ ಗಾಯಕ್ಕೆ ಫಿಸಿಯೋಥೆರಪಿ ಕೇಳಿದ್ದಾರೆ. ಸೊಂಟ, ಕಾಲಿಗೆ ಆದ ಗಾಯದ ಬಗ್ಗೆ ಮಾತ್ರ ದರ್ಶನ್ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಜೈಲೂಟದಿಂದ ಸಮಸ್ಯೆ ಆಗಿದೆ‌ ಎಂಬ ವಾದದಲ್ಲಿ ಹುರುಳಿಲ್ಲ ಎಂದು ಜೈಲು ಅಧಿಕಾರಿಗಳ ವರದಿ ಉಲ್ಲೇಖಿಸಿ ಎಸ್​ಪಿಪಿ ವಾದಿಸಿದರು.

Tags: DarshanDarshan ArrestDarshan Gang
Previous Post

ಕಮಲಾ ಹ್ಯಾರಿಸ್‌ ಅವರನ್ನು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹುದ್ದೆಗೆ ಅನುಮೋದಿಸಿದ ಜೋ ಬಿಡೆನ್‌..

Next Post

ಚೆಲುವಣ್ಣನ ಮುಂದೆ ಸಿಎಂ ವಿರುದ್ಧ ರೊಚ್ಚಿಗೆದ್ದ ರೈತರು..!

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
Next Post

ಚೆಲುವಣ್ಣನ ಮುಂದೆ ಸಿಎಂ ವಿರುದ್ಧ ರೊಚ್ಚಿಗೆದ್ದ ರೈತರು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada