
ಸ್ಯಾಂಡಲ್ ವುಡ್ ಟಾಕ್ಸಿಕ್ ಚಿತ್ರಕ್ಕೆ ಹಾಲಿವುಡ್ ಟಚ್ ನೀಡಲಾಗ್ತಿದೆ. ಕನ್ನಡದ ಚಿತ್ರಕ್ಕೆ ಮೊದಲ ಬಾರಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಫೈಟ್ ಕಂಪೋಸ್ ಮಾಡಿದ್ದಾರೆ. ರಾಕಿಭಾಯ್ಗೆ ಆಕ್ಷನ್ ಸೀಕ್ಷೇನ್ಸ್ ಡೈರೆಕ್ಷನ್ ಮಾಡಿ ತಾಯ್ನಾಡಿಗೆ ವಾಪಸ್ಸಾದ ಜೆಜೆ ಪೆರ್ರಿ.
ಜೆಜೆ ಪೆರ್ರಿ ಹಾಲಿವುಡ್ ಸೂಪರ್ ಸ್ಟಾರ್ ಸ್ಟಂಟ್ ಮಾಸ್ಟರ್ ಆಗಿದ್ದು, ಟಾಕ್ಸಿಕ್ ಚಿತ್ರದ ಫೈಟ್ ಸೀಕ್ವೆನ್ಸ್ ಚಿತ್ರೀಕರಣಕ್ಕಾಗಿ ಇಂಡಿಯಾಗೆ ಬಂದಿದ್ದ ಜೆಜೆ ಪೆರ್ರಿ. ಟಾಕ್ಸಿಕ್ಸ್ ಚಿತ್ರದ ಶೂಟಿಂಗ್ ಮುಗಿಸಿ ಮತ್ತೆ ಹಾಲಿವುಡ್ಗೆ ವಾಪಸ್ಸಾಗಿದ್ದಾರೆ ಸ್ಟಂಟ್ ಮಾಸ್ಟರ್ ಪೆರ್ರಿ.

ಮುಂಬೈನಲ್ಲಿ ಟಾಕ್ಸಿಕ್ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ಗಳ ಕಂಪೋಸ್ ಮಾಡಿದ್ದಾರೆ ಪೆರ್ರಿ. ಸದ್ಯ ಬೆಂಗಳೂರಿನಲ್ಲಿ ಟಾಕ್ಸಿಕ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ರಾಕಿಭಾಯ್ ಯಶ್ ಬ್ಯುಸಿ ಆಗಿದ್ದಾರೆ. ನಿರಂತರವಾಗಿ ಟಾಕ್ಸಿಕ್ ಚಿತ್ರವನ್ನು ಶೂಟ್ ಮಾಡಲಾಗ್ತಿದೆ. ಲಕ್ಕಿ ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನ ಮಾಡ್ತಿದ್ದಾರೆ.
ಮುಂದಿನ ವರ್ಷ ಟಾಕ್ಸಿಕ್ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದು, ಕೆಜಿಎಫ್ ಗೆಲುವಿನ ಬಳಿಕ ಟಾಕ್ಸಿಕ್ ಕೂಡ ಅದೇ ರೀತಿ ಹಿಟ್ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ನಿರ್ಮಾಣ ಸೇರಿದಂತೆ ಯಾವುದೇ ವಿಚಾರದಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಸೋಲದಂತೆ ಎಚ್ಚರ ವಹಿಸಲಾಗಿದೆ.












