ತೀರ್ಥಹಳ್ಳಿಯಲ್ಲೇ ಘಟನೆಗಳಿಗೆ ಲಿಂಕ್ ಇರುವುದು ನಾನು ಗೃಹ ಸಚಿವ ಆಗಿರೋದು ದುರಂತ ಎಂದು ಆರಗ ಜ್ಞಾನೇಂದ್ರ ವಿಷಾದಿಸಿದ್ದಾರೆ.
ಪೊಲೀಸರು ನಾಲ್ಕು ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಶಾರೀಖ್ ಸಂಬಂಧಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ.ಶಾರೀಕ್ ಸಂಬಂಧಿಸಿದಂತೆ ಕೆಲ ವಸ್ತುಗಳನ್ನ ಹುಡುಕಲು ದಾಳಿ ಮಾಡಿದ್ದಾರೆ.
ಮನೆಯಲ್ಲಿ ಕೆಲ ವಸ್ತುಗಳು ಸಿಕ್ಕಿದೆ. ಅದರ ಅನಾಲಿಸಿಸ್ ಆಗಬೇಕಿದೆ.ಘಟನೆ ಸಂಬಂಧ ಸಮಗ್ರ ತನಿಖೆ ಆಗುತ್ತೆ. ಈ ಹಿಂದಿನ ಸರ್ಕಾರಗಳು ಎಫ್ಐಆರ್ ದಾಖಲು ಮಾಡಿ, ಸುಮ್ಮನಾಗುತ್ತಿದ್ದರು. ಮೋದಿ ಸರ್ಕಾರ ಬಂದಮೇಲೆ ಉಗ್ರರ ಜನ್ಮ ಜಾಲಾಡುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ಗೆ ಚಾಟಿ ಬೀಸಿದ್ದಾರೆ.

ಉಗ್ರ ಚಟುವಟಿಕೆ ಸಂಘಟನೆ, ಹಣ ವರ್ಗಾವಣೆ ಬಗ್ಗೆ ಸಮಗ್ರ ತನಿಖೆಯಾಗುತ್ತಿದೆ. ಕರಾವಳಿ ಮಲೆನಾಡಿಗೆ ಬಹಳ ದೊಡ್ಡ ಲಿಂಕ್ ಇದೆ. ಆ ಲಿಂಕ್ ಅನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಚಲನವಲನಗಳ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದರು. ತನಿಖೆ ಮಾಡುತ್ತಿದ್ದರು. ತೀರ್ಥಹಳ್ಳಿಗೆ ಕರಾವಳಿ, ಕೇರಳ ಹಾಗೂ ಮತೀಯ ಲಿಂಕ್ ಇದೆ ಎಂದು ಶಂಕಿಸಿದ್ದಾರೆ.
ಮಂಗಳೂರು ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬ್ಲಾಸ್ಟ್ ವೇಳೆ ಶಾರೀಕ್ ಗಾಯಗೊಂಡಿದ್ದಾನೆ. ಶಾರೀಖ್ ದೇಹ ಶೇ.45 ರಷ್ಟು ಬರ್ನ್ ಆಗಿದೆ. ಉಸಿರಾಟ ಕಷ್ಟ ಆಗಿದ್ದು, ಗಂಟಲಿಗೆ ಪೈಪ್ ಹಾಕಿದ್ದಾರೆ. ಆತ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಇನ್ನೂ ಮುರ್ನಾಲ್ಕು ದಿನಗಳು ಮಾತನಾಡೋಕೆ ಅಗಲ್ಲ ಜೀವಕ್ಕೆ ಅಪಾಯ ಇಲ್ಲ. ಉತ್ತಮ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು ಭಯೋತ್ಪಾದಕ ಚಟುವಟಿಕೆಯ ಮೂಲವನ್ನು ಅಮೂಲಾಗ್ರ ತನಿಖೆ ಮೂಲಕ ಕೆದಕಲಾಗುತ್ತಿದೆ. ಭಯೋತ್ಪಾದಕತೆಯನ್ನು ಕಿತ್ತು ಹಾಕುತ್ತೇವೆ. ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತರೋರು ಈಗಲೂ ಇದ್ದಾರೆ. ಈ ಹಿಂದೆ ದೀಪಾವಳಿಗೆ ಪಟಾಕಿ ಸಿಡಿಸಿದಂತೆ ಬಾಂಬ್ ಸಿಡಿಸುತ್ತಿದ್ದರು. ಮೋದಿ ಸರ್ಕಾರ ಬಂದ ಮೇಲೆ ವಿಶೇಷ ತಂಡ ಮಾಡಿ, ಸಮಗ್ರ ತನಿಖೆ ಮಾಡ್ತಿದೆ. ಹೀಗಾಗಿಯೇ ಎಲ್ಲರೂ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಯಾವ ಜಾಲವನ್ನು ಬಿಡಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.