• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಹಿರೋಷಿಮಾ-ನಾಗಸಾಕಿ-ಕಲಿಯಬೇಕಾದ ನೈತಿಕ ಪಾಠಗಳು – ಭಾಗ 2

ನಾ ದಿವಾಕರ by ನಾ ದಿವಾಕರ
August 6, 2023
in ಅಂಕಣ, ಅಭಿಮತ
0
ಹಿರೋಷಿಮಾ-ನಾಗಸಾಕಿ-ಕಲಿಯಬೇಕಾದ ನೈತಿಕ ಪಾಠಗಳು – ಭಾಗ 2
Share on WhatsAppShare on FacebookShare on Telegram

ಯುದ್ಧೋನ್ಮಾದದ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಒಂದು ಮುನ್ನೆಚ್ಚರಿಕೆಯ ಮಾತುಗಳು

ADVERTISEMENT

ಮೂರನೆಯ ಪಾಠ : ಪ್ರತೀಕಾರ ಮತ್ತು ಸೇಡು

ಯುದ್ಧವು ನಮ್ಮ ಬಗ್ಗೆ ನಮಗೆ ಕಲಿಸುತ್ತದೆ ಎಂದು ನಾನು ಭಾವಿಸುವ ಅಂತಿಮ ಪಾಠವು ನಮ್ಮ ಮನೋವಿಜ್ಞಾನದ ಪ್ರತೀಕಾರಾತ್ಮಕ-ಸೇಡಿನ ಭಾಗವನ್ನು ಹೊರತರುತ್ತದೆ.

1939ರ ಸೆಪ್ಟೆಂಬರ್ 1ರಂದು, ಬ್ರಿಟನ್ ಜರ್ಮನಿಯ ಮೇಲೆ ಯುದ್ಧ ಘೋಷಿಸುವ ಎರಡು ದಿನಗಳ ಮುನ್ನ  ಅಧ್ಯಕ್ಷ ರೂಸ್‌ವೆಲ್ಟ್ ರೇಡಿಯೋದಲ್ಲಿ ಭಾಷಣ ಮಾಡಿದರು. ಮುಂಬರುವ ಸಂಘರ್ಷದಲ್ಲಿ ಯಾವುದೇ ಪಾತ್ರವಿಲ್ಲದ ಲಕ್ಷಾಂತರ ಜನರು ಇದಕ್ಕೆ ಬಲಿಯಾಗುತ್ತಾರೆ ಎಂದು ರೂಸ್‌ವೆಲ್ಟ್‌ ಆತಂಕ ವ್ಯಕ್ತಪಡಿಸಿದರು. ರೂಸ್‌ವೆಲ್ಟ್‌, ಯುರೋಪಿಯನ್ ರಾಷ್ಟ್ರಗಳಿಗೆ ಮನವಿ ಸಲ್ಲಿಸಿ ತಮ್ಮ ಸಶಸ್ತ್ರ ಪಡೆಗಳು ಯಾವುದೇ ಸಂದರ್ಭದಲ್ಲಿ ಆದರೂ ಸಹ ನಾಗರಿಕ ಜನಸಂಖ್ಯೆಯ ಮೇಲೆ ವಾಯು ಬಾಂಬ್ ದಾಳಿಯನ್ನು ಕೈಗೊಳ್ಳುವುದಿಲ್ಲ ಎಂದು ದೃಢೀಕರಿಸಲು ಕರೆ ನೀಡಿದರು.

ಅಮೆರಿಕವನ್ನೂ ಸೇರಿದಂತೆ 1945ರ ಜುಲೈ ವೇಳೆಗೆ ಜಪಾನಿನ 66 ನಗರಗಳ ಮೇಲೆ ಬಾಂಬ್ ದಾಳಿ ನಡೆಸಿದ ಯಾವ ದೇಶವೂ ಈ ಉನ್ನತ ತತ್ವವನ್ನು ಗೌರವಿಸಲಾಗಲಿಲ್ಲ. ತತ್ವಜ್ಞಾನಿ ಎ.ಸಿ. ಗ್ರೇಲಿಂಗ್ ತನ್ನ ಪುಸ್ತಕ Among the Dead Cities ನಲ್ಲಿ, ಮಿತ್ರರಾಷ್ಟ್ರಗಳು ನಾಗರಿಕರ ಮೇಲೆ ಬಾಂಬ್ ದಾಳಿ ಮಾಡದಿರುವ ಈ ಉದಾತ್ತ ತತ್ವದಿಂದ ಹೇಗೆ ದೂರ ಸರಿದವು ಎಂಬುದನ್ನು ವಿವರಿಸುತ್ತಾರೆ. ನೌಕಾಯಾನ ಮತ್ತು ನಿರ್ದಿಷ್ಟ ಬಾಂಬ್ ದಾಳಿಯ ಗುರಿಯನ್ನು ನಿರ್ಧರಿಸುವ ಸಮಸ್ಯೆಗಳಿಂದಾಗಿ ನಿಖರವಾದ ಗುರಿಗಳ ಮೇಲೆ ದಾಳಿ ನಡೆಸುವುದು ಕಷ್ಟಕರವಾಗಿತ್ತು, ವಿಶೇಷವಾಗಿ ಯುರೋಪ್‌ನಲ್ಲಿ ಯುದ್ಧದ ಆರಂಭಿಕ ವರ್ಷಗಳಲ್ಲಿ ತಂತ್ರಜ್ಞಾನಗಳು ಕಡಿಮೆ ಮುಂದುವರೆದಿದ್ದುದು ಹಾಗೂ ಆಕಾಶದಲ್ಲಿ ಆಗಾಗ್ಗೆ ಮೋಡ ಕವಿದಿದ್ದುದು ಕಾರಣವಾಗಿತ್ತು. ಮತ್ತೊಂದೆಡೆ  ಪ್ರತೀಕಾರದ ಹಿಂಸಾಚಾರದ ತೀವ್ರತೆ ಹೆಚ್ಚಾಗಿದ್ದುದರಿಂದಲೂ  ಈ ದೂರಸರಿಯುವಿಕೆಗೆ ಕಾರಣವಾಗಿತ್ತು.

ಯುರೋಪಿನ ಈ ಉದಾಹರಣೆಯನ್ನು ಪರಿಗಣಿಸಿರಿ. ಆಗಸ್ಟ್ 24, 1940ರ ರಾತ್ರಿ ಜರ್ಮನ್ ಬಾಂಬರ್‌ಗಳ ಗುಂಪು ಆಕಸ್ಮಿಕವಾಗಿ ಲಂಡನ್ ಮೇಲೆ ಬಾಂಬ್‌ ದಾಳಿ ನಡೆಸಿತ್ತು. ಅವರು ವಿಮಾನ ಕಾರ್ಖಾನೆಯ ಮೇಲೆ ದಾಳಿ ಮಾಡಲು ಉದ್ದೇಶಿಸಿದ್ದರು ಆದರೆ ಅವರು ದಾರಿ ತಪ್ಪಿದ್ದರು. ಲಂಡನ್‌ನಲ್ಲಿ, ಬಾಂಬ್ ಸ್ಫೋಟವು ತಪ್ಪು ಎಂದು ಯಾರಿಗೂ ತಿಳಿದಿರಲಿಲ್ಲ. ನಾಗರಿಕರನ್ನು ಕೊಲ್ಲುವುದರ ವಿರುದ್ಧ ಸೂಕ್ಷ್ಮ ನೈತಿಕ ನಿಯಮವು ಬಹುಮಟ್ಟಿಗೆ ಇಲ್ಲವಾಗಿತ್ತು. ಬ್ರಿಟಿಷ್ ವಾರ್‌  ಕ್ಯಾಬಿನೆಟ್ (ಯುದ್ಧ ಸಮಿತಿ) ಪ್ರತೀಕಾರಕ್ಕೆ ಆದೇಶಿಸಿತು. ಮರುದಿನ ರಾತ್ರಿ ಬರ್ಲಿನ್‌ಗೆ ಎಂಬತ್ತೊಂದು ಬಾಂಬರ್‌ಗಳನ್ನು ಕಳುಹಿಸಿತು.

ಈ ಸೇಡಿಗೆ ಸೇಡು ಪ್ರಕ್ರಿಯೆ ಎರಡೂ ಕಡೆಯವರನ್ನು ಮತ್ತಷ್ಟು ನೈತಿಕ ಅಧಃಪತನಕ್ಕೆ ತಳ್ಳಿತು. ಸಾರ್ವಜನಿಕ ಅಭಿಪ್ರಾಯವು ಸಹ  ಕೆಲವೊಮ್ಮೆ ಇದನ್ನೇ ಒತ್ತಾಯಿಸಿತ್ತು. ಒಂದು ಸಂದರ್ಭದಲ್ಲಿ ಚರ್ಚಿಲ್ ಅವರನ್ನು ಅನುಮೋದನೆಯ ಚಪ್ಪಾಳೆಯೊಂದಿಗೆ ಸ್ವಾಗತಿಸಲಾಯಿತು ಅವರು ನೆರೆದಿದ್ದ ಜನಸಮೂಹವನ್ನುದ್ದೇಶಿಸಿ “ಜರ್ಮನ್ನರು ನಮ್ಮ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ನಾವು ಇನ್ನೂ ಹೆಚ್ಚಿನ ಪ್ರಮಾಣದ ದಾಳಿ ನಡೆಸುತ್ತೇವೆ ” ಎಂದು ಹೇಳಿದ್ದರು.

ಬರ್ಲಿನ್‌ನಲ್ಲಿ ಮಾಡಿದ ಭಾಷಣದಲ್ಲಿ ಹಿಟ್ಲರ್‌: “ ಬ್ರಿಟಿಷ್ ವಾಯುಪಡೆಯು ಎರಡು ಸಾವಿರ ಅಥವಾ ಮೂರು ಸಾವಿರ ಕಿಲೋಗ್ರಾಂಗಳಷ್ಟು ಬಾಂಬುಗಳನ್ನು ಹಾಕಿದರೆ, ನಾವು ಒಂದು ಲಕ್ಷ ಐವತ್ತು ಸಾವಿರ, ಎರಡು ಲಕ್ಷ ಮೂವತ್ತು ಸಾವಿರ … ಒಂದು ಮಿಲಿಯನ್ ಕಿಲೋಗ್ರಾಂ. … ಅವರು ನಮ್ಮ ನಗರಗಳ ಮೇಲೆ ದಾಳಿ ಮಾಡುತ್ತಾರೆ ಎಂದು ಹೇಳಿದಾಗ, ನಾವು ಅವರ ನಗರಗಳನ್ನು ಅಳಿಸಿಹಾಕುತ್ತೇವೆ.” ಎಂದು ಘೋಷಿಸಿದ್ದ.

ಎರಡನೆಯ ಮಹಾಯುದ್ಧವು ನಿಸ್ಸಂದೇಹವಾಗಿ ಜರ್ಮನ್ ಮತ್ತು ಜಪಾನಿನ ಮಿಲಿಟರಿವಾದವನ್ನು ಸೋಲಿಸುವ ಗುರಿಯನ್ನು ಹೊಂದಿತ್ತು. ಆದರೆ ಒಟ್ಟಾರೆ ಕಾರಣವು ಸರಿಯಾಗಿರಬಹುದು ಎಂಬ ಕಾರಣಕ್ಕಾಗಿಯೇ ಅದನ್ನು ಬೆನ್ನಟ್ಟಲು ಮಾಡಿದ ಎಲ್ಲ ಕ್ರಮಗಳನ್ನೂ ಸಮರ್ಥಿಸಲಾಗುವುದಿಲ್ಲ. ಪ್ರತೀಕಾರವು ಯುದ್ಧದ ಒಟ್ಟಾರೆ ನ್ಯಾಯಕ್ಕೆ ಬೆದರಿಕೆಯೊಡ್ಡಬಹುದು, ಏಕೆಂದರೆ ಇದು ಸಂಪೂರ್ಣವಾಗಿ ಅಗತ್ಯವಿದ್ದ ಸಂದರ್ಭಗಳನ್ನು ಹೊರತುಪಡಿಸಿ ನಾಗರಿಕರನ್ನು ಕೊಲ್ಲುವುದನ್ನು ತಪ್ಪಿಸಬೇಕಾದ ನೈತಿಕ ಅವಶ್ಯಕತೆಯನ್ನು ಮರೆಮಾಡುತ್ತದೆ. ಹಾಗೆಯೇ ಇದು ನಮ್ಮ ಉದಾತ್ತ ಚಿಂತಕರು ಪ್ರತಿಪಾದಿಸುವ ತತ್ವಗಳಿಂದ ನಮ್ಮನ್ನು ದೂರ ಮಾಡುವುದೇ ಅಲ್ಲದೆ “ ಒಂದು ಕಣ್ಣಿಗೆ ಒಂದು ಕಣ್ಣು” ಮನೋಭಾವವು ನಮ್ಮೆಲ್ಲರನ್ನೂ ಅಂಧರನ್ನಾಗಿಸುತ್ತದೆ.

ಅಂತಿಮ ಸಂದೇಶ

ಯುದ್ಧಗಳ ಅಧ್ಯಯನದಿಂದ ಮಾನವ ಸ್ವಭಾವದ ಬಗ್ಗೆ ನಾವು ಕಲಿಯಬಹುದಾದ ಪಾಠಗಳ ಮೂರು ಉದಾಹರಣೆಗಳನ್ನು ನಾನು ನಿಮಗೆ ನೀಡಿದ್ದೇನೆ. ಇತಿಹಾಸದ ಪಾಠಗಳಿಗೆ ಕಿವಿಗೊಡಲು ವಿಫಲವಾದರೆ ಹೇಗೆ ಅಪಾಯದಿಂದ ತುಂಬಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆಯೊಂದಿಗೆ ನಾನು ಕೊನೆಗೊಳಿಸುತ್ತೇನೆ. ಈ ಅಂತಿಮ ಪಾಠವು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ – ಮತ್ತು ಯುದ್ಧದಲ್ಲಿ ಅವುಗಳ ಮೊದಲ ಮತ್ತು ಏಕೈಕ ಬಳಕೆಯ 70 ವರ್ಷಗಳ ನಂತರ, ಅವುಗಳ ಬಗ್ಗೆ ಮರುಚಿಂತನೆ ಮಾಡಲು ಈಗಿರುವುದಕ್ಕಿಂತ ಉತ್ತಮ ಸಮಯ ಯಾವುದಿದೆ  ?

ನಿಮಗೆ ತಿಳಿದಿರುವಂತೆ, ಡೈನಮೈಟ್ ಅನ್ನು ಕಂಡುಹಿಡಿದ ನಂತರ ಆಲ್‌ಫ್ರೆಡ್ ನೊಬೆಲ್ ಪ್ರಾಮುಖ್ಯತೆಗೆ ಬಂದರು. ತದನಂತರ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಿದರು. ನೊಬೆಲ್ ಅವರ ಎರಡು ಪರಂಪರೆಗಳು ಸಾಕಷ್ಟು ಹೊಂದಿಕೆಯಾಗುವುದಿಲ್ಲ ಎಂದು ನೀವು ಭಾವಿಸಬಹುದು. ಆದರೆ ನೊಬೆಲ್ ಹಾಗೆ ಯೋಚಿಸಲಿಲ್ಲ. 1860ರ ದಶಕದಲ್ಲಿ ನೊಬೆಲ್ “ತಮ್ಮ  ಡೈನಮೈಟ್ ಆವಿಷ್ಕಾರವು ವಿಶ್ವದ ಇತರ ಸಾವಿರ ಸಂಪ್ರದಾಯಗಳಿಗಿಂತ ಬೇಗನೆ ಶಾಂತಿಗೆ ಕಾರಣವಾಗುತ್ತದೆ, ಏಕೆಂದರೆ ಒಂದು ಕ್ಷಣದಲ್ಲಿ ಇಡೀ ಸೈನ್ಯವನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಎಂದು ಜನರು ಕಂಡುಕೊಂಡ ತಕ್ಷಣ, ಅವರು ಖಂಡಿತವಾಗಿಯೂ ಶಾಶ್ವತ ಶಾಂತಿಯಲ್ಲಿ ನಂಬಿಕೆ ಇರಿಸುತ್ತಾರೆ ” ಎಂದು ಹೇಳಿದರು.

ದುರದೃಷ್ಟವಶಾತ್ ಆ ಶಾಶ್ವತ ಶಾಂತಿ ಕಾಣಲಾಗಲಿಲ್ಲ . ಹಾರ್ವರ್ಡ್ ಮನಶ್ಶಾಸ್ತ್ರಜ್ಞ ಸ್ಟೀವನ್ ಪಿಂಕರ್ ಅವರು ಜಲಾಂತರ್ಗಾಮಿ ನೌಕೆಗಳು, ಫಿರಂಗಿ ಮತ್ತು ಮಷಿನ್‌ಗನ್ ಪರವಾಗಿ ಇದೇ ರೀತಿಯ ಹೇಳಿಕೆಗಳನ್ನು ನೀಡಲಾಗಿರುವುದರ ಬಗ್ಗೆ ಗಮನಸೆಳೆದಿದ್ದಾರೆ. ರಾಜಕೀಯ ವಿಜ್ಞಾನಿ ಕೆನ್ನೆತ್ ವಾಲ್ಜ್‌ನಂತಹ ಕೆಲವರು ಪರಮಾಣು ಶಸ್ತ್ರಾಸ್ತ್ರಗಳು ಜಗತ್ತನ್ನು ಸುರಕ್ಷಿತವಾಗಿಸುತ್ತದೆ ಎಂದು ವಾದಿಸಿದ್ದಾರೆ. ಏಕೆಂದರೆ ಸಂಭಾವ್ಯ ಆಕ್ರಮಣಕಾರರು ಪರಮಾಣು ವಿನಾಶದಿಂದ ಭಯಭೀತರಾಗುತ್ತಾರೆ.

ಆಗಸ್ಟ್ 6, 1945 ರಂದು, ಅಮೇರಿಕನ್ ಭೌತಶಾಸ್ತ್ರಜ್ಞ ಲೂಯಿಸ್ ಅಲ್ವಾರೆಜ್ ಹಿರೋಷಿಮಾದ ಮೇಲೆ ಪರಮಾಣು ಬಾಂಬ್ ದಾಳಿ ಕಾರ್ಯಾಚರಣೆಯ ಜೊತೆಗಿದ್ದ ಬ್ಯಾಕಪ್ ವಿಮಾನದಲ್ಲಿ ಸವಾರಿ ಮಾಡಿದರು. ಹಿರೋಷಿಮಾ ಸ್ಫೋಟದ ಪ್ರಕಾಶಮಾನವಾದ ಮಿಂಚನ್ನು ಅಲ್ವಾರೆಜ್ ನೋಡಿದರು ಮತ್ತು ಬಾಂಬ್‌ಗಳ ಆಘಾತದ ಅಲೆಗಳ ಎರಡು ತೀಕ್ಷ್ಣವಾದ ಹೊಡೆತಗಳು ವಿಮಾನಕ್ಕೆ ಅಪ್ಪಳಿಸಿದವು. ಟಿನಿಯನ್ ದ್ವೀಪದ ನೆಲೆಗೆ ಹಿಂದಿರುಗುವಾಗ ಅಲ್ವಾರೆಜ್ ತನ್ನ ನಾಲ್ಕು ವರ್ಷದ ಮಗ ವಾಲ್ಟರ್‌ಗೆ ತನ್ನ ಅನುಭವದ ಬಗ್ಗೆ ಪತ್ರ ಬರೆಯುತ್ತಾರೆ. “ಇಂದು ಬೆಳಿಗ್ಗೆ ಸಾವಿರಾರು ಜಪಾನಿನ ನಾಗರಿಕರನ್ನು ಕೊಲ್ಲುವ ಮತ್ತು ಅಂಗವೈಕಲ್ಯಗೊಳಿಸುವ ಕ್ರಿಯೆಯಲ್ಲಿ ಭಾಗವಾಗಿರುವುದಕ್ಕೆ ನನಗೆ ವಿಷಾದವಿದೆ, ನಾವು ರಚಿಸಿದ ಈ ಭಯಾನಕ ಶಸ್ತ್ರಾಸ್ತ್ರವು ವಿಶ್ವದ ದೇಶಗಳನ್ನು ಒಟ್ಟುಗೂಡಿಸಬಹುದು ಮತ್ತು ಹೆಚ್ಚಿನ ಯುದ್ಧಗಳನ್ನು ತಡೆಯಬಹುದು ಎಂಬ ಭರವಸೆಯೊಂದಿಗೆ” ಎಂದು ಪತ್ರದಲ್ಲಿ ಹೇಳುತ್ತಾರೆ. ಡೈನಮೈಟ್ ಯುದ್ಧಗಳನ್ನು ನಿಲ್ಲಿಸುತ್ತದೆ ಎಂಬ ಆಲ್ಫ್ರೆಡ್‌ ನೊಬೆಲ್‌ನ ಭವಿಷ್ಯವಾಣಿಯ ಬಗ್ಗೆ ಅಲ್ವಾರೆಜ್ ಬರೆದಿದ್ದಾರೆ ಆದರೆ ಅದು ನಿಜವಾಗಲಿಲ್ಲ. ತದನಂತರ ಅವರು  “ ನೊಬೆಲ್ ಅವರ ಕನಸನ್ನು ನನಸಾಗಿಸುವುದಕ್ಕಿಂತಲೂ ನಮ್ಮ ಹೊಸ ವಿನಾಶವು ಸಾವಿರಾರು ಪಟ್ಟು ಕೆಟ್ಟದಾಗಿದೆ ” ಎಂದು ಹೇಳುತ್ತಾರೆ.

ಇತಿಹಾಸದ ಪಾಠಗಳನ್ನು ಕಲಿಯಲು ವಿಫಲವಾದ ಒಂದು ಪರಿಪೂರ್ಣ ಉದಾಹರಣೆ ಇಲ್ಲಿದೆ ಎಂದು ನಾನು ಭಾವಿಸುತ್ತೇನೆ. ಎರಡೂ ಅವಿಷ್ಕಾರಗಳ ನಂತರ ಹಾಗೂ ಡೈನಮೈಟ್ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯ ನಂತರ ತಂತ್ರಜ್ಞಾನಗಳು ಬದಲಾದವು ಮತ್ತು ವಿನಾಶಕಾರಿ ಶಕ್ತಿ ಹೆಚ್ಚಾಗಿತ್ತು. ಆದರೆ ಮಾನವ ಸ್ವಭಾವವು ಹಾಗೆ ಬೆಳೆಯುವುದು ಸಾಧ್ಯವಿಲ್ಲ ಎಂಬ ವಾಸ್ತವವನ್ನು ನೊಬೆಲ್ ಮತ್ತು ಅಲ್ವಾರೆಜ್ ಗಮನಿಸಲು ವಿಫಲವಾಗಿದ್ದರು. ಅಂತಹ ಆಯುಧಗಳನ್ನು ಬಳಸಲು ನಿರ್ಧರಿಸುವ ಜನರು ಇನ್ನೂ ಪ್ರಾಚೀನವಾದ, ಸೇಡಿನ ಕ್ರಮದ ಅಥವಾ ಎಲ್ಲಾ ರೀತಿಯ ತಪ್ಪು ಕಲ್ಪನೆಗಳಿಗೆ ಒಳಗಾಗುತ್ತಾರೆ. ಹಾಗೂ ಪರಮಾಣು ಶಸ್ತ್ರಾಸ್ತ್ರಗಳಿಂದ  ಜಗತ್ತಿನಲ್ಲಿ ಒಂದು ಅಪಘಾತವೂ ಸಹ ಮಹಾವಿನಾಶಕ್ಕೆ ಕಾರಣವಾಗಬಹುದು. 

1960ರ ದಶಕದಲ್ಲಿ ಹೊಸ ಪರಮಾಣು ಶಸ್ತ್ರಾಸ್ತ್ರಗಳು, ಹೈಡ್ರೋಜನ್ ಬಾಂಬ್‌ಗಳು ಅಭಿವೃದ್ಧಿಪಡಿಸಲ್ಪಟ್ಟವು. ಅದು ಹಿರೋಷಿಮಾದ ಮೇಲೆ ಹಾಕಿದ ಬಾಂಬ್‌ಗಳ ಸಾವಿರ ಪಟ್ಟು ವಿನಾಶಕಾರಿ ಶಕ್ತಿಯನ್ನು ಹೊಂದಿದ್ದವು.  ಟೈಟಾನ್-2 ಕ್ಷಿಪಣಿಯು ಎರಡನೇ ಮಹಾಯುದ್ಧದಲ್ಲಿ ಜಪಾನ್ ಮೇಲೆ ಹಾಕಲಾದ ಎರಡು ಪರಮಾಣು ಬಾಂಬ್‌ಗಳನ್ನೂ ಸೇರಿದಂತೆ ಒಟ್ಟು ಎಲ್ಲಾ ಬಾಂಬುಗಳಿಗಿಂತ ಮೂರು ಪಟ್ಟು ಹೆಚ್ಚು ವಿನಾಶಕಾರಿ ಶಕ್ತಿಯನ್ನು ಹೊಂದಿರುವ Warhead ಹೊಂದಿತ್ತು.

ಬಹುಶಃ ಯುದ್ಧದ ಇತಿಹಾಸಗಳು ನಮಗೆ ಕಲಿಸುವ ಪ್ರಮುಖ ಪಾಠವೆಂದರೆ, ಮಾನವರು ಯಾವಾಗಲೂ ತರ್ಕಬದ್ಧವಾಗಿ ಯೋಚಿಸುವುದಿಲ್ಲ. ಪರಮಾಣು ಅಸ್ತ್ರಗಳು ತುಂಬಿದ ಜಗತ್ತಿನಲ್ಲಿ ಅದು ನಮ್ಮಲ್ಲಿ ಭೀತಿಯನ್ನುಂಟುಮಾಡುತ್ತಿರಬೇಕು.

-೦-೦-೦-೦-

ಅಡಿ ಟಿಪ್ಪಣಿ : (ಅನುವಾದಕ)   ಪರಮಾಣು ಯುದ್ಧ ನಡೆಯುವ ಸಂಭವ ಕಡಿಮೆ ಇದ್ದರೂ, ಪರಮಾಣು ಘಟಕಗಳಿಂದ ಅನೇಕ ಅನಾಹುತಗಳಿಗೆ ಮಾನವ ಸಮಾಜ ಸಾಕ್ಷಿಯಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಮೂರು ಘಟನೆಗಳನ್ನು ಉಲ್ಲೇಖಿಸಬಹುದು : 28 ಮಾರ್ಚ್‌ 1979ರದು ಪೆನ್ಸಿಲ್ವೇನಿಯಾ ಬಳಿ ಇರುವ ತ್ರೀ ಮೈಲ್‌ ದ್ವೀಪದಲ್ಲಿ ಪರಮಾಣು ಘಟಕವೊಂದರ ರಿಯಾಕ್ಟರ್‌ ಸ್ಪೋಟಗೊಂಡು, ಆನಂತರ ರೇಡಿಯೇಷನ್‌ ಪರಿಣಾಮದಿಂದಲೇ 300ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದವು. 26 ಏಪ್ರಿಲ್‌ 1986ರಂದು ರಷ್ಯಾದ ಚೆರ್ನೋಬಿಲ್‌ ಪರಮಾಣು ಘಟಕದಲ್ಲಿ ರಿಯಾಕ್ಟರ್‌ ಸ್ಪೋಟಗೊಂದು ರೇಡಿಯೇಷನ್‌ ಪರಿಣಾಮವಾಗ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಕೆಲವು ವರ್ಷಗಳ ನಂತರ ಸಾವಿರಾರು ಜನರು ಇದರ ರೇಡಿಯೇಷನ್‌ ಪರಿಣಾಮದಿಂದಲೇ ಕ್ಯಾನ್ಸರ್‌ ಮತ್ತಿತರ ರೋಗಗಳಿಗೆ ತುತ್ತಾಗಿದ್ದಾರೆ. 11 ಮಾರ್ಚ್‌ 2011ರಂದು ಜಪಾನ್‌ನಲ್ಲಿ ಸುನಾಮಿ ಸಂಭವಿಸಿದಾಗ, ಸಮೀಪದ ಫುಕುಷಿಮಾ ದಲಿಚಿ ಪರಮಾಣು ಘಟಕದಲ್ಲಿ ಉಂಟಾದ ರೇಡಿಯೇಷನ್‌ ಸೋರಿಕೆಯ ಪರಿಣಾಮ ಕನಿಷ್ಠ 30ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದೇ ಅಲ್ಲದೆ ನಂತರದ ದಿನಗಳಲ್ಲೂ ಜನರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಅವಘಡದ ನಂತರ ಜಪಾನ್‌ ಪರಮಾಣು ವಿದ್ಯುತ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಈಗ ಪುನಃ ಆರಂಭಿಸಿದೆ. -೦-೦-೦-  

Tags: AmericaHiroshimaJapanNagasakiWorld war 2
Previous Post

ಹಿರೋಷಿಮಾ-ನಾಗಸಾಕಿ-ಕಲಿಯಬೇಕಾದ ನೈತಿಕ ಪಾಠಗಳು-ಭಾಗ 1

Next Post

ಅಫ್ಗಾನಿಸ್ತಾನ | 5.8 ತೀವ್ರತೆಯ ಭೂಕಂಪ ; ದೆಹಲಿ, ಜಮ್ಮು-ಕಾಶ್ಮೀರದಲ್ಲೂ ಭೂಮಿ ಕಂಪನ

Related Posts

Top Story

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
0

“ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳ...

Read moreDetails

ಬಗರ್ ಹುಕುಂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು-ಭೂ ಮಾಫಿಯಾ ವಿರುದ್ಧ ಕ್ರಿಮಿನಲ್ ಪ್ರಕರಣ: ಕೃಷ್ಣ ಬೈರೇಗೌಡ

December 12, 2025

ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ…!! ‌ ಯತೀಂದ್ರಗೆ ಕೌಂಟರ್‌ ನೀಡಿದ ಇಕ್ಬಾಲ್‌ ಹುಸೇನ್.

December 12, 2025

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

December 9, 2025

ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ ಚಾಪರ್, ವಿಮಾನ ಬಾಡಿಗೆ ಕುರಿತ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್‌..

December 9, 2025
Next Post
ಅಫ್ಗಾನಿಸ್ತಾನ

ಅಫ್ಗಾನಿಸ್ತಾನ | 5.8 ತೀವ್ರತೆಯ ಭೂಕಂಪ ; ದೆಹಲಿ, ಜಮ್ಮು-ಕಾಶ್ಮೀರದಲ್ಲೂ ಭೂಮಿ ಕಂಪನ

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada