• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಅಮೆರಿಕಾದಲ್ಲಿ ಹಿಂದುತ್ವವನ್ನು ವಿರೋಧಿಸುತ್ತಿರುವ ಪ್ರಜಾಪ್ರಭುತ್ವವಾದಿ  ಹಿಂದೂಗಳು

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
October 3, 2022
in ಅಭಿಮತ
0
ಅಮೆರಿಕಾದಲ್ಲಿ ಹಿಂದುತ್ವವನ್ನು ವಿರೋಧಿಸುತ್ತಿರುವ ಪ್ರಜಾಪ್ರಭುತ್ವವಾದಿ  ಹಿಂದೂಗಳು
Share on WhatsAppShare on FacebookShare on Telegram

ಇತ್ತೀಚಿಗೆ ಯುಎಸ್‌ನ ನ್ಯೂಜೆರ್ಸಿಯ ಚರ್ಚ್‌ವೊಂದರಲ್ಲಿ ಸಾಧ್ವಿ ರಿತಾಂಬರ ಅವರ ನಿಧಿಸಂಗ್ರಹ ಕಾರ್ಯಕ್ರಮವನ್ನು ಯುಎಸ್ ಹಿಂದುತ್ವವಾದಿಗಳು ಹಮ್ಮಿಕೊಂಡಿದ್ದರು. ಆದರೆ ಅದನ್ನ ಭಾರತೀಯ ವಲಸೆ ವಕಾಲತ್ತು ಗುಂಪುಗಳು ಬಲವಾಗಿ ವಿರೋಧಿಸುವ ಮೂಲಕ ಆ ಕಾರ್ಯಕ್ರಮ ರದ್ದುಗೊಳಿಸುವಂತೆ ಮಾಡಿದವು. ಈ ಕುರಿತು ಭಾರತೀಯ ಡಯಾಸ್ಪೊರಾ ವತಿಯಿಂದ ಸಪ್ತರ್ಷಿ ಬಸಕ್ ಅವರು ‘ದಿ ಕ್ವಿಂಟ್’ ವೆಬ್ ಜರ್ನಲ್ಲಿನಲ್ಲಿ ಇದೇ ೧೮ ಸೆಪ್ಟೆಂಬರ್ ೨೦೨೨ ರಂದು ಒಂದು ವಿವರವಾದ ಲೇಖನವನ್ನು ಪ್ರಕಟಿಸಿದ್ದಾರೆ. ಲೇಖನದುದ್ದಕ್ಕು ಲೇಖಕರು ಯುಎಸ್ ನಲ್ಲಿ ಹಿಂದುತ್ವವಾದಿಗಳ ಜನತಂತ್ರ ವಿರೋಧಿ ಚಟುವಟಿಕೆಗಳ ಕುರಿತು ಅಲ್ಲಿನ ಜನತಂತ್ರವಾದಿ ಭಾರತೀಯರ ಅಭಿಪ್ರಾಯ ಸಂಗ್ರಹಿಸಿ ಕೊಟ್ಟಿದ್ದಾರೆ.

ADVERTISEMENT

ಕೆಲವು ದಿನಗಳ ಹಿಂದೆ ನ್ಯೂಜೆರ್ಸಿಯ ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ (IAMC) ನ ಮಾಜಿ ಅಧ್ಯಕ್ಷ ಮಿನ್ಹಾಜ್ ಖಾನ್ ಅವರನ್ನು ಈ ಕುರಿತು ಪ್ರಶ್ನಿಸಿದಾಗ “ಅವಳೊಬ್ಬ ಮುಸ್ಲಿಮ್ ದ್ವೇಷಿ ವ್ಯಕ್ತಿ” ಎಂದು ಹೇಳಿದ್ದರು. ಚರ್ಚ್‌ನ ರೆವರೆಂಡ್ ರಾಬರ್ಟ್ ಮಿಲ್ಲರ್ ಅವರು ಸಾದ್ವಿ ರಿತಾಂಬರ ಅವರ ನಿಧಿ ಸಂಗ್ರಹ ಕಾರ್ಯಕ್ರಮವನ್ನು ವಿರೋಧಿಸುವ ಕುರಿತು

ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ೧ˌ೦೦೦ ಇಮೇಲ್‌ಗಳು ಮತ್ತು ೧೦೦ ಕ್ಕೂ ಹೆಚ್ಚು ಫೋನ್ ಕರೆಗಳನ್ನು ಹಾಗು ಅಪಾರ ಸಂಖ್ಯೆಯ ಸಂದೇಶಗಳ ಪ್ರವಾಹವನ್ನು ಸ್ವೀಕರಿಸಿದ ನಂತರ ಸೆಪ್ಟೆಂಬರ್ ೧೦ ರಂದು ನಡೆಯಲಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾಗಿ ಕ್ವಿಂಟ್ ವರದಿ ಮಾಡಿದೆ.

ಚರ್ಚ್ ನ ಮುಖ್ಯಸ್ಥರು ಕಾರ್ಯಕ್ರಮಕ್ಕಾಗಿ ಚರ್ಚನ್ನು ಕಾಯ್ದಿರಿಸುವಾಗ ಭಾಷಣಕಾರ್ತಿ ಸಾದ್ವಿ ರಿತಾಂಬರ ಅವರ ಹಿನ್ನೆಲೆ  ನಮಗೆ ತಿಳಿದಿರಲಿಲ್ಲ ಎಂದರಂತೆ. ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ (HfRH), ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ ಮತ್ತು ಕೌನ್ಸಿಲ್ ಆನ್ ಅಮೇರಿಕನ್ ಇಸ್ಲಾಮಿಕ್ ರಿಲೇಶನ್ಸ್ (CAIR-LA) ನಂತಹ ವಕೀಲರ ಗುಂಪುಗಳು ಈ ಕಾರ್ಯಕ್ರಮದ ವಿರುದ್ಧ ವ್ಯಾಪಕ ಪ್ರತಿಭಟನೆಯನ್ನು ನಡೆಸಿದ್ದವಂತೆ. ವಾಸ್ತವವಾಗಿ, ಇದೇ ಸಂಘಟನೆಗಳು ಸೆಪ್ಟೆಂಬರ್ ೧೭ ರ ಸಂಜೆ ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್‌ನಲ್ಲಿ ಸಾದ್ವಿಯ ಮತ್ತೊಂದು ನಿಧಿಸಂಗ್ರಹಣೆ ಕಾರ್ಯಕ್ರಮವನ್ನು ರದ್ದುಗೊಳಿಸಲು ಪ್ರಯತ್ನಿಸಿದ್ದವಂತೆ. ಆದಾಗ್ಯೂ, ಈ ನಿರ್ದಿಷ್ಟ ಕಾರ್ಯಕ್ರಮ ರದ್ದುಗೊಳಿಸಲಾಗಲಿಲ್ಲವಂತೆ.

ಕ್ವಿಂಟ್ ಜರ್ನಲ್ನ ವರದಿಗಾರರು ಐಎಎಂಸಿ ಯ ಮಿನ್ಹಾಜ್ ಖಾನ್ ಮತ್ತು ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಸುನೀತಾ ವಿಶ್ವನಾಥ್ ಅವರನ್ನು ಈ ಕಾರ್ಯಕ್ರಮ ರದ್ದುಗೊಳಿಸಲು ಮಾಡಿದ ಹೋರಾಟದ ಬಗ್ಗೆ ಹಾಗು ಯುಎಸ್‌ನಲ್ಲಿ ಹಿಂದುತ್ವವಾದದ ಅಪಾಯಗಳ ವಿರುದ್ಧ ಭಾರತೀಯ ಅಮೆರಿಕನ್ ಸಮುದಾಯವನ್ನು ಶಾಂತಿಯುತವಾಗಿ ಸಜ್ಜುಗೊಳಿಸುವ ಬಗ್ಗೆ ಸಂದರ್ಶನ ಮಾಡಿದ್ದಾರೆ. ಅದೇ ರೀತಿ ಈ ವರದಿಗಾರರು ಈ ಕುರಿತು ಕೆಲವು ಪ್ರಶ್ನೆಗಳೊಂದಿಗೆ ರೆವರೆಂಡ್ ಮಿಲ್ಲರ್ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರೀಯೆ ನೀಡಿಲ್ಲವಂತೆ. “ಸಾಧ್ವಿ ರಿತಾಂಬರ ಒಬ್ಬ ದ್ವೇಷ ಭಾಷಣಕಾರ್ತಿಯಾಗಿದ್ದು ೧೯೯೨ ರಲ್ಲಿ ಬಾಬರಿ ಮಸೀದಿ ಧ್ವಂಸವನ್ನು ಪ್ರಚೋದಿಸಿದ್ದರು ಮತ್ತು ಆ ವಿಧ್ವಂಸಕ ಕೃತ್ಯದಲ್ಲಿ ಭಾಗವಹಿಸಿದ್ದರು. ಅಂದಿನಿಂದ ಅವರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಅಬ್ಬರದಿಂದ ಮಾತನಾಡುತ್ತಾರೆ. ದ್ವೇಷ ಹರಡಲೆಂದು ಹಾಗು ಭಾರತದ ಹಿಂದುತ್ವವಾದಿ ಆಡಳಿತವನ್ನು ಬಲಪಡಿಸಲೆಂದು ಇಲ್ಲಿಗೆ ಬರುತ್ತಿದ್ದಾರೆ” ಎಂದು HfHR ನ ಸುನಿತಾ ವಿಶ್ವನಾಥ್ ಅವರು ದಿ ಕ್ವಿಂಟ್‌ಗೆ ತಿಳಿಸಿದ ಕುರಿತು ಸಪ್ತರ್ಷಿಯವರು ಉಲ್ಲೇಖಿಸಿದ್ದಾರೆ.

“ಭಿನ್ನಾಭಿಪ್ರಾಯವನ್ನು ಮೊಬಲೈಜ್ ಮಾಡುವ ಹಕ್ಕು ನಮಗಿದೆ. ಆಕೆ ಕೂಡ ಇಲ್ಲಿಗೆ ಬಂದು ಭಾಷಣ ಮಾಡುವ ಹಕ್ಕನ್ನು ಹೊಂದಿರಬಹುದು ಎಂದು ಸುನಿತಾ ವಿಶ್ವನಾಥ ಹೇಳಿರುವ ಬಗ್ಗೆ ಲೇಖಕರು ಬರೆದಿದ್ದಾರೆ. ಅಂತೆಯೇ, IAMC ಯ ಖಾನ್ ಅವರು “ಸಾಧ್ವಿ ರಿತಾಂಬರ ಅವರು ಮುಸ್ಲಿಂ ವಿರೋಧಿ ದ್ವೇಷಿ. ನಮ್ಮದು ಯುಎಸ್ನಲ್ಲಿ ಶಾಂತಿ ಹಾಗು ಪ್ರೀತಿ ಬಯಸುವ ಸಮುದಾಯˌ ಇದು ಭಾರತವಲ್ಲ. ನಾವು ಇಲ್ಲಿ ಹಿಂದುತ್ವದ ದ್ವೇಷ ಹರಡುವುದನ್ನು ಅನುಮತಿಸುವುದಿಲ್ಲ ˌ ಮತ್ತು ಅದರ ವಿರುದ್ಧ ಕಠಿಣವಾಗಿ ಹೋರಾಡುತ್ತದೆ. ಅಮೆರಿಕವು ಪ್ರಪಂಚದ ಎಲ್ಲಾ ವಲಸಿಗರನ್ನು ಸ್ವಾಗತಿಸುತ್ತದೆ ಆದರೆ ಅವರ ಧರ್ಮಾಂಧತೆ ಮತ್ತು ದ್ವೇಷವನ್ನು ಅಲ್ಲ.” ಇವು ರಿತಾಂಬರ ಅವರನ್ನು ವಿರೋಧಿಸುವವರ ಹೇಳಿಕೆಗಳು. ದಿ ಕ್ವಿಂಟ್ ವಿವರಿಸಿದಂತೆ, ೧೯೮೦-೯೦ ದಶಕದ ಆರಂಭದಲ್ಲಿ, ರಿತಾಂಬರ ಹಿಂದುತ್ವದ ಕ್ಯಾಡರ್ ನಲ್ಲಿ ಬೆಳೆದು ಬಾಬರಿ ಮಸೀದಿಯ ವಿವಾದಾತ್ಮಕ ಧ್ವಂಸದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರ ಬಗ್ಗೆ ಲೇಖನದಲ್ಲಿ ವಿವರಗಳಿವೆ.

ಲಿಬರಹಾನ್ ಆಯೋಗವು ದೇಶವನ್ನು “ಕೋಮು ವೈಷಮ್ಯದ ಅಂಚಿಗೆ” ದೂಡುವಲ್ಲಿ ಶ್ರಮಿಸಿದ ಅಪರಾಧಿಗಳೆಂದು ನಮೂದಿಸಿದ ೬೮ ಜನರ ಪಟ್ಟಿಯಲ್ಲಿ ರಿತಾಂಬರ ಅವರ ಹೆಸರೂ ಇತ್ತು. ಆದರೆˌ ಅವರನ್ನು ಅಂತಿಮವಾಗಿ ಸಿಬಿಐ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿಲಾಗಿದ್ದು. ಯುಎಸ್ನ ಭಾರತೀಯ ವಿಭಿನ್ನ ಮೈತ್ರಿಕೂಟವು ಹಿಂದುತ್ಱವಾದಿಗಳಿಗೆ ಸವಾಲು ಹಾಕಿದ್ದು ರಿತಾಂಬರ ಅವರ ಕಾರ್ಯಕ್ರಮ ಆಯೋಜಿಸಬೇಕಿದ್ದ ಓಲ್ಡ್ ಪ್ಯಾರಾಮಸ್ ರಿಫಾರ್ಮ್ಡ್ ಚರ್ಚ್ ಗೆ ಭಾರತದಲ್ಲಿನ ಮುಸ್ಲಿಂ ವಿರೋಧಿ ಧರ್ಮಾಂಧತೆಯ ಕೃತ್ಯಗಳಲ್ಲಿ ಸಾಧ್ವಿ ರಿತಾಂಬರ ಅವರ ಸಹಭಾಗಿತ್ವದ ಬಗ್ಗೆ ವಿವರವಾಗಿ ತಿಳಿಸಿದರೆಂತಲುˌ ಇದರಿಂದ ಪ್ರಭಾವಿತರಾದ ಚರ್ಚ್ ನ ಮುಖ್ಯಸ್ಥರು ಆಕೆಯ ಭಯಾನಕ ಹಿನ್ನೆಲೆಯ ಬಗ್ಗೆ ತಕ್ಷಣವೇ ಅರಿತು ತ್ವರಿತವಾಗಿ ಆ ಕಾರ್ಯಕ್ರಮ ರದ್ದುಗೊಳಿಸಿದ ಕುರಿತ ವಿವರಗಳನ್ನು ಖಾನ್ ವರದಿಗಾರರಿಗೆ ನೀಡಿದ್ದಾರೆ.

“ನ್ಯೂಜೆರ್ಸಿಯಲ್ಲಿ ಹಿಂದೂತ್ವವಾದಿಗಳಿಗೆ ಸವಾಲು ಹಾಕುತ್ತಿರುವ ನಮ್ಮ ಒಕ್ಕೂಟದಲ್ಲಿ ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ (IAMC), ಕೌನ್ಸಿಲ್ ಆನ್ ಅಮೇರಿಕನ್-ಇಸ್ಲಾಮಿಕ್ ರಿಲೇಶನ್ಸ್ ˌ ನ್ಯೂಜೆರ್ಸಿ (CAIR-NJ), ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ (HfHR), ಪ್ರಜಾಪ್ರಭುತ್ವಕ್ಕಾಗಿ ಅಮೇರಿಕನ್ ಮುಸ್ಲಿಮರು ಮತ್ತು ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಸಂಘಟನೆಗಳು ಇದ್ದು, ಇದರಲ್ಲಿ ಎಲ್ಲಾ ಧರ್ಮಿಯರು. ಎಲ್ಲಾ ವರ್ಣದ ಹಾಗು ಎಲ್ಲಾ ಕ್ಷೇತ್ರಗಳ ಜನರು ಸೇರಿದ್ದಾರೆ” ಎಂದು ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ ನ ಮಿನ್ಹಾಜ್ ಖಾನ್ ಹೇಳಿದ ಬಗ್ಗೆ ದಿ ಕ್ವಿಂಟ್ ವರದಿ ಮಾಡಿದೆ. ರಿತಾಂಬರ ಅವರ ಈ ಕಾರ್ಯಕ್ರಮಮನ್ನು ಯಶಸ್ವಿಯಾಗಿ ರದ್ದುಗೊಳಿಸುವಲ್ಲಿ IAMC ಮತ್ತು CAIR-LA ನೇತೃತ್ವ ವಹಿಸಿದ್ದವೆಂದು ಸುನಿತಾ ವಿಶ್ವನಾಥ್ ಹೇಳಿದ ಬಗ್ಗೆ ವರದಿಗಳಿವೆ.

HfHR ನ ಸುನೀತಾ ವಿಶ್ವನಾಥ್ ಅವರು: “ಹಿಂದುತ್ವವನ್ನು ವಿರೋಧಿಸಲು ಹಲವಾರು ಭಾರತೀಯ ಅಮೇರಿಕನ್ ಮತ್ತು ದಕ್ಷಿಣ ಏಷ್ಯಾದ ಅಮೇರಿಕನ್ ಸಮುದಾಯ ಸಂಘಟನೆಗಳು ನಮ್ಮ ಒಕ್ಕೂಟಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಮಾನವ ಹಕ್ಕುಗಳಿಗಾಗಿ ಹಿಂದೂಗಳು ಸಂಘಟನೆಯು ಹಿಂದೂ ಸಮುದಾಯವನ್ನು ಜಾತಿವಾದಿಗಳ ಮತ್ತು ಹಿಂದುತ್ವವಾದಿಗಳ ವಿರುದ್ಧ ಸಜ್ಜುಗೊಳಿಸುವ ಏಕೈಕ ಹಿಂದೂ ಸಂಘಟನೆಯಾಗಿದೆ. ನಮ್ಮ ಒಕ್ಕೂಟದ ಪಾಲುದಾರ ಸಂಘಟೆಯಲ್ಲಿ ವಿದ್ಯಾರ್ಥಿಗಳು, ಯುವ ವೃತ್ತಿಪರರು, ಕಲಾವಿದರು ಮತ್ತು ಧಾರ್ಮಿಕ ಮುಖಂಡರಿದ್ದು ನಮ್ಮ ಉದ್ದೇಶವನ್ನು ಬೆಂಬಲಿಸುವ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳೂ ಕೂಡ ಇದರಲ್ಲಿದ್ದಾರೆ” ಎನ್ನುವ ಕುರಿತು ದಿ ಕ್ವಿಂಟ್ ವರದಿಗಳು ಸ್ಪಷ್ಟಪಡಿಸಿವೆ.

“ಅಮೆರಿಕದಲ್ಲಿರುವ ಭಾರತೀಯ ವಲಸಿಗರಿಗೆ ಸಮಾನ ಮಾನವ ಹಕ್ಕುಗಳು ಬೇಕೆಂದು ಭಾರತೀಯ ಅಮೆರಿಕನ್ ಹಿಂದುತ್ವವಾದಿ ಸಮುದಾಯ ಆಶಿಸುತ್ತದೆˌ ಆದರೆ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಅದೇ ಹಕ್ಕುಗಳನ್ನು ನಿರಾಕರಿಸಬೇಕೆಂದು ವಾದಿಸುತ್ತದೆ. ಇದು ಬೂಟಾಟಿಕೆಯಾಗಿದೆ. ಹಿಂದುತ್ವವಾದಿ ಆರ್ ಎಸ್ ಎಸ್ ಸಾಧ್ವಿ ರಿತಾಂಬರ ಅವರಂತ ಕೋಮುವಾದಿಗಳನ್ನು ಏಕೆ ಆಹ್ವಾನಿಸಬೇಕು” ಎಂದು ಖಾನ್ ಅವರು ಪ್ರಶ್ನಿಸಿದ ಬಗ್ಗೆ ದಿ ಕ್ವಿಂಟ್ ವರದಿ ಮಾಡಿದೆ. ಖಾನ್ ಅವರು ದಿ ಕ್ವಿಂಟ್‌ ನೊಂದಿಗೆ ಮಾತನಾಡುತ್ತಾ “ಹಿಂದುತ್ವವಾದದ ವಿರುದ್ಧ ಯುಎಸ್‌ನಾದ್ಯಂತ ಈಗ ತಳಮಟ್ಟದಲ್ಲಿ ದೊಡ್ಡ ಮಟ್ಟದ ಚಳುವಳಿ ರೂಪಗೊಳ್ಳುತ್ತಿದೆ” ಎಂದು ಹೇಳಿದ್ದಾರಂತೆ. “ನಾಜಿಗಳು ಮತ್ತು ಫ್ಯಾಸಿಸ್ಟ್‌ಗಳಿಂದ ಪ್ರೇರಿಪಿತವಾದ ಈ ದ್ವೇಷದ ಸಿದ್ಧಾಂತದ ಕುರಿತು ನಾವು ಪಟ್ಟಣ, ನಗರ, ಕೌಂಟಿ, ರಾಜ್ಯ ಮತ್ತು ಅಮೆರಿಕದಾದ್ಯಂತ ಫೆಡರಲ್ ಮಟ್ಟದಲ್ಲಿ ಚುನಾಯಿತ ಅಧಿಕಾರಿಗಳಿಗೆ ಶಿಕ್ಷಣ ನೀಡುತ್ತಿದ್ದೇವೆ. ನೂರಾರು ಅಧಿಕಾರಿಗಳು ಮತ್ತು ಸರ್ವಧರ್ಮೀಯ ಚಳುವಳಿಯ ಜನರು ಈಗ ಹಿಂದುತ್ವವಾದ ಎಂದರೆ ಬಿಳಿಯರ ಪ್ರಾಬಲ್ಯವಾದದಂತೆ ಎಂದು ತಿಳಿದುಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ KKK (ಕು ಕ್ಲುಕ್ಸ್ ಕ್ಲಾನ್)” ಎಂದು ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ ನ ಮಿನ್ಹಾಜ್ ಖಾನ್ ಹೇಳಿದ ಬಗ್ಗೆ ದಿ ಕ್ವಿಂಟ್ ವರದಿ ಮಾಡಿದೆ.

“ಈ ವಾರವಷ್ಟೇ, ಟೀನೆಕ್ ಡೆಮಾಕ್ರಟ್ ಮುಸ್ಲಿಂ ಸಮಿತಿಯು ಯುಎಸ್‌ನಲ್ಲಿ ಹಿಂದುತ್ವ ಹರಡುತ್ತಿವ ಸಂಘಟನೆಗಳ ಗುರುತಿಸುವ ಸ್ಪಷ್ಟ ನಿರ್ಣಯವನ್ನು ಅಂಗೀಕರಿಸಿದೆ. ಹಿಂದೂ ಅಮೇರಿಕನ್ ಫೌಂಡೇಶನ್, ಅಮೆರಿಕದ ವಿಶ್ವ ಹಿಂದೂ ಪರಿಷತ್, ಸೇವಾ(SEWA) ಇಂಟರ್ನ್ಯಾಷನಲ್ ಮತ್ತು ಇನ್ಫಿನಿಟಿ ಫೌಂಡೇಶನ್‌ನಂತಹ ಸಂಸ್ಥೆಗಳನ್ನು ವಿದೇಶದಲ್ಲಿ ಹಿಂದುತ್ವದ ದ್ವೇಷ ಹರಡುವ ‘ದೇಶೀಯ ಶಾಖೆಗಳು’ ಎಂದು ಗುರುತಿಸಲಾಗಿದೆಯಂತೆ. ಆದ್ದರಿಂದ ಖಚಿತವಾಗಿ ಅಮೆರಿಕಾದಲ್ಲಿ ಹಿಂದುತ್ವವಾದದ ಮಖವಾಡ ದೊಡ್ಡದಾಗಿ ಕಳಚಲಿದೆ ಎನ್ನಲಾಗುತ್ತಿದೆ. ಇದು ಅಮೇರಿಕಾವೆ ಹೊರತು ಭಾರತವಲ್ಲ, ಹಿಂದುತ್ವವಾದಿ ಗುಂಪು ಲಕ್ಷಾಂತರ ಡಾಲರ್‌ಗಳ ಬಂಡವಾಳ ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳ ಬೆಂಬಲವನ್ನು ಹೊಂದಿದೆ. ಈ ಗುಂಪು ಒಂದು ಪ್ರಾಚೀನ ಅನಾಗರಿಕ ಕಾಲದ ಸಿದ್ಧಾಂತ ಹೊಂದಿದ್ದು ಆಧುನಿಕ ಯುಗಕ್ಕೆ ಅದು ಅಯೋಗ್ಯ ಮತ್ತುˌ ಬಹುತ್ವವಾದ ಪೋಷಿಸುವ ಪಾಶ್ಚಾತ್ಯ ದೇಶಕ್ಕೆ ಸಲ್ಲುವುದಿಲ್ಲ,” ಎಂದು ಖಾನ್ ಹೇಳಿದ ಬಗ್ಗೆ ದಿ ಕ್ವಿಂಟ್ ವರದಿಗಳು ಬಹಿರಂಗ ಪಡಿಸಿವೆ.

ಇಂಡಿಯನ್ ಬ್ಯುಸಿನೆಸ್ ಅಸೋಸಿಯೇಷನ್ ​​​​ಭಾರತದ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆಯ ಆಗಸ್ಟ್ ೧೪ ರಂದು ಬುಲ್ಡೋಜರ್ ಅನ್ನು ತಂದಿತ್ತು, ಭಾರತದಲ್ಲಿ ಬುಲ್ಡೋಜರ್ ನ ರಾಜಕೀಯ ಮತ್ತು ಕೋಮುವಾದ ಇತ್ತೀಚಿಗೆ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಇದು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ರಾಜ್ಯ ಸರಕಾರಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರ ಮನೆಗಳನ್ನು ಅಕ್ರಮವೆಂಬ ನೆಪದಲ್ಲಿ ಕೆಡವಲು ಬುಡ್ಲೋಜರ್ ನ್ನು ಬಳಸುತ್ತಿವೆ. ಇದರ ವಿರುದ್ಧ ನಾವು ಹಮ್ಮಿಕೊಂಡ ಪ್ರತಿಭಟನೆಗೆ ಮಣಿದು ಎರಡು ವಾರಗಳಲ್ಲಿ, ಹಿಂದುತ್ವವಾದಿಗಳು ಕ್ಷಮೆ ಯಾಚಿಸುವಂತಾಯಿತು. ಆರಂಭದಲ್ಲಿ, ಬುಲ್ಡೋಜರ್ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ ಎಂದು ವಾದಿಸಿದ ಹಿಂದುತ್ವವಾದಿಗಳು ಅದನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರು. ಆದರೆ ಅವರ ಕೊಳಕು ಸಿದ್ಧಾಂತ ಮತ್ತು ಅದರ ದ್ವೇಷದ ಅಭಿವ್ಯಕ್ತಿಗೆ ವಿರೋಧ ಬಂದಿದ್ದರಿಂದ ಅವರು ಕ್ಷಮೆಯಾಚಿಸಬೇಕಾಯಿತು ಎಂದು ಖಾನ್ ಕ್ವಿಂಟ್ ಗೆ ತಿಳಿಸಿರುವ ಬಗ್ಗೆ ವರದಿಗಳಾಗಿವೆ. 

ನ್ಯೂಜೆರ್ಸಿಯ ಇಬ್ಬರು ಯುಎಸ್ ಸೆನೆಟರ್‌ಗಳಾದ ಬಾಬ್ ಮೆನೆಂಡೆಜ್ ಮತ್ತು ಕೋರಿ ಬುಕರ್, ಹಾಗೆಯೆ ಇಬ್ಬರು ನ್ಯೂಜೆರ್ಸಿಯ ಕಾಂಗ್ರೆಸ್ ಸದಸ್ಯರಾದ ಫ್ರಾಂಕ್ ಪಾಲ್ಲೋನ್ ಮತ್ತು ಬೋನಿ ಕೋಲ್ಮನ್ ವ್ಯಾಟ್ಸನ್ˌ ಅದರೊಟ್ಟಿಗೆ ವುಡ್‌ಬ್ರಿಡ್ಜ್ ಮತ್ತು ಎಡಿಸನ್ ಪಟ್ಟಣಗಳ ಮೇಯರ್‌ಗಳು, ಮತ್ತು ನ್ಯೂಜರ್ಸಿಯ ಶಾಸಕರು ಈ ಹಿಂದುತ್ವವಾದಿಗಳ ಕೃತ್ಯವನ್ನು ಖಂಡಿಸಿದರೆಂದು ಖಾನ್ ಹೇಳಿರುವ ಬಗ್ಗೆ ಕ್ವಿಂಟ್ ವರದಿ ಮಾಡಿದೆಯಂತೆ. “ಹಿಂದುತ್ವವಾದಿಗಳ ಗುಪ್ತ ಕಾರ್ಯಸೂಚಿ ಬಯಲಾಗಿದ್ದು ˌ ಅವರ ಮುಸ್ಲಿಮ್ ದ್ವೇಷ ಮತ್ತು ಮತಾಂಧತೆಯನ್ನು ಜನತಂತ್ರವಾದಿ ಭಾರತೀಯ ಯುಎಸ್ ಸಮುದಾಯ ಅರಿಯುತ್ತಿದೆ ಎಂದು ಖಾನ್ ಕ್ವಿಂಟ್ ಗೆ ಹೇಳಿದ್ದಾರಂತೆ. ಅದರ ಜೊತೆಗೆ ಸುನೀತಾ ವಿಶ್ವನಾಥ್ ಅವರು ದಿ ಕ್ವಿಂಟ್‌ಗೆ “ಹಿಂದುತ್ವವಾದದ ದ್ವೇಷದ ವಿರುದ್ಧ ಯುಎಸ್ನ ಭಾರತೀಯ ಸಮುದಾಯವನ್ನು ಜಾಗೃತಗೊಳಿಸುವ ನಮ್ಮ ಪ್ರಯತ್ನಗಳು ವೇಗ ಪಡೆಯುತ್ತಾ ವಿಸ್ತಾರಗೊಳ್ಳುತ್ತಿವೆ. ಇದು ಕಳೆದೊಂದು ದಶಕದಲ್ಲಿನ ನಮ್ಮ ನಿರಂತರ ಪ್ರಯತ್ನಗಳಿಂದಾಗಿ ಸಾಧ್ಯವಾಗಿದೆ ಎಂದಿದ್ದಾರಂತೆ.

ಭಾರತದಲ್ಲಿ ಹಿಂದುತ್ವವಾದಿಗಳು ಮುಸ್ಲಿಂರ ನರಮೇಧಕ್ಕೆ ಬಹಿರಂಗ ಕರೆಯನ್ನು ನೀಡುತ್ತಿದ್ದಾರೆ. ಭಾರತದ ಅಲ್ಪಸಂಖ್ಯಾತ ಸಮುದಾಯಗಳು ಹಾಗು ದಲಿತರನ್ನ ನಾವು ಹಿಂದುತ್ವವಾದಿಗಳ ವಿರುದ್ಧ ಸಜ್ಜುಗೊಳಿಸಬೇಕಿದೆ. ಭಾರತದ ಜಾತ್ಯತೀತ ಮತ್ತು ಸೌಹಾರ್ದತೆಯ ಪರವಾಗಿ ನಿಲ್ಲಲು ಜಾತ್ಯಾತೀತ ಹಿಂದೂಗಳನ್ನು ಒಂದುಗೂಡಿಸುವ ನಮ್ಮ ಪ್ರಯತ್ನಗಳನ್ನು ನಾವು ದ್ವಿಗುಣಗೊಳಿಸಬೇಕು. ನಾವೆಲ್ಲ ಮೌನವಾಗಿದ್ದರೆ ಹಿಂದುತ್ವವಾದಿಗಳನ್ನ ಬೆಂಬಲಿಸಿದಂತಾಗುತ್ತದೆ. ಪ್ರಸ್ತುತ ಆಡಳಿತಲ್ಲಿ ಹಿಂದುತ್ವದ ಶಕ್ತಿಗಳು ಬಲಗೊಳ್ಳುತ್ತಿವೆ. ನ್ಯೂಜೆರ್ಸಿಯಲ್ಲಿ ಬುಲ್ಡೋಜರ್‌ನ ಲಜ್ಜೆಗೆಟ್ಟ ಪ್ರದರ್ಶನವು ಭಾರತವನ್ನು ಹಿಂದುತ್ವ ರಾಷ್ಟ್ರವನ್ನಾಗಿ ಮಾಡುವ ತಮ್ಮ ಧ್ಯೇಯೋದ್ದೇಶದಲ್ಲಿ ಹಿಂದುತ್ವ ಶಕ್ತಿಗಳಿಗೆ ಎಷ್ಟು ವಿಶ್ವಾಸವಿದೆ ಎಂಬುದನ್ನು ತಿಳಿಸುತ್ತದೆ” ಎಂದು ಸುನೀತಾ ವಿಶ್ವನಾಥ್ ಹೇಳಿದ್ದಾರಂತೆ.

ಸುನೀತಾ ವಿಶ್ವನಾಥ ಅವರನ್ನು ದಿ ಕ್ವಿಂಟ್ ಮಾತನಾಡಿಸಿದಾಗ ಅವರು ಕೊನೆಯದಾಗಿ: “ಯುಎಸ್‌ನಲ್ಲಿರುವ ಭಾರತೀಯ ವಲಸಿಗ ಸಮುದಾಯವು ಧಾರ್ಮಿಕ ಮತ್ತು ರಾಜಕೀಯವಾಗಿ ತೀವ್ರವಾಗಿ ವಿಭಜನೆಗೊಂಡಿದೆ. ಜನರ ಧ್ರುವೀಕರಣವು ತೀವ್ರವಾಗಿದೆ. ಇಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯ ಒಟ್ಟಿಗೆ ಬೆರೆಯುವುದು ಅಪರೂಪ. ನಮ್ಮ ಮಕ್ಕಳು ಒಟ್ಟಿಗೆ ಆಡುವುದಿಲ್ಲ. ಯುಎಸ್‌ನಲ್ಲಿ ಹಿಂದುತ್ವವಾದ ಮತ್ತು ಜಾತಿಯವಾದಗಳನ್ನು ವಿರೋಧಿಸಲಾಗುತ್ತದೆ. ಇದು ನಾವೆಲ್ಲ ಮಾಡಬೇಕಾದ ಕೆಲಸವಾಗಿದೆ. ಹಿಂದೂಗಳು ಈ ನಿರ್ಣಾಯಕ ಕಾರ್ಯದಲ್ಲಿ ತೊಡಗಿಸಿಕೊಂಡು ನಾವು ಯಾರು? ಯಾವುದರ ಪರ ನಿಲ್ಲಬೇಕು? ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ನಾವು ಏನನ್ನಾದರು ತ್ಯಾಗ ಮಾಡಲು ಸಿದ್ಧರಾಗಬೇಕು. ಹಿಂದುತ್ವವಾದಿಗಳ ದ್ವೇಷದ ವಿರುದ್ಧ ಸಾರ್ವಜನಿಕ ಮತ್ತು ತಾತ್ವಿಕ ನಿಲುವನ್ನು ತೆಗೆದುಕೊಂಡು ವಸುಧೈವ ಕುಟುಂಬಕಮ್ ಎಂಬ ಘೋಷವಾಕ್ಯವನ್ನು ನಿಜಗೊಳಿಸಬೇಕು” ಎಂದಿರುವ ಬಗ್ಗೆ ದಿ ಕ್ವಿಂಟ್ ಸವಿವರವಾಗಿ ವರದಿ ಮಾಡಿದೆ. ಭಾರತದಲ್ಲೂ ಕೂಡ ಈ ತರಹದ ಪ್ರಯತ್ನಗಳ ಅಗತ್ಯ ಖಂಡಿತ ಇದೆ ಎಂದು ನಾನು ಭಾವಿಸುತ್ತೇನೆ.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಮಿಲ್ಲರ್ ಶತಕ ವ್ಯರ್ಥ: ಭಾರತಕ್ಕೆ 16 ರನ್ ರೋಚಕ ಜಯ

Next Post

60 ಸಿಎಎ, ಎನ್‌ಆರ್‌ಸಿ ಪ್ರತಿಭಟನಾಕಾರರಿಗೆ ನೋಟಿಸ್; 57 ಲಕ್ಷ ನಷ್ಟ ಪರಿಹಾರ ಮಾಡುವಂತೆ ಸೂಚನೆ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
60 ಸಿಎಎ, ಎನ್‌ಆರ್‌ಸಿ ಪ್ರತಿಭಟನಾಕಾರರಿಗೆ ನೋಟಿಸ್; 57 ಲಕ್ಷ ನಷ್ಟ ಪರಿಹಾರ ಮಾಡುವಂತೆ ಸೂಚನೆ

60 ಸಿಎಎ, ಎನ್‌ಆರ್‌ಸಿ ಪ್ರತಿಭಟನಾಕಾರರಿಗೆ ನೋಟಿಸ್; 57 ಲಕ್ಷ ನಷ್ಟ ಪರಿಹಾರ ಮಾಡುವಂತೆ ಸೂಚನೆ

Please login to join discussion

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Top Story

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada