ರಾಜಸ್ಥಾನದ ಪ್ರಮುಖ ಧಾರ್ಮಿಕ ಸ್ಥಳ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾವಿರುವ ಜಾಗದಲ್ಲಿ ಹಿಂದೂ ದೇವಾಲಯವಿತ್ತು ಎಂದು ಪ್ರಮುಖ ಹಿಂದೂ ಸಂಘಟನೆಗಳು ಆರೋಪಿಸಿವೆ.
ದರ್ಗಾದ ಕಿಟಕಿಗಳಲ್ಲಿ ಹಿಂದೂ ಧರ್ಮದ ಚಿಹ್ನೆಗಳಿದ್ದು ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಉತ್ಕನನ ನಡೆಸಬೇಕು ಎಂದು ಆಗ್ರಹಿಸಿವೆ.
ಈ ಕುರಿತು ಮಾತನಾಡಿರುವ ಮಹಾರಾಣಾ ಪ್ರತಾಪ್ ಸೇನಾ ಮುಖಂಡ ರಾಜವರ್ಧನ್ ಪರ್ಮಾರ್ ಪ್ರಸ್ತುತ ದರ್ಗಾ ಇರುವ ಜಾಗದಲ್ಲಿ ಪ್ರಾಚೀನ ಹಿಂದೂ ದೇವಾಲಯವಿತ್ತು ಅದಕ್ಕೆ ಸಾಕ್ಷಿಯಾಗಿ ಮಸೀದಿಯ ಗೋಡೆಗಳ ಮೇಲೆ ಸ್ವಸ್ತಿಕ್ ಚಿಹ್ನೆ ಇದೆ. ಭಾರತೀಯ ಪುರಾತತ್ವ ಇಲಾಖೆ ದರ್ಗಾದ ಸುತ್ತ ಸಮೀಕ್ಷೆ ನಡೆಸಬೇಕು ಎಂದು ನಾವು ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಆದರೆ, ಹಿಂದು ಸಂಘಟನೆಗಳ ಹೇಳಿಕೆಯನ್ನು ದರ್ಗಾದ ಆಡಳಿತ ಮಂಡಳಿ ಅಲ್ಲಗೆಳದಿದ್ದು ಆ ರೀತಿಯ ಯಾವುದೇ ಕುರುಹುಗಳಿಲ್ಲ ಎಂದು ತಿಳಿಸಿದೆ.
ಈ ಕುರಿತು ಮಾತನಾಡಿರುವ ಅಂಜುಮಾನ್ ಸಯ್ಯದ್ ಜದಗಾನ್ ಅಧ್ಯಕ್ಷ ಹಿಂದು ಸಂಘಟನೆಗಳ ಪ್ರತಿಪಾದನೆ ಆಧಾರರಹಿತ ಪ್ರತಿ ವರ್ಷ ದೇಶದ ಉದ್ದಗಲದಿಂದಲೂ ಬರುವ ಲಕ್ಷಾಂತರ ಹಿಂದು ಭಕ್ತಾದಿಗಳು ಸೇರಿದಂತೆ ಅನೇಕರು ಬೇಟಿ ನೀಡಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ ಎಂದು ಹೇಳಿದ್ದಾರೆ.
ಮುಂದುವರೆದು, ದರ್ಗಾದ ಯಾವ ಗೋಡೆ ಅಥವಾ ಕಿಟಕಿಗಳ ಮೇಲೆ ಸ್ವಸ್ತಿಕ್ ಚಿಹ್ನೆಗಳಿಲ್ಲ ನೂರಾರು ವರ್ಷಗಳಿಂದ ದರ್ಗಾ ಇಲ್ಲಿದೆ ಹಿಂದೆ ಭಾರದ ಪ್ರಶ್ನೆ ಈಗ ಯಾಕೆ ಹುಟ್ಟಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಇದು ದರ್ಗಾದ ಹಕ್ಕು ಪ್ರತಿಪಾದನೆಯ ಸಮಯವಲ್ಲ ಹಿಂದು ಸಂಘಟನೆಗಳ ಹೇಳಿಕೆಯಿಂದ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.