ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದೆ. ಇಡೀ ದೇಶವೇ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೊಡಗಿದೆ. ನಿನ್ನೆಯಿಂದಲೇ ಕರ್ನಾಟಕದ ಹಲವೆಡೆ ಹಿಂದೂ ದೇಶಭಕ್ತಿಗೀತೆಗಳು ಮೊಳಗುತ್ತಿದೆ ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ, ಗೀತರಚನೆಕಾರ ರವಿರಾಜ್, ದೇಶಪ್ರೇಮ ಅನ್ನುವುದು ಬರೀ ಹಿಂದಿಯಲ್ಲಿ ಮಾತ್ರ ಪ್ರಕಟವಾಗುವುದೇ? ಎಂದು ಪ್ರಶ್ನಿಸಿದ್ದಾರೆ.
ಹೌದು ಈ ಕುರಿತು ತಮ್ಮ ಪೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಬೆಳಿಗ್ಗೆಯಿಂದ ಬರೀ ಹಿಂದಿ ದೇಶಭಕ್ತಿ ಗೀತೆಗಳೆ ನಮ್ಮ ಅಪಾರ್ಟ್ಮೆಂಟಿನ ಮೈಕಲ್ಲಿ. ರಾತ್ರಿ ಮುಗಿದು ಬೆಳಗಾಗುವಾಗ ಎಲ್ಲೋ ಉತ್ತರಪ್ರದೇಶದಲ್ಲಿ ಮಲಗಿ ಎದ್ದಂತೆ ಭಾಸವಾಯಿತು ಎಂದಿದ್ದಾರೆ.
ಮುಮದುವರೆದು, ಸ್ವಾತಂತ್ರ್ಯ ಮಹೋತ್ಸವವನ್ನು ಕನ್ನಡದಲ್ಲು ಆಚರಿಸಬಹುದು . ದೇಶಪ್ರೇಮ ಅನ್ನುವುದು ಬರೀ ಹಿಂದಿಯಲ್ಲಿ ಮಾತ್ರ ಪ್ರಕಟವಾಗುವುದೇ ? ದೇಶಭಕ್ತಿ ಗೀತೆಗಳು ಕನ್ನಡದಲ್ಲು ಇವೆ. ಕನ್ನಡ ನೆಲದ ದೇಶಪ್ರೇಮ ಕನ್ನಡದಲ್ಲೇ ಇರಲಿ. ನಮ್ಮ ನೆಲದಲ್ಲಿ ನಮ್ಮತನವಿಲ್ಲದ ಆಚರಣೆಗಳೇಕೆ ?
ನಾನು ಒಂದು ಸುತ್ತು ಜೋರಾಗೇ ಆಕ್ಷೇಪಣೆ.
ನಿಮ್ಮ ಕಣ್ಣಿಗೆ ಇಂತವು ಬಿದ್ದಲ್ಲಿ ನಮಗ್ಯಾಕೇ ಎಂದು ಸುಮ್ಮನಿರದೇ ಎಂದಿದ್ದಾರೆ.
ಒಂದು ಸಣ್ಣ ಆಕ್ಷೇಪಣೆಯಾದರು ಸಲ್ಲಿಸಿ. ಹನಿ ಹನಿಗೂಡಿ ಹಳ್ಳ ಎಂದು ಕನ್ನಡದಲ್ಲೇ ನಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸುವ ಅಭಿಯಾನಕ್ಕೆ ಕರೆ ಕೊಟ್ಟಿದ್ದಾರೆ.