ಭಾರತವು ಇಂದು 75ನೇ ಸ್ವಾತಂತ್ರ್ಯ ಮಹಫತ್ಸವನ್ನು ಆಚರಿಸುತ್ತಿದ್ದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದು ಮುಂದಿನ 25 ವರ್ಷಗಳಲ್ಲಿ ದೇಶ ಅಭಿವೃದ್ದಿ ಹೊಂದಿದ ರಾಷ್ಟ್ರವಾಗಬೇಕು ಎಂದಿದ್ದಾರೆ.
ಇಲ್ಲಿವೆ ಭಾಷಣದ ಪ್ರಮುಖ ಅಂಶಗಳು
1) ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾರ್ವಕರ್ ಅವರೊಗೆ ನಾವು ಕೃತಜ್ಞತರಾಗಿರುತ್ತೇವೆ ಎಂದು ಪ್ರಧಾನಿ ಮೋದಿ ಸ್ವಾತಂತ್ರ್ಯ ಹೋರಾಟಗಾರರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿದ್ದಾರೆ.
2) 2047ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ದೇಶದ ಜನತೆಗೆ ಐದು ಪ್ರತಿಜ್ಞೆ ಮಾಡುವಂತೆ ಕರೆ ನೀಡಿದ್ದಾರೆ. ಆಗಸ್ಟ್ 14ರಂದು ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಈ ಅಂಶವನ್ನ ಒತ್ತು ಹೇಳಿದ್ದರು.
3) ನಾವು ಮಾಡುವ ಐದು ಪ್ರತಿಜ್ಞೆಗಳು ಯಾವುದೆಂದರೆ 2047ರವೇಳೆಗೆ ಭಾರತವನ್ನ ಅಭಿವೃದ್ದಿ ಹೊಂದಿದ ದೇಶವನ್ನಾಗಿ ಮಾಡುವುದು, ದಾಸ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು, ದೇಶದ ಪರಂಪರೆ ಸಾರುವುದು, ಏಕತೆ, ನಮ್ಮ ಕರ್ತವ್ಯಗಳನ್ನು ಪಾಲಿಸುವುದು ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಈ ಐದು ಪ್ರತಿಜ್ಞೆ ಮಾಡುವಂತೆ ಹೇಳಿದ್ದಾರೆ.
4) ಮೊದಲು ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ಭೇಟಿ ನೀಡಿ ಪುಷ್ಟಾರ್ಚನೆ ಮಾಡಿದ ಪ್ರಧಾನಿ ಮೋದಿ ನಂತರ ಕೆಂಪುಕೋಟೆಯಲ್ಲಿ ಇಂಟರ್ ಸೇವೆ ಹಾಗೂ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದ ನಂತರ ಧ್ವಜಾರೋಹಣ ಮಾಡಿದ್ದಾರೆ.
5) 2021 ಮಾರ್ಚ್ನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಘೋಷವಾಕ್ಯದೊಂದಿಗೆ ಶುರುವಾದ ಕಾರ್ಯಕ್ರಮವನ್ನ ದೇಶಾದ್ಯಂತ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿದ್ದರವರನ್ನು ಗುರುತಿಸಿ ಸ್ಮಾರಕಗಳನ್ನು ಹಾಗೂ ರಾಷ್ಟ್ರೀಯ ಕಟ್ಟಡಗಳನ್ನು ದೀಪಾಲಂಕಾರದೊಂದಿಗೆ ಕಂಗೊಳಿಸಲಾಗುತ್ತಿದೆ.
6) ಅಮೃತ ಮಹೋತ್ಸವದ ಪ್ರಯುಕ್ತ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಏಕಕಾಲದಲ್ಲಿ 75 ಶಿಖರಗಳನ್ನು ಏರಿ ರಾಷ್ಟಧ್ವಜವನ್ನ ಹಾರಿಸಿದ್ದು ವಿಶಿಷ್ಟ ದಾಖಲೆಯಾಗಿದೆ.
7) ದೇಶದಲ್ಲಿ ಪ್ರಪಥಮ ಭಾರಿಗೆ ಅಮೃತ ಮಹೋತ್ಸವ ವಿಶೇಷಾರ್ಥ ಹರ್ ಘರ್ ತಿರಂಗಾ ಅಭಿಯಾನವನ್ನು ಘೋಷಿಸಲಾಗಿತ್ತು. ಈ ಅಭಿಯಾನಕ್ಕಾಗಿ ನಾವು ಧ್ವಜ ಸಂಹಿತೆಯಲ್ಲಿ ಬದಲಾವಣೆ ತರಬೇಕಾಯಿತ್ತು ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
8) ದೇಶದ ಪ್ರಮುಖ ರಕ್ಷಣಾ ಸಂಸ್ಥೆ ಡಿಆರ್ಡಿಒ ತಯಾರಿಸಿದ ಹೊವಿಟ್ಜರ್ ಬಂದೂಕಿನಲ್ಲಿ 21 ಸುತ್ತು ಗುಂಡು ಹಾರಿಸಿದ್ದು ವಿಶೇಷವಾಗಿತ್ತು. ಇದು ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನದ ಪ್ರಮುಖ ಉತ್ಪನವಾಗಿದೆ.
9) ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು ಕೆಂಪುಕೋಟೆಯ ಸುತ್ತ ಸುಮಾರು 10 ಸಾವಿರಕ್ಕು ಹೆಚ್ಚು ಮಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಂದಾಜು 7 ಸಾವಿತಕ್ಕು ಹೆಚ್ಚು ಮಂದಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
10) ಅಮೃತ ಮಹೋತ್ಸವದ ವಿಶೇಷಾರ್ಥ ಕೆಂಪುಕೋಟೆಯ ಮೇಲೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಧಾರ್ಮಿಕ, ನೈಸರ್ಗಿಕ ಪರಂಪರೆಯನ್ನು ಬಿಂಬಿಸುವ ಚಿತ್ರಗಳನ್ನು ಕೆಂಪುಕೋಟೆಯ ಸುತ್ತ ಅಲಂಕರಿಸಲಾಗಿದೆ.