
ಧರ್ಮಸ್ಥಳದ (Dharmasthala case) ಬಗ್ಗೆ, ಧರ್ಮಾಧಿಕಾರಿಗಳ ಕುಟುಂಬಡಾ ಬಗ್ಗೆ ಸುದ್ದಿ ಪ್ರಸಾರ ಮಾಡುವ ಸಲುವಾಗಿ ವೀರೆಂದ್ರ ಹೆಗ್ಗಡೆಯವರ (Veerendra hegde) ಸಹೋದರ ಹರ್ಷೇಂದ್ರ ಕುಮಾರ್ ಅವರು ತಂದಿದ್ದ ತಡೆಯನ್ನು ಹೈಕೋರ್ಟ್ (Highcourt) ವಜಾ ಮಾಡುವ ಮೂಲಕ ಪತ್ರಿಕಾ ಸ್ವಾತಂತ್ರವನ್ನು ಎತ್ತಿಹಿಡಿದಿದೆ.

ಧರ್ಮಸ್ಥಳದ (Dharmasthala case) ನೇತ್ರಾವತಿ ನದಿ ತೀರದಲ್ಲಿ ಶವಹೂತಿಟ್ಟ ಪ್ರಕರಣಕ್ಕೆ (Mass burial) ಸಂಬಂಧಪಟ್ಟಂತೆ ಆರನೇ ಪಾಯಿಂಟ್ ನಲ್ಲಿ ಸಿಕ್ಕಿರೋದು 25 ಮಾನವ ಮೂಳೆ, ಓರ್ವ ಪುರುಷನ ಮೂಳೆ ಎಂದು ಎಸ್ ಐಟಿ ಮಾಹಿತಿ ನೀಡಿದೆ. ಸಧ್ಯ ಏಳನೇ ಪಾಯಿಂಟ್ ನಲ್ಲಿ ಈವರೆಗೂ ಕಳೆಬರಹ ಪತ್ತೆಯಾಗಿಲ್ಲ.ಹೀಗಾಗಿ ಮಣ್ಣು ಅಗೆಯುವ ಕಾರ್ಯಾಚರಣೆ ಮುಂದುವರೆದಿದೆ.

ಏಳನೇ ಪಾಯಿಂಟ್ ನಲ್ಲಿ ಈವರೆಗೂ ಯಾವುದೇ ಕಳೆಬರಹ ಪತ್ತೆಯಾಗದ ಹಿನ್ನಲೆ, ಮಣ್ಣು ಅಗೆಯುವ ಕಾರ್ಯಾಚರಣೆ ಒಂದು ಹಂತಕ್ಕೆ ಅಂತ್ಯವಾಗಿದೆ. ಏಳನೇ ಪಾಯಿಂಟ್ ನಲ್ಲಿ ಮಹಜರು ಸಂಪೂರ್ಣ ಮುಕ್ತಾಯದ ಬಳಿಕ ಎಂಟನೇ ಪಾಯಿಂಟ್ ಗೆ ಸಿಬ್ಬಂದಿ ಶಿಪ್ಟ್ ಆಗಲಿದ್ದಾರೆ. ಸಧ್ಯ ಏಳನೇ ಪಾಯಿಂಟ್ ಕಾರ್ಯಾಚರಣೆ ಯಲ್ಲಿ ಬ್ರೇಕ್ ಬೀಳುವ ಸಾಧ್ಯತೆಯಿದೆ.

ಪಾಯಿಂಟ್ 7 ರಲ್ಲಿ ಇದುವರೆಗೂ ಹಿಟಾಚಿ ಮೂಲಕ 5 ಅಡಿ ಆಳಕ್ಕೆ ಮಣ್ಣು ತೆಗೆಯುವ ಕಾರ್ಯ ನಡೆದಿದ್ದು, ಸುನಾರು ಅಡಿ ಆಳಕ್ಕೆ ಹೋದ್ರೂ ಯಾವುದೇ ಕಳೇಬರ ಸಿಗದ ಕಾರಣ ಮತ್ತಷ್ಟು ಆಳಕ್ಕೆ ಹಿಟಾಚಿ ಮೂಲಕ ಮಣ್ಣು ತೆಗೆಯಲಾಗುತ್ತಿದ್ದೆ. ಶೀಘ್ರದಲ್ಲೇ ಸಿಬ್ಬಂದಿ 8 ನೇ ಪಾಯಿಂಟ್ ಗೆ ಶಿಫ್ಟ್ ಆಗಲಿದ್ದಾರೆ.












