ನವದೆಹಲಿ : ಮುಖ್ಯಮಂತ್ರಿ ಮಾವನ್ ಧೀಯಾನ್ ಸತ್ಕಾರ್ ಯೋಜನೆಯಡಿ ನೋಂದಾಯಿಸಲಾದ ಮಹಿಳೆಯರಿಗೆ ಜುಲೈ 1 ರಿಂದ ಮಾಸಿಕ 1,000 ರೂ. ಆರ್ಥಿಕ ನೆರವು ದೊರೆಯಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದಾರೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿಯಲ್ಲಿ, ಸಾಮಾನ್ಯ ವರ್ಗದ ಮಹಿಳಾ ಫಲಾನುಭವಿಗಳು ಪ್ರತಿ ತಿಂಗಳಿಗೆ 1,000 ರೂಪಾಯಿಗಳ ಸಹಾಯವನ್ನು ಪಡೆಯಲಿದ್ದಾರೆ, ಆದರೆ ಪರಿಶಿಷ್ಟ ಜಾತಿಯ ಮಹಿಳೆಯರು 1,500 ರೂಪಾಯಿಗಳಷ್ಟು ಈ ಯೋಜನಯೆ ಲಾಭ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗುವುದು. ಈಗಾಗಲೇ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಡೆಯುತ್ತಿರುವ ಮಹಿಳೆಯರು ಸಹ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಪಂಜಾಬ್‌ನಲ್ಲಿ ಸುಮಾರು ಶೇ. 97 ರಷ್ಟು ಮಹಿಳೆಯರು ಈ ಮಹತ್ವದ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೆ ಪಂಜಾಬ್ ಸರ್ಕಾರವು ಇದರ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ 9,300 ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದು ಮಾನ್ ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿಗೆ ಗುಡ್ ಬೈ ಹೇಳಿದ ಮಾಜಿ IPS : ಕುತೂಹಲ ಮೂಡಿಸಿದ ಅಣ್ಣಾಮಲೈ ನಡೆ..!
ಇನ್ನೂ ಈ ಯೋಜನೆಯಡಿಯಲ್ಲಿ ಒಟ್ಟು 52 ಲಕ್ಷ ಮಹಿಳಾ ಫಲಾನುಭವಿಗಳಿದ್ದು, ಅವರಲ್ಲಿ 36 ಲಕ್ಷ ಜನರಿಗೆ ಈ ಯೋಜನೆಯಡಿ ಕಾರ್ಡ್‌ಗಳನ್ನು ನೀಡಲಾಗಿದೆ. ಜುಲೈ 1 ರಿಂದ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನಾವು ಈ ಯೋಜನೆಯನ್ನು ಪ್ರಾರಂಭಿಸಿದ್ದು ನಮ್ಮಲ್ಲಿ ಸೂಕ್ತವಾದ ಆರ್ಥಿಕ ಬಜೆಟ್ ಗಮನಿಸಿಕೊಂಡು ಹೀಗಾಗಿ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.





