ಲೀಲಾವತಿ ಅವರ ಏಕೈಕ ಮಗ ವಿನೋದ್ ರಾಜ್ ಅವರಿಗೆ ಮದುವೆ ಆಗಿದ್ಯಾ..? ಈ ಬಗ್ಗೆ ನಟಿ ಲೀಲಾವತಿ ಅವರು ಏನು ಹೇಳಿದ್ದರು..? ವಿನೋದ್‌ರಾಜ್ ಅವರಿಗೆ ಮದುವೆ ಆಗಿ ಮಕ್ಕಳಿದ್ದಾರೆ ಎಂದು ದಾಖಲೆ ಸಮೇತ ಹೇಳಿದ್ದು ಯಾರು ಗೊತ್ತಾ, ಇಲ್ಲಿದೆ ಮಾಹಿತಿ .
ವಿನೋದ್ ರಾಜ್ ಅವರಿಗೆ ಮದುವೆ ಆಗಿದೆ ಎಂದು ದಾಖಲೆ ಸಮೇತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ನಿರ್ದೇಶಕ ಪ್ರಕಾಶ್‌ರಾಜ್ ಸಾಹು.
ಮೊದಲನೆಯ ವಿಷಯ: ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು.ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ.
ಎರಡನೆಯ ವಿಷಯ: ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ.
ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ “ಅವರು ಯಾರೋ ಅಭಿಮಾನಿಗಳು” ಅಂದು ಬಿಡುತ್ತಿದ್ದರು ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚನ್ನೈನಿಂದ ಈ ಮಾರ್ಕ್ಸ್ ಕಾರ್ಡ್ ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇವನ್ನು ಬಹಿರಂಗ ಪಡಿಸಿದ್ದೇನೆ
ಎಂದು ಇದೇ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್‌ರಾಜ್ ಸಾಹು ಮಾಹಿತಿ ಹಂಚಿಕೊಂಡಿದ್ದರು.
ಇನ್ನು ತಮ್ಮ ಮಗ ವಿನೋದ್ ರಾಜ್ ಅವರ ಮದುವೆ ಬಗ್ಗೆ ಲೀಲಾವತಿ ಅವರು ಸಂದರ್ಶನವೊಂದರಲ್ಲಿ ಮಾತಾಡಿದ್ದರು.‘ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ ಕಾರಣ ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂತೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ’.
‘ನನ್ನ ಮಗನ ಮದುವೆಗೆ 7 ಜನ ಕನ್ನಡಿಗರು ಬಂದಿದ್ದರು. ಏನ್ ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಏಳೇ ಏಳು ಜನ ಬಂದಿದ್ದಾರೆ. ಜನ ಸಿಗಲಿಲ್ಲವಾ ಎಂದು ಅವಮಾನಿಸಿದ್ರು. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ. ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತದೆ. ಯಾರು ಏನೇ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ’
ಎಂದು ಯೂಟ್ಯೂಬ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಲೀಲಾವತಿ ಹೇಳಿದ್ದರು.