ಶುಭ ಮುಹೂರ್ತ ಎಂದರೆ ಶುಭ ಸಮಯ. ಯಾವುದೇ ಕೆಲಸವನ್ನು ಪ್ರಾರಂಭಿಸಲು ಇದು ಅತ್ಯಂತ ಶುಭ, ಅದೃಷ್ಟ ಮತ್ತು ಫಲಪ್ರದ ಸಮಯವೆಂದು ಪರಿಗಣಿಸಲಾದ ವಿಶೇಷ ಸಮಯ.ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಮುಹೂರ್ತವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅದು ಮದುವೆ, ಅನ್ನಪ್ರಾಸ, ನಾಮಕರಣ, ಗೃಹ ಪ್ರವೇಶ, ವ್ಯವಹಾರವನ್ನು ಪ್ರಾರಂಭಿಸುವುದು, ವಾಹನ ಖರೀದಿಸುವುದು ಅಥವಾ ಯಾವುದೇ ಧಾರ್ಮಿಕ ಆಚರಣೆಯನ್ನು ಪ್ರಾರಂಭಿಸುವುದು, ಪ್ರತಿಯೊಂದು ಶುಭ ಕೆಲಸಕ್ಕೂ ಶುಭ ಸಮಯವನ್ನು ಜನ ನೋಡುತ್ತಾರೆ.

2026ರ ಪಂಚಾಂಗ ಲೆಕ್ಕಾಚಾರದ ಪ್ರಕಾರ, ಈ ವರ್ಷ ಅಧಿಕ ಮಾಸ ಮತ್ತು ಚಾತುರ್ಮಾಸದ ಪ್ರಭಾವದಿಂದಾಗಿ ಮದುುವ ಮುಹೂರ್ತಗಳ ಸಂಖ್ಯೆ ಕಡಿಮೆಯಿದೆ.ಈ ವರ್ಷ ಶುಭ ವಿವಾಹಕ್ಕಾಗಿ ಕೇವಲ 53 ದಿನಗಳು ಮಾತ್ರ ಲಭ್ಯವಿವೆ. ಮದುವೆ ಮುಹೂರ್ತ ತೆಗೆಯಲು ತಿಥಿ, ದಿನ, ನಕ್ಷತ್ರ, ಯೋಗ ಮತ್ತು ಕರಣ ಇವೆಲ್ಲವನ್ನೂ ಸಮನ್ವಯಗೊಳಿಸುವ ಮೂಲಕ, ನಿರ್ದಿಷ್ಟ ವ್ಯಕ್ತಿಗೆ ಯಾವ ಸಮಯವು ಯಾವ ಕೆಲಸಕ್ಕೆ ಸೂಕ್ತವಾಗಿರುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ

ಮೇ 17ರಿಂದ ಜೂನ್ 15ರವರೆಗೆ ‘ಅಧಿಕ ಜೇಷ್ಠ ಮಾಸ’ ಬರಲಿದೆ. ಶಾಸ್ತ್ರಗಳ ಪ್ರಕಾರ ಅಧಿಕ ಮಾಸದಲ್ಲಿ ವಿವಾಹದಂತಹ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಜುಲೈ ಎರಡನೇ ವಾರದಿಂದ ಅಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳವರೆಗೆ ಚಾತುರ್ಮಾಸವಿದ್ದು. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ನವೆಂಬರ್ 21ರ ನಂತರವೆ ಮತ್ತೆ ಮುಹೂರ್ತಗಳು ಆರಂಭವಾಗಲಿವೆ.






