ಹುಲಿ ಯೋಜನೆಗೆ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ನಡೆಸಿದ್ದಾರೆ. ಬಂಡೀಪುರ ಸಫಾರಿಗೆ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಆಗಮಿಸಿದಂತಾಗಿದೆ. ಇಂದು ಪ್ರಧಾನಿ ಮೋದಿ ಧರಿಸಿದ ಸಫಾರಿ ಡ್ರೆಸ್ ಎಲ್ಲರ ಗಮನ ಸೆಳೆದಿದೆ.


ಶನಿವಾರ ರಾತ್ರಿಯೇ ಮೈಸೂರಿಗೆ ಬಂದಿಳಿದ ಪ್ರಧಾನಿ ಮೋದಿ ಇಂದು ಬಂಡಿಪುರ ಹುಲಿ ರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಿದ್ರು. 12 ಕಿಲೋ ಮೀಟರ್ಗೂ ಅಧಿಕ ದೂರ ಪ್ರಧಾನಿ ಮೋದಿ ಸಫಾರಿ ಮಾಡಿದ್ದಾರೆ.


ಪ್ರಧಾನಿ ಮೋದಿ ಧರಿಸಿದ್ದ ಜಾಕೆಟ್ನಲ್ಲಿ ಬಂಡೀಪುರ ಟೈಗರ್ ರಿಸರ್ವ್ ಲೋಗೋ ಇದೆ. ಹಾಗೂ ಮೋದಿ ಧರಿಸಿದ ಸಫಾರಿ ಡ್ರೆಸ್ ಅರಣ್ಯ ಇಲಾಖೆಯ ಸಮವಸ್ತ್ರವನ್ನು ಹೋಲುವಂತೆ ಇದ್ದದ್ದು ವಿಶೇಷ.


