ನಟಿ ಹಾಗೂ ಸಂಸದೆ ಹೇಮಾ ಮಾಲಿನಿ(Hema malini ) ಕುರಿತು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ (Randeep surjewala) ನೀಡಿರುವ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ಈ ಹಿಂದೆ ಕಂಗನಾ (Kangana ranaut) ವಿಚಾರದಲ್ಲಿ ಕೆಳಮಟ್ಟದಲ್ಲಿ ಟೀಕಿಸಿದ್ದ ಕಾಂಗ್ರೆಸ್ ಈಗ ಹೇಮಾಮಾಲಿನಿ ವಿಚಾರದಲ್ಲೂ ಅದೇ ಇಕ್ಕಟ್ಟಿಗೆ ಸಿಲುಕಿದೆ. ರಣದೀಪ್ ಸುರ್ಜೇವಾಲಾ ಹೇಳಿಕೆಗೆ ದೇಶವ್ಯಾಪಿ ಮಹಿಳೆಯರು ಖಂಡನೆ ವ್ಯಕ್ತಪಡಿಸಿದ್ದಾರೆ.

ನಾವು ಶಾಸಕರು, ಸಂಸದರನ್ನು (MLA & mp) ಯಾಕೆ ಆಯ್ಕೆ ಮಾಡುತ್ತೇವೆ? ಅವರು ನಮ್ಮ ಧ್ವನಿಯಾಗಬೇಕು ಅನ್ನೋ ಉದ್ದೇಶದಿಂದ, ನಮ್ಮ ವಿಚಾರಗಳನ್ನ ಒಪ್ಪಿಸಲಿ ಎಂದು ಅವರನ್ನ ಆರಿಸಿ ಕಳುಹಿಸ್ತೇವೆ . ಆದರೆ ಹೇಮ ಮಾಲಿನಿಯಂತೆ ನೆಕ್ಕಲು ಕಳುಹಿಸಲಾಗುತ್ತದಾ? ಹೇಮಾ ಮಾಲಿನಿಯನ್ನ ನೆಕ್ಕೋಕೆ ಸಂಸದರನ್ನಾಗಿ ಮಾಡಿದ್ದಾರೆ ಎಂದು ರಣದೀಪ್ ಸುರ್ಜೇವಾಲಾ ಭಾಷಣದ ಸಂದರ್ಭದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ.

ಸದ್ಯ ರಣದೀಪ್ ಸುರ್ಜೇವಾಲಾ ಹೇಳಿಕೆಯನ್ನ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ(BJP), ಕಾಂಗ್ರೆಸ್ ಮಹಿಳೆಯರಿಗೆ ಕೊಡುವ ಗೌರವ ಇದೇ ನೋಡಿ ಎಂದು ಟೀಕೆ ಮಾಡಿದೆ. ಇನ್ನು ಈ ಹೇಳಿಕೆಗೆ ,ಮಹಿಳೆಯರನ್ನು ಗೌರವಿಸೋದನ್ನ ಮೋದಿ(Modi) ನೋಡಿ ಕಲಿಯಿರಿ ಹೇಮಾ ಮಾಲಿನಿ ಸುರ್ಜೇವಾಲಾಗೆ ಟಾಂಗ್ ಕೊಟ್ಟಿದ್ದಾರೆ. ಮತ್ತೊಂದುಕಡೆ ಇದು ಮಾತೃಶಕ್ತಿಗೆ ಮಾಡಿದ ಅವಮಾನ ಅಂತಾ ಯೋಗಿ ಆದಿತ್ಯನಾಥ್ (Yogi adithyanath) ಕಿಡಿ ಕಾರಿದ್ದಾರೆ. ಈಗಾಗಲೇ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸೊಮೋಟೊ ಕೇಸ್ ದಾಖಲಾಗಿದ್ದು, ಹರಿಯಾಣ ಮಹಿಳಾ ಆಯೋಗದಿಂದಲೂ ಈ ಬಗ್ಗೆ ಸ್ಪಷ್ಟನೆ ಕೇಳಿ ಸುರ್ಜೆವಾಲಾಗೆ ನೋಟಿಸ್ ನೀಡಲಾಗಿದೆ.