ಕಾಂಗ್ರೆಸ್(congress) ಪ್ರಣಾಳಿಕೆ ವಿರುದ್ಧ ಬಿಜೆಪಿ(BJP) ನಾಯಕರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರವೇ ಈ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ʻಬಸನಗೌಡ ಪಾಟೀಲ್ ಯತ್ನಾಳ್,(basanagowda patil yathnal) ಹನುಮಂತನ ಸುದ್ದಿಗೆ ಬಂದಿದ್ದಕ್ಕೆ ಹೆಲಿಕಾಪ್ಟರ್ ಗ್ಲಾಸ್ ಪುಡಿಪುಡಿಯಾಗಿದೆ, ಮುಂದೆ ತಂಟೆಗೆ ಬಂದರೆ ಡಿಕೆ ಶಿವಕುಮಾರ್(dk shivakumar) ಅವರೇ ನೀವೂ ಪತನವಾಗಲಿದ್ದೀರಿʼ ಅಂತ ಡಿಕೆಶಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಕೊಪ್ಪಳದ(koppala) ಗಂಗಾವತಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ʻಡಿಕೆ ಶಿವಕುಮಾರ್(dk shivakumar) ಇನ್ನೊಂದು ಸಲ ಹುಟ್ಟಿಬಂದರೂ ಬಜರಂಗದಳವನ್ನು ಬ್ಯಾನ್ ಮಾಡಲು ಸಾಧ್ಯ ಇಲ್ಲ. ಬಜರಂಗದಳದವರು(bhajarangdal) ಭಯೋತ್ಪಾದಕರಲ್ಲ, ದೇಶ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಬಜರಂಗದಳ ಎಂದರೆ ಗಂಗಾವತಿ. ಅಲ್ಲದೆ, ಭಾರತದ ರಾಮ ಮೋದಿ, ಹನುಮ ಯೋಗಿ, ಲಕ್ಷ್ಮಣ ಅಮಿತ್ ಶಾ. ಬಜರಂಗದಳ ನಿಷೇಧ ಮಾಡೋರನ್ನು ತಿಹಾರ ಜೈಲಿಗೆ ಕಳುಹಿಸೋಣ ಎಂದು ಯತ್ನಾಳ್ ಕಾಂಗ್ರೆಸ್(congress) ವಿರುದ್ಧ ಕಿಡಿಕಾರಿದರು. ʻಕಾಂಗ್ರೆಸ್ಅನ್ನ ಸೋಲಿಸಲು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ(siddaramaiah) ಇಬ್ಬರೇ ಸಾಕು. ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್ ಢಂ. ಇನ್ನು ಸಿದ್ದರಾಮಯ್ಯ ಪ್ರಚಾರಕ್ಕೆ ಹೋದಲ್ಲೆಲ್ಲಾ ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ (basanagowda patil yathnal) ವ್ಯಂಗ್ಯವಾಗಿದ್ರು.
