ಪಠ್ಯಪುಸ್ತಕ ಪರಿಷ್ಕರಣೆ, ಟಿಪ್ಪು ಸುಲ್ತಾನ್ ಇತಿಹಾಸ ಕೈಬಿಟ್ಟ ಬಿಟ್ಟು ಕೆ.ಬಿ. ಹೆಡ್ಗೆವಾರ್ ಭಾಷಣ ಸೇರ್ಪಡೆ ವಿಚಾರ ಕುರಿತು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರಲ್ಲಿ ಮಾತಾಡಿದ ವಿಶ್ವನಾಥ್, ಪಠ್ಯಪುಸ್ತಕ ಪರಿಷ್ಕರಣೆ ಸಮೀತಿಯಲ್ಲಿ ಯಾರ್ಯಾರು ಇದ್ದಾರೆ. ಯಾರ ಪಠ್ಯವನ್ನು ಕೈಬಿಡಲಾಗಿದೆ,ಯಾವ ಪಠ್ಯ ಸೇರ್ಪಡೆಯಾಗಿದೆ ಎಂಬುದು ಜನರಿಗೆ ಗೊತ್ತಾಗಬೇಕು. ಸಾರ್ವಜನಿಕವಾಗಿ ಚರ್ಚೆಯಾಗಬೇಕು. ವೈಜ್ಞಾನಿಕ. ವೈಚಾರಿಕವಾಗಿ ಇರುವಂತಹ ಪಠ್ಯವನ್ನು ಮಕ್ಕಳು ಓದಬೇಕು. ಬರೀ ಧರ್ಮದ ಆಧಾರಿತ ಪಠ್ಯ ಪುಸ್ತಕ ಯಾವುದೇ ಕಾರಣಕ್ಕೂ ಬೇಡ ಎಂದು ಆಗ್ರಹಿಸಿದರು.
ರೋಹಿತ್ ಚಕ್ರವರ್ತಿ ಯಾರು ಅವರ ಹಿನ್ನಲೆ ಏನು? ಎಂಬುದು ಎಲ್ಲರಿಗೂ ಗೊತ್ತಾಗಲಿ ಹೇಳಿ. ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾಗಿರುವುದು ದುರಂತ ಎಂದು ವಿಶ್ವನಾಥ್ ಇದೇ ವೇಳೆ ತೀವ್ರ ವಾಗ್ದಾಳಿ ನಡೆಸಿದರು.

ಹೆಡ್ಗೆವಾರ್ ಮತ್ತು ಟಿಪ್ಪು ಹೋಲಿಕೆ ಸರಿಯಲ್ಲ. ಟಿಪ್ಪು ಭ್ರಿಟೀಷರ ವಿರುದ್ದ ಹೋರಾಡಿದ ಚರಿತ್ರೆ ಗೊತ್ತಿಲ್ವಾ..? ಬ್ರಿಟೀಷರ ವಿರುದ್ಧ ಮಂಡಿಯೂರದೇ ತಮ್ಮ ಮಕ್ಕಳನ್ನ ಗಿರವಿ ಇಟ್ಟವನು ಎಂದು ಹೆಚ್.ವಿಶ್ವನಾಥ್ ಹೇಳಿದರು.






