ಮಳೆರಾಯ ಎಡಬಿಡದೆ ಸುರಿದ ಕಾರಣ ಬನಶಂಕರಿ 3 ನೇ ಹಂತದ ಇಟ್ಟ ಮಡುವಿನ ಕಡೆಯಿಂದ ಮಳೆಯ ನೀರು ಹರಿದು ಬರುವ ರಭಸಕ್ಕೆ
ಗುರುದತ್ತ ಬಡಾವಣೆಯ ಪ್ರಮುಖ ರಸ್ತೆಯಲ್ಲಿ ನಿಂತು ಜಗತ್ ವಿಖ್ಯಾತ ಜೋಗ ಜಲಪಾತ ನೋಡ ಬಹುದು ಶನಿವಾರ ಸುರಿದ ಭಾರಿ ಪ್ರಮಾಣದ ಮಳೆಗೆ ಅಕ್ಷರಶಃ ಇಟ್ಟಮಡು ಕಡೆಯಿಂದ ಹರಿದು ಬಂದ ಮೋರಿ ನೀರು ಹಾಗೂ ಮಳೆ ನೀರು ಗುರುದತ್ತ ಬಡವಾಣೆಗೆ ಹಾಗೂ ದತ್ತಾತ್ರೇಯ ದೇವಾಲಯಕ್ಕೆ ಹಾಗೂ ಟಿ.ಜಿ ಲೇಔಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಉಕ್ಕಿ ಹರಿದು ನಾಗರಿಕರು ಪರಾದಾಡುವಂತೆ ಆಯಿತ್ತು ….ವಾಹನ ಸಂಚಾರಕ್ಕೆ ಅಡತಡೆ ಉಂಟಾಯಿತ್ತು.
ಬೆಂಗಳೂರು ಜಲಮಂಡಳಿ ಅಥವಾ ಒಳಚರಂಡಿ ಅವರು ಕಾಮಗಾರಿ ನಡೆಸಲು ಚರಂಡಿಯ ಪೈಪ್ ಲೈನ್ ರಿಪೇರಿ ಮಾಡಲು ತೆಗೆದ ಪರಿಣಾಮ ರಸ್ತೆಯ ತುಂಬಾ ಮೋರಿ ನೀರು ಉಕ್ಕಿ ಹರಿದ ಪರಿಣಾಮ ಮನೆಯ ಒಳಗೆ ನೀರು ಹರಿದು ನಾಗರೀಕರು ಪರದಾಟ ಮಾಡುವಂತೆ ಆಯಿತು .
ರಾಜರಾಜೇಶ್ವರಿ ನಗರ ಮತ್ತು ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಮಧ್ಯೆ ಇರುವ ರಸ್ತೆಯು ಹೊಸಕೇರಿಹಳ್ಳಿಯ ದತ್ತಾತ್ರೇಯ ದೇವಾಲಯದ ಸಮೀಪದಲ್ಲಿ ಹಾಗೂ ಗುರುದತ್ತ ಬಡಾವಣೆಯ ರಾಜ ಕಾಲುವೆಯ ಹಿಂಬದಿಯಲ್ಲಿ ಬರುತ್ತದೆ ಆದರೆ ಇಲ್ಲಿನ ನಾಗರೀಕರ ಬದುಕು ?
ಜೋರಾಗಿ ಮಳೆ ಬಂದ ಪರಿಣಾಮವಾಗಿ ರಸ್ತೆಯ ಮೇಲೆ ಚರಂಡಿ ನೀರು ಉಕ್ಕಿ ಹರಿದು ಜನ ಜೀವನ ಅಸ್ತವ್ಯಸ್ತ ವಾಯಿತ್ತು , ಹಾಗೂ ಜಲಮಂಡಳಿ ಅವರು ಚರಂಡಿ ಅಗೆದು ಪೈಪ್ ಲೈನ್ ನ ಪೈಪು ಅನ್ನು ಹಾಗೆಯೇ ರಸ್ತೆಯ ಮೇಲೆ ಹಾಗೂ ರಸ್ತೆಯ ಬದಿಯಲ್ಲಿ ಬಿಟ್ಟ ಪರಿಣಾಮ ಕಳೆದ1 ತಿಂಗಳಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಯ ಕಿರಿ ಕಿರಿ ಬೇರೆ ಎನ್ನುತ್ತಾರೆ ಸ್ಥಳಿಯ ನಾಗರೀಕರು .
ಒಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕುವುದೇ ಎಂಬುದೇ ಯಕ್ಷ ಪ್ರಶ್ನೆ ಆಗಿದೆ ಎನ್ನುತ್ತಾರೆ ಸ್ಥಳಿಯರು .
ಅಪಾಯ ಸಂಭವಿಸುವ ಮುನ್ನ ಜಲಮಂಡಳಿ ಹಾಗೂ ಬಿ.ಬಿ.ಎಂ.ಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರೀಕರು ಅಗ್ರಹಿಸಿದ್ದಾರೆ .