ಡೋಡೋಮಾ: ವ್ಯಾಪಕ ಮಳೆಯಿಂದಾಗಿ ತಾಂಜಾನಿಯಾದಲ್ಲಿ (Tanzania) ಬರೋಬ್ಬರಿ 155 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಲ್ಲದೇ, ವ್ಯಾವಕ ಮಳೆಗೆ 236 ಜನ ಗಾಯಗೊಂಡಿದ್ದಾರೆ. ಮಳೆಯಿಂದಾಗಿ ತಾಂಜಾನಿಯಾದಲ್ಲಿ ಭೂ ಕುಸಿತ ಉಂಟಾಗಿದೆ. ಪೂರ್ವ ಆಫ್ರಿಕಾದಾದ್ಯಂತ (East Africa) ತೀವ್ರವಾದ ಮಳೆಯಾಗುತ್ತಿದೆ. ಎಲ್ ನಿನೋ ಹವಾಮಾನದ ಮಾದರಿಯು ಭಾರೀ ಮಳೆಗೆ ಕಾರಣವಾಗಿದೆ. ಇದರಿಂದಾಗಿ ಪ್ರವಾಹ ಹೆಚ್ಚಾಗಿದೆ. ರಸ್ತೆಗಳು, ಸೇತುವೆಗಳು ಮತ್ತು ರೈಲು ಮಾರ್ಗಗಳು ನಾಶವಾಗಿವೆ ಎಂದು ಅಲ್ಲಿನ ಪ್ರಧಾನಿ ಕಾಸಿಮ್ ಮಜಲಿವಾ ಹೇಳಿದ್ದಾರೆ.
ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹದಿಂದ 51 ಸಾವಿರ ಮನೆಗಳಿಗೆ ಹಾನಿಯಾಗಿದೆ. 2 ಲಕ್ಷಕ್ಕೂ ಅಧಿಕ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ಜನರ ರಕ್ಷಣೆಗೆ ತುರ್ತು ಸೇವೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಸದ್ಯ ಪೂರ್ವ ಆಫ್ರಿಕಾದಲ್ಲಿ ಬೆಂಬಿಡದೆ ಮಳೆಯಾಗುತ್ತಿದ್ದು, ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.