ರಾಜ್ಯದಲ್ಲಿ ಸರ್ವಪಕ್ಷಗಳು ಆಂತರಿಕ ತಿಕ್ಕಾಟಕ್ಕೆ ಸಾಕ್ಷಿಯಾಗಲಿವೆ ಎಂದು ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಅಪೂರ್ವ ಮಲ್ಟಿಸ್ಪೆಷಲಿಟಿ ಆಸ್ಪತ್ರೆ ವೀಕ್ಷಣೆಗೆ ಶುಕ್ರವಾರ ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನ ಜನತೆಗೆ ಆರೋಗ್ಯಕರ ಹಿತದೃಷ್ಟಿಯಿಂದ ನೂತನ ಆಸ್ಪತ್ರೆ ಉದ್ಘಾಟಿಸಲಾಗಿದೆ ಪ್ರಚಾರವಾಗುವ ಮೊದಲೇ ಅಪಪ್ರಚಾರಕ್ಕೆ ಈಡಾಗಿದೆ. ಆ ಅಪಪ್ರಚಾರವನ್ನು ಉತ್ತಮ ಪ್ರಚಾರವೆಂದು ಕಾಯಕವನ್ನು ಮುಂದುವರಿಸಿದರೆ ಜನತೆ ಆರೋಗ್ಯ ಸುಭದ್ರ ಎಂದು ಅವರು ಹೇಳಿದರು.

ರಾಜ್ಯದ ಸರ್ವಪಕ್ಷಗಳು ಆಂತರಿಕ ಒಳಜಗಳದಿಂದ ರಾಜ್ಯ ರಾಜಕಾರಣ ಅತಂತ್ರ ಸ್ಥಿತಿಗೆ ತಲುಪುತ್ತದೆ,ಎಂದು ಸ್ಪೋಟಕ ಹೇಳಿಕೆ ನೀಡಿ, ರಾಜ್ಯದಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆ ನೋಡುತ್ತಿದ್ದರೆ ನಾಚಿಕೆ ಆಗುತ್ತಿದೆ ಖಾದಿ ಹಾಕುವುದು ದೊಡ್ಡದಲ್ಲ ಅದರೊಳಗೆ ಅಡಗಿರುವ ಮಹತ್ವ ತಿಳಿಯಬೇಕು ಎಂದು ಅವರು ಹೇಳಿದರು.
ನಿಧಿ ಇದ್ದಲ್ಲಿ ವಿಧಿಯಾಟ ಬಗ್ಗೆ ಗಮನಹರಿಸಬೇಕು ಎಂದು ಮುರುಘಾ ಶ್ರೀಗಳ ಘಟನೆಗೆ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜ್ಯದಲ್ಲಿ ಜಲಕಂಟಕ, ವಿವಿಧ ಕಡೆ ಭೂಕಂಪನದ ಅನುಭವ ಆಗಲಿದೆ ಎಂದು ನುಡಿದರು..
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಪುರಸಭಾ ಸದಸ್ಯ ರವೀಂದ್ರ ಬಾಬು, ಚೇತನ್ ಮಹೇಶ್, ಡಾ : ಚಂದನ್, ರಮೇಶ್, ರೂಪೇಶ್, ಸಚಿನ್, ಸೇರಿದಂತೆ ಉಪಸ್ಥಿತರಿದ್ದರು.