ಬೆಳಗಾವಿಯ (Belagum) ರಾಜಕಾರಣ ಮತ್ತೆ ಗರಿಗೆದರಿದೆ. ಕುಂದಾನಗರಿಯ ಇಬ್ಬರು ಮಂತ್ರಿಗಳ ಮಧ್ಯೆ ಮತ್ತೆ ಸದ್ದಿಲ್ಲದೆ ಮುನಿಸು ಶುರುವಾಗಿದೆ. ತಮ್ಮ ಆಪ್ತರಿಗೆ ಕಾಂಗ್ರೆಸ್ (Congress) ಜಿಲ್ಲಾಧ್ಯಕ್ಷ ಹುದ್ದೆ ಕೊಡಿಸಲು ಸಚಿವ ಸತೀಶ್ ಜಾರಕಿಹೊಳಿ (Minister Satish jarakiholi) ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ (Lakshmi hebbalkar) ಮಧ್ಯೆ ಫೈಟ್ ಶುರುವಾಗಿದೆ.

ಕಳೆದ ವರ್ಷಗಳಿಂದ ಬೆಳಗಾವಿಯ ಜಿಲ್ಲಾಧ್ಯಕ್ಷರಾಗಿದ್ದ ವಿನಯ ನಾವಳಗಟ್ಟಿಗೆ, ಈ ಬಾರಿ ಪಕ್ಷ ಕೊಕ್ ನೀಡೋ ಸಾಧ್ಯತೆಗಳೇ ಹೆಚ್ಚಾಗಿದೆ. ಹೀಗಾಗಿ ಮಹಾಂತೇಶ ಮತ್ತಿಕೊಪ್ಪಗೆ (Mahnatesha mattikoppa) ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಪಟ್ಟ ಕಟ್ಟಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಡಿಸಿಎಂ ಡಿಕೆಶಿ ಮೂಲಕ ಲಾಭಿ ಮಾಡುತ್ತಿದ್ದಾರೆ.
ಆದ್ರೆ ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತ ನಾಯಕ ಆಗಿರುವ ಬಸವರಾಜ್ ಶೇಗುಣಸಿಗೆ ಜಿಲ್ಲೆಯ ಅಧ್ಯಕ್ಷ ಸ್ಥಾನ ಸಿಗಬೇಕೆಂದು ಬಿಗಿಪಟ್ಟು ಹಿಡಿದಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಮತ್ತೊಮ್ಮೆ ಹೆಬ್ಬಾಳ್ಕರ್ V/S ಜಾರಕಿಹೊಳಿ ಜಟಪತಿಯಾಗಿದೆ.