ಪಪ್ಪಾಯ ಹಣ್ಣನ್ನ ಪ್ರತಿಯೊಬ್ಬರು ಕೂಡ ತುಂಬಾನೇ ಇಷ್ಟಪಟ್ಟು ತಿನ್ನುತ್ತಾರೆ. ಎಲ್ಲಾ ಸೀಸನ್ ನಲ್ಲಿಯು ಕೂಡ ಈ ಹಣ್ಣು ನಮಗೆ ದೊರೆಯುತ್ತದೆ.ಬೇಸಿಗೆಯಲ್ಲಿ ಈ ಹಣ್ಣನ್ನು ಸೇವಿಸೋದ್ರಿಂದನಮ್ಮ ದೇಹಕ್ಕೆ ಹೆಚ್ಚಿನ ನೀರಿನ ಅಂಶ ಸಿಗುತ್ತದೆ, ದೇಹವನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಇನ್ನು ಪಪಾಯದಲ್ಲಿ ವಿಟಮಿನ್ ಸಿ ಹಾಗು ವಿಟಮಿನ್ ಎ ಆಂಟಿಆಕ್ಸಿಡೆಂಟ್ ಗಳು ಮತ್ತು ಪಪ್ಪಾಯಿ ನಂತಹ ಕಿಣ್ವಗಳಂತ ಪೋಷಕಾಂಶಗಳಿರುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು.
ಹೆಚ್ಚು ಜನ ಪಪ್ಪಾಯ ಹಣ್ಣನ್ನ ತಿನ್ನುತ್ತಾರೆ. ಆದರೆ ಈ ಹಣ್ಣಿನಿಂದ ಸಿಗುವಂತ ಲಾಭಗಳೇನು ಅನ್ನೋದನ್ನ ಬಗ್ಗೆ ಕೆಲವರಿಗೆ ಮಾಹಿತಿ ಇರೋದಿಲ್ಲ, ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಅನ್ನೋದನ್ನ ಡಿಟೇಲ್ಸ್ ಹೀಗಿದೆ.
ಜೀರ್ಣಕ್ರಿಯೆಗೆ ಉತ್ತಮ
ಪಪ್ಪಾಯ ಹಣ್ಣನ್ನ ತಿನ್ನೋದ್ರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಪಪಾಯಿ ಹಣ್ಣಿನಲ್ಲಿ ಪಪೈನ್ ಅಂಶ ಇರೋದ್ರಿಂದ ಇದು ಪ್ರೋಟೀನ್ ಗಳನ್ನ ಡಿವೈಡ್ ಮಾಡುವ ಅಂಶವಾಗಿದೆ ಹಾಗೂ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ನಾವು ಪಪ್ಪಾಯ ಹಣ್ಣನ್ನ ತಿನ್ನೋದ್ರಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಜಯಪಚಯವನ್ನ ಕ್ರಿಯೆ ಸುಲಭವಾಗುತ್ತದೆ.ಇನ್ನು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಇದು ಕಾಪಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ
ಪಾಪಾಯಿಯಲ್ಲಿ ಇರುವಂತಹ ವಿಟಮಿನ್ ಅಂಶಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಜೊತೆಗೆ ದೇಹದಲ್ಲಿ ಇರುವಂತಹ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಿ ಯಾವ ಸೋಂಕುಗಳು ಕೂಡ ಅನಾರೋಗ್ಯಕ್ಕೆ ನಮ್ಮನ್ನು ಈಡು ಮಾಡದೆ ಇರುವ ರೀತಿ ಕಾಪಾಡುತ್ತದೆ ಹಾಗೂ ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ.
ತ್ವಚೆಯ ರಕ್ಷಣೆ ಮಾಡುತ್ತದೆ
ಪ್ರತಿದಿನ ನಾವು ಪಪ್ಪಾಯಿ ಹಣ್ಣನ್ನ ತಿನ್ನೋದ್ರಿಂದ ಅದರಲ್ಲಿರುವಂತಹ ವಿಟಮಿನ್ ಎ ಹಾಗೂ ಸಿ ಕಾಲಿಜನ್ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ. ಇದರಿಂದ ನಮ್ಮ ತ್ವಚೆಯಲ್ಲಿ ಇರುವಂತಹ ಕಪ್ಪು ಕಲೆಗಳು, ಸನ್ ಟ್ಯಾನ್ ಆಗಿರಬಹುದು ಪಿಂಪಲ್ ಮಾರ್ಕಿದ್ರು ಕೂಡ ತಕ್ಷಣವೇ ನಿವಾರಣೆ ಮಾಡುತ್ತದೆ ಹಾಗೂ ಪಿಂಪಲ್ ಬರದಂತೆ ಕಾಪಾಡುತ್ತದೆ. ಹೊಳೆಯುವ ತ್ವಚೆ ನಮ್ಮದಾಗುತ್ತದೆ. ಏಜಿಂಗ್ ಪ್ರಾಬ್ಲಮ್ ಕೂಡ ಕಂಡು ಬರುವುದಿಲ್ಲ.
ವೈಟ್ ಲಾಸ್
ಡಯಟ್ ಮಾಡುವವರಿಗೆ ಪಪಾಯಿ ತುಂಬಾನೇ ಉತ್ತಮ. ಇದು ಹೆಚ್ಚು ಕ್ಯಾಲೋರಿಯನ್ನ ಹೊಂದಿದೆ ಮತ್ತು ಫೈಬರ್ ಅಂಶ ಹೆಚ್ಚಿರುವುದರಿಂದ ಡಯಟ್ ಮಾಡುವವರಿಗೆ ಹಸಿವು ಜಾಸ್ತಿ ಆಗುವುದಿಲ್ಲ. ಹಸಿವನ್ನ ನಿಯಂತ್ರಿಸುತ್ತದೆ ಹಾಗೂ ನಮ್ಮ ತೂಕವನ್ನು ಕಡಿಮೆ ಮಾಡುವುದಕ್ಕೆ ಇದು ಸಹಕಾರಿಯಾಗುತ್ತದೆ.
ಇಷ್ಟೇ ಅಲ್ಲದೆ ಪಪಾಯಿ ಹಣ್ಣಿನಿಂದ ನಮ್ಮ ದೇಹಕ್ಕೆ ಇನ್ನು ಸಾಕಷ್ಟು ಪ್ರಯೋಜನಗಳಿವೆ. ಕ್ಯಾನ್ಸರ್ ಅಪಾಯವನ್ನ ಕಡಿಮೆ ಮಾಡುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನ ನಿಯಂತ್ರಿಸುತ್ತದೆ. ಮಾತ್ರವಲ್ಲದೆ ಡಯಾಬಿಟಸ್ ಇದ್ದವರು ಪಪ್ಪಾಯ ಹಣ್ಣನ್ನು ತಿನ್ನೋದ್ರಿಂದ ಬ್ಲಡ್ ಶುಗರ್ ಲೆವೆಲ್ ಅನ್ನ ಬ್ಯಾಲೆನ್ಸ್ ಮಾಡೋದಕ್ಕೂ ಕೂಡ ಇದು ಸಹಾಯಕಾರಿ.