ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ನಟ ಧನಂಜಯ್ ಆಗಸ್ಟ್ 23ಕ್ಕೆ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ . ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ ನಟ ಡಾಲಿ ಧನಂಜಯ್ ಈ ಬಾರಿ ಹುಟ್ಟುಹಬ್ಬ ಅಚರಿಸದಿರಲು ನಿರ್ಧರಿಸಿ ಈ ಕುರುತು ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ಧಾರೆ. ಆದರೆ ಅಭಿಮಾನಿಗಳಿಗೆ ಭರ್ಜರು ಗಿಫ್ಟ್ ಒಂದನ್ನು ನೀಡಿದ್ದಾರೆ.
ಹೌದು, ಈ ಬಾರಿ ಹುಟ್ಟುಹಬ್ಬಕ್ಕೆ ಭರ್ಜರಿ ಮಂಗಳವಾರ ‘ಹೆಡ್ ಬುಷ್’ ಚಿತ್ರದ ‘ರೌಡಿಗಳು ನಾವು ರೌಡಿಗಳು’ ಎನ್ನುವ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗ್ತಿದೆ. ಈ ಕುರಿತು ಸ್ವತಂ ಡಾಲಿ ಧನಂಜಯ್ ಅವರೇ ಟ್ವೀಟ್ ಮಾಡಿದ್ದು, ‘ಹೆಡ್ ಬುಷ್’ ಚಿತ್ರದ ‘ರೌಡಿಗಳು ನಾವು ರೌಡಿಗಳು’ ಎನ್ನುವ ರೌಡೀಸ್ ಆಂಥಮ್ ಸಾಂಗ್ ಬಿಡುಗಡೆಯಾಗುತ್ತಿದೆ ನೋಡಿ ಎಂದು ಹೇಳಿದ್ದಾರೆ.

ಬೆಂಗಳೂರು ಭೂಗತಲೋಕದ ನೈಜ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಶೃತಿ ಹರಿಹರನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೂನ್ಯ ನಿರ್ದೇಶನದ ಚಿತ್ರದಕ್ಕೆ ಚರಣ್ ರಾಜ್ ಮ್ಯೂಸಿಕ್ ಇದೆ.