ಕಳೆದ ವರ್ಷ ಬ್ಲಾಕ್ ಬ್ಲಾಸ್ಟರ್ ಎಂಟರ್ಟೈನರ್ ‘ಪುಷ್ಪ ಭಾಗ – 1’ ಸಿನಿಮಾ ರಿಲೀಸ್ ಆಗಿ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಚಿಂದಿ ಮಾಡಿತ್ತು. ಈ ಸಕ್ಸಸ್ ನಂತರ ಪುಪ್ಪ ಭಾಗ 2 ಕುರಿತು ಹೊಸ ಅಪ್ಟೇಡ್ ನೀಡಿದ್ದು ಬಹುನಿರೀಕ್ಷಿತ ‘ಪುಷ್ಪ-2’ ಚಿತ್ರಕ್ಕೆ ನಾಳೆ(ಆಗಸ್ಟ್ 22) ಮುಹೂರ್ತ ನೆರವೇರಲಿದೆ ಎಂದು ಚಿತ್ರ ತಂಡ ತಿಳಿಸಿದೆ.
ಹೌದು ಈ ಬಗ್ಗೆ ಪುಷ್ಪ ಚಿತ್ರತಂಡ ಅಧಿಕೃತವಾಗಿ ಅಪ್ಡೇಟ್ ನೀಡಿದ್ದು, ಸುಕುಮಾರ್ ದೇವರಿಗೆ ಕೈ ಮುಗಿದು ನಲ್ಲಮಾಲಾ ಅರಣ್ಯದ ಕಡೆ ಹೊರಡಲು ಅಣಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಮೊದಲ ಭಾಗಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದ್ದರಿಂದ ಸಹಜವಾಗಿಯೇ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ನಿರೀಕ್ಷೆ, ಒತ್ತಡವನ್ನೆಲ್ಲಾ ಹೊತ್ತುಕೊಂಡ ಕಥೆಯನ್ನು ಮುಂದುವರೆಸಲು ನಿರ್ದೇಶಕರು ಮುಂದಾಗಿದ್ದಾರೆ.
ರಕ್ತಚಂದನ ಸ್ಮಗ್ಲರ್ ಆಗಿ ರಗಡ್ ಲುಕ್ನಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಬ್ಬರಿಸಿ ಗೆದ್ದಿದ್ದರು. ‘ಪುಷ್ಪ’ ಸ್ಟೈಲ್ ಮ್ಯಾನರಿಸಂ ಹಾಗೂ ಸುಕುಮಾರ್ ಡೈರೆಕ್ಷನ್ ನೋಡುಗರು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ನಾಯಕಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ರೆ, ಸ್ಪೆಷಲ್ ಸಾಂಗ್ನಲ್ಲಿ ಡ್ಯಾನ್ಸ್ ಮಾಡಿ ಸಮಂತಾ ಜಾದೂ ಮಾಡಿದ್ದರು. ಫಹದ್ ಫಾಸಿಲ್ ಪೊಲೀಸ್ ಪಾತ್ರದಲ್ಲಿ ದೂಳೆಬ್ಬಿಸಿದ್ದರು.