ವಯನಾಡು (wayanadu) ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ. ಇದುವರೆಗೆ ಭೂಕುಸಿತದಲ್ಲಿ 280ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ವರದಿಯಾಗಿದೆ. ನೂರಾರು ಮಂದಿ ನಾಪತ್ತೆ ಆಗಿದ್ದು, ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಈ ದುರಂತದಲ್ಲಿ ತಲೆ, ಕೈ ಕಾಲುಗಳೇ ಇಲ್ಲದ ಸ್ಥಿತಿಯಲ್ಲಿ ಹಲವು ಶವಗಳು ಪತ್ತೆಯಾಗಿದೆ. ವಯನಾಡಿನ ಚಾಲಿಯಾರ್ ಹೊಳೆಯಲ್ಲಿ ಅರ್ಧ ಭಾಗಕ್ಕೆ ಕಟ್ ಆದ ಸ್ಥಿತಿಯಲ್ಲಿ ಮೃತದೇಹಗಳು (Dead bodies) ತೇಲಿ ಹೋಗಿದೆ. ಚೆಲ್ಲಾಪಿಲ್ಲಿಯಾದ ಅಂಗಾಂಗಗಳು ನೀರಿಲ್ಲಿ ತೇಲಿ ಹೋಗುತ್ತಿದ್ದು, ಶವಗಳು ಗುರುತು ಪತ್ತೆಯಾಗದಷ್ಟು ಭೀಕರ ಸ್ಥಿತಿಯಲ್ಲಿವೆ.
ಇನ್ನು ರಕ್ಷಣಾಕಾರ್ಯ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಸಾವಿರಾರು ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಆ್ಯಂಬುಲೆನ್ಸ್ ಡ್ರೈವರ್‌ಗಳು (ambulance drivers) ಕೂಡ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ರಕ್ಷಣಾ ಸ್ಥಳದಿಂದ ಅಸ್ವಸ್ಥರನ್ನ ಕರೆತರುವ ಕೆಲಸವನ್ನ ಆ್ಯಂಬುಲೆನ್ಸ್ ಚಾಲಕರು ಮಾಡ್ತಿದ್ದಾರೆ.