ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕನ ಅಡ್ಡಿ ಆತಂಕ ಇಲ್ಲ. ಆದರೆ ಪದೇ ಪದೇ ಕುಮಾರಸ್ವಾಮಿ ಮಾತ್ರ ಸರ್ಕಾರದ ವಿರುದ್ಧ ಆರೋಪ ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಮೊದಲು ಪೆನ್‌ಡ್ರೈವ್ ಅಂದ್ರು ಆದರೆ ಪೆನ್‌ಡ್ರೈವ್ ಬಹಿರಂಗ ಮಾಡದೆ ಸುಮ್ಮನಾದ್ರು ಈಗ ಸರ್ಕಾರದ ವಿರುದ್ಧ ಮತ್ತೆ ಕತ್ತಿ ಬೀಸಿದ್ದಾರೆ. ಅದರಲ್ಲೂ ಇಂಧನ ಇಲಾಖೆ ಬಗ್ಗೆ ದಾಖಲೆ ಸಮೇತ ಮಾತನಾಡುತ್ತೇನೆ ಅಂತಾ ಕ್ಲ್ಯೂ ಕೊಟ್ಟಿದ್ದ ಕುಮಾರಸ್ವಾಮಿ, ಯಾವ ದಾಖಲೆ ಬಿಡುಗಡೆ ಮಾಡಿದ್ರು..? ಅಂದ್ರೆ ಯಾವುದೇ ದಾಖಲೆ ಬಿಡುಗಡೆ ಮಾಡಲಿಲ್ಲ. ಸುದ್ದಿಗೋಷ್ಠಿಯ ಆರಂಭದಲ್ಲೇ ಸ್ಪಷ್ಟಪಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಯಾವ ದಾಖಲೆyನ್ನೂ ಬಿಡುಗಡೆ ಮಾಡಲು ಈ ಸುದ್ದಿಗೋಷ್ಠಿ ಕರೆದಿಲ್ಲ, ನಾಡಿನ ಜನರ ಸಮಸ್ಯೆ ಹೇಗಿದೆ ಅಂತ ಹೇಳಲು ಕರೆದಿದ್ದೇನೆ ಎಂದುಬಿಟ್ಟರು.
ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ.. ದಾಖಲೆಗಳಿಲ್ಲ..
ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಪರ್ಸಂಟೇಜ್, ಕಮಿಷನ್ ಬಗ್ಗೆ ಸರ್ಕಾರಕ್ಕೆ ಪ್ರಚಾರ ದೊರೆಯುತ್ತಿದೆ. ಈ ಹಿಂದೆ ಕಮಿಷನ್ ಅಸ್ತ್ರ ಪ್ರಯೋಗಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಕಮಿಷನ್ ಹಾಗು ಪರ್ಸಂಟೇಜ್ ವಿಡಂಬನಾತ್ಮಕವಾಗಿ ಮನರಂಜನೆ ದೊರೆಯುತ್ತಿದೆ. ಮನರಂಜನೆ ಜೊತೆಗೆ ನಾಡಿನ ಸಂಪತ್ತನ್ನ ಹೇಗೆ ಲೂಟಿ ಮಾಡ್ತಿದ್ದಾರೆ ಅಂತ ವರದಿಯಾಗ್ತಿದೆ ಎಂದಿದ್ದಾರೆ. ಇದಕ್ಕೆ ಯಾವುದೇ ದಾಖಲೆ ನೀಡಿಲ್ಲ. ಆದರೆ ಐಟಿ ದಾಳಿ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗಿದ್ದನ್ನೇ ಕುಮಾರಸ್ವಾಮಿ ಅವರು ಮತ್ತೊಮ್ಮೆ ಉಲ್ಲೇಖಿಸಿದ್ದಾರೆ. ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡಲು ಎಷ್ಟು ದರ ನಿಗದಿ ಮಾಡಿದ್ದಾರೆ..? ಅತ್ಯಂತ ಪ್ರಾಮಾಣಿಕ ಸತ್ಯಹರಿಶ್ಚಂದ್ರ ಸರ್ಕಾರ ಹೇಗೆ ನಡೆಯುತ್ತಿದೆ ಅನ್ನೊದು ಒಂದು ಭಾಗ. ಸರ್ಕಾರ ಐದು ಗ್ಯಾರೆಂಟಿಗಳಲ್ಲಿ ನಾಲ್ಕು ಗ್ಯಾರೆಂಟಿ ಜಾರಿ ಮಾಡಿ ನುಡಿದಂತೆ ನಡೆಯುತ್ತಿದ್ದೇವೆ ಅಂತ ಹೇಳ್ತಿದ್ದಾರೆ. ಆದರೆ ಮಳೆಯ ಕೊರತೆಯಿಂದ ಜಲಾಶಯದಿಂದ ನೀರು ಖಾಲಿಯಾಗಿದೆ. ವಿದ್ಯುತ್ ಸಮಸ್ಯೆ, ಬರಗಾಲದಿಂದ ಜನ ಹೇಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಅಂತ ಸರ್ಕಾರವೇ ಹೇಳುತ್ತಿದೆ. ನಮ್ಮ ಉಪಮುಖ್ಯಮಂತ್ರಿಗಳು ಮಾತೆತ್ತಿದರೆ ನುಡಿಮುತ್ತುಗಳು ಅಂತಾರೆ ಎಂದಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧವೂ ಗುಡುಗು..
ರಾಜ್ಯದಲ್ಲಿ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆದರೆ ಭೇಟಿಗೆ ಅವಕಾಶ ನೀಡುತ್ತಿಲ್ಲ ಅಂತ ಹೇಳಿದ್ರೆ ಆಗುತ್ತಾ..? ನವದೆಹಲಿ ಪ್ರತಿನಿಧಿ 1 ಹಾಗು 2 ಅಂತ ನೇಮಕ ಮಾಡಿ ಕ್ಯಾಬಿನೆಟ್ ಱಂಕ್ ಕೊಟ್ಟು ಕೂರಿಸಿದ್ದೀರಿ. ಹೋಗಬೇಕಲ್ವ..? ಭೇಟಿಯಾಗಿ ಮಾತುಕತೆ ನಡೆಸಬೆಕಲ್ವಾ..? ತೊಗರಿ ಹಾಗು ಉದ್ದಿನ ಬೆಳೆ ಶೇಕಡ 80ರಷ್ಟು ನಾಶವಾಗಿದೆ. ಬೀದರ್‌ನಲ್ಲಿ ಕಾಂಗ್ರೆಸ್ ಶಾಸಕರೇ ಗಧಾ ಪ್ರಹಾರ ಮಾಡಿದ್ದಾರೆ. ಕೊನೆಯ ಹಂತದಲ್ಲಿ ನೀರಿಲ್ಲದೆ ಭತ್ತ ಒಣಗಿ ನಿಂತಿದೆ. ಆದ್ರೆ ಮುನಿಯಪ್ಪ ತೆಲಂಗಾಣ, ಆಂಧ್ರದಲ್ಲಿ ಹೆಚ್ಚಿನ ಬೆಲೆ ಕೇಳ್ತಾವ್ರೆ ಅಂತ ಹೇಳಿದ್ದಾರೆ. ಈ ವರ್ಷ ನೀವು ಅಕ್ಕಿ ಎಲ್ಲಿ ಖರೀದಿ ಮಾಡ್ತೀರಿ..? ಯಾವ ರಾಜ್ಯ ನಿಮಗೆ ಅಕ್ಕಿ ಕೊಡ್ತಾರೆ..? ಬೇರೆ ದೇಶಗಳಿಂದ ಆಹಾರ ಪದಾರ್ಥ ಆಮದು ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ. ಇದಕ್ಕೆ ಸರ್ಕಾರದ ಸಿದ್ಧತೆಗಳೇನು..? ಎಂದು ಪ್ರಶ್ನಿಸಿದ್ದಾರೆ. ಆದರೆ ಮೈತ್ರಿ ಆಗಿರುವ ಬಿಜೆಪಿ ನಾಯಕರ ಜೊತೆಗೆ ನಾನು ಮಾತನಾಡುತ್ತೇನೆ. ಬನ್ನಿ ನಾನು ಕರೆದುಕೊಂಡು ಹೋಗಿ ಭೇಟಿ ಮಾಡಿಸ್ತೇವೆ ಎನ್ನುವ ಮಾತು ಬರಲಿಲ್ಲ.

ಇಂಧನ ಇಲಾಖೆ ಬಗ್ಗೆ ಸುಖಾಸುಮ್ಮನೆ ಆರೋಪದ ಸುರಿಮಳೆ..!
ರೈತರ ಬೆಳೆಗಳಿಗೆ ನೀರಿಲ್ಲ, ಕರೆಂಟ್ ಕೊಟ್ರೆ ಅಂತರ್ಜಲದಿಂದ ಆದರೂ ಬೆಳೆಗಳನ್ನು ಉಳಿಸಿಕೊಳ್ತಾರೆ. ವಿದ್ಯುತ್ ಸರಬರಾಜು ಮಾಡುವಾಗ ಸೋರಿಕೆ ಎಲ್ಲಿ ಆಗ್ತಿದೆ ಅನ್ನೋದನ್ನು ಚೆಕ್ ಮಾಡಲು ಹೇಳಿದ್ದೀರಿ. ವಿದ್ಯುತ್ ಸೋರಿಕೆ ನಿನ್ನೆ ಮೊನ್ನೆಯದಲ್ಲ, 40-50 ವರ್ಷದಿಂದ ಈ ಸೋರಿಕೆ ನಡೆಯುತ್ತಿದೆ ಎಂದಿದ್ದಾರೆ. ಉತ್ತರ ಪ್ರದೇಶದಿಂದ ವಿದ್ಯುತ್ ಖರೀದಿ ಮಾಡ್ತೀವಿ ಎಂದಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದಾರೆ. ರಿಟರ್ನ್ ಪಾಲಿಸಿ ಅಡಿ ವಿದ್ಯುತ್ ಪಡೆಯುವುದಕ್ಕೆ ನಿರ್ಧಾರ ಮಾಡಿದ್ದೇವೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ. ಅಂದ ಮೇಲೆ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಆದಾಗ ವಾಪಸ್ ಕೊಡುವುದು ಇದರ ಉದ್ದೇಶ. ಇಲ್ಲಿ ವಿದ್ಯುತ್ ಖರೀದಿ ಬಗ್ಗೆ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅನಿಸುವುದರಲ್ಲಿ ಯಾವುದೇ ಸಂದೇಹ ಇಲ್ಲ ಎನ್ನಬಹುದು. ಸೋಲಾರ್ ಪ್ಲಾಂಟ್ ಬಗ್ಗೆ ಮಾತನಾಡಿದ್ದಾರೆ, ಆದರೆ ತಾನು ಮುಖ್ಯಮಂತ್ರಿ ಆಗಿ 2 ಬಾರಿ ಕೆಲಸ ಮಾಡಿದ್ದಾರೆ. ಆದರೆ ಆ ಸಮಯದಲ್ಲಿ ತಾನು ಏನು ಮಾಡಿದೆ ಅನ್ನೋದನ್ನು ಹೇಳಬೇಕಲ್ಲವೇ..? ಆರೋಪ ಮಾಡುವುದು ಸುಲಭ, ತಾನೆಷ್ಟು ಮಾಡಿದ್ದೇನೆ ಎನ್ನುವುದನ್ನು ಹೇಳುವುದು ಕಷ್ಟ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಸರ್ಕಾರ ಪ್ರಶ್ನಿಸುವ ಕುಮಾರಸ್ವಾಮಿ ಸರಿ.. ಆದರೆ ಬಾಲೀಶ ಆಗಬಾರದಲ್ವಾ..?
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಅದು ತಪ್ಪಲ್ಲ. ವಿರೋಧ ಪಕ್ಷದ ನಾಯಕನಾಗಿ ಈ ರೀತಿ ಸರ್ಕಾರ ತಪ್ಪು ಹಾದಿ ಹಿಡಿಯದಂತೆ ಪ್ರಶ್ನಿಸಬೇಕು. ಆದರೆ ಓರ್ವ ಮಾಜಿ ಸಿಎಂ ಪ್ರಶ್ನೆಗಳು ಬಾಲೀಶ ಆಗಬಾರದು ಅಲ್ಲವೇ..? ವಿದ್ಯುತ್ ಪೂರೈಕೆಗಾಗಿ ಜನರು ಪ್ರತಿಭಟಿಸ್ತಾವ್ರೆ. ಆದ್ರೆ ಇವ್ರು ಇಲ್ಲಿ ಕ್ರಿಕೆಟ್ ಮ್ಯಾಚ್ ನೋಡ್ಕೊಂಡು ಮಜಾ ಮಾಡ್ಕೊಂಡು ಕುಳಿತಾವ್ರೆ ಎಂದು ಟೀಕಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ಹಾಗು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹೋಗಿದ್ದರು. ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಹೋಗಿದ್ರಾ..? ಯಾರಿಗೆ ಬೆಂಬಲ ಕೊಡಲು ಹೋಗಿದ್ರಿ..? ಎಂದು ಪ್ರಶ್ನಿಸಿದ್ದಾರೆ. ಆದರೆ ನಮ್ಮದೇ ರಾಜ್ಯದಲ್ಲಿ ಒಂದು ಪಂದ್ಯ ನಡೆದಾಗ ಸರ್ಕಾರ ಬೆಂಬಲಿಸಬೇಕು ಅನ್ನೋದು ಅವರಿಗೂ ಗೊತ್ತಿರೋ ವಿಚಾರವೇ ಹೌದು. ಆದರೆ ಬಿಜೆಪಿ ಜೊತೆಗೆ ಮೈತ್ರಿ ಮಾತುಕತೆ ನಡೆಸಿದ ಬಳಿಕ ದ್ವೇಷ ಕಾರುವುದಕ್ಕೆ ಶುರುವಾದ್ರಲ್ಲಾ..? ಅನ್ನೋ ಅನುಮಾನ ಕುಮಾರಸ್ವಾಮಿ ಅವರ ಅಭಿಮಾನಿಗಳನ್ನೇ ಕಾಡಿದರೂ ಅಚ್ಚರಿಯಿಲ್ಲ. ಎಂಟೆಂಟು ಗಂಟೆ ಮ್ಯಾಚ್ ನೋಡಲು ಸಮಯ ಇದೆ, ರೈತರ ಸಮಸ್ಯೆ ಆಲಿಸಲು ನಿಮಗೆ ಟೈಂ ಇಲ್ವಾ ಎಂದಿದ್ದಾರೆ. ಇಲ್ಲೂ ಕುಮಾರಸ್ವಾಮಿ ರಾಜ್ಯದ ಜನರ ಎದುರು ಸುಳ್ಳುಗಳನ್ನು ಪೋಣಿಸಿದ್ದಾರೆ ಎನ್ನುವುದು ಸತ್ಯ. ಯಾಕಂದ್ರೆ ಸಿಎಂ ಹಾಗು ಡಿಸಿಎಂ ಕ್ರಿಕೆಟ್ ನೋಡಲು ಹೋಗಿದ್ದು ಕೆಲವೇ ನಿಮಿಷಗಳು ಮಾತ್ರ ಎನ್ನುವುದು ಸತ್ಯ.