ರಾಮನಗರ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ ಮತ್ತು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ರೈತರೊಬ್ಬರ ಮೇಲೆ ಪ್ರಕರಣ ದಾಖಲಿಸಿರುವ ಕುರಿತು ರಾಮನಗರ ಎಸ್ಪಿಗೆ ಕರೆ ಮಾಡಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿಯನ್ನ ನಡೆಸಿದ್ದಾರೆ.
ʻನಿನ್ನೆ ರಾಮನಗರದ ಹೊಲದಲ್ಲಿ ಕೆಲಸದ ನಂತರ ತಾನು ಕುಡಿಯಲೆಂದು 20 ಬಾಟಲನ್ನು ಶೇಕರಿಸಿ ಇಟ್ಟಿದರೆ ರೈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೀರಿ. ಆದರೆ, ನಿಮ್ಮ ಸಿಬ್ಬಂದಿ ಗೋವಿಂದರಾಜು ಎಂಬುವವರು 500 ಬಾಟಲ್ ಮಧ್ಯ ಜೊತೆ ಸಿಕ್ಕಿ ಬಿದ್ದಂತಹ ವ್ಯಕ್ತಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ ಏಕೆ ಮಾಡುತ್ತೀರಾʼ ಎಂದು ಹರಿಹಾಯ್ದಿದ್ದಾರೆ.
ನನ್ನ ಕ್ಷೇತ್ರಕ್ಕೆ ಬಂದು ನೀವೇನು ಸೆಕ್ಯೂರಿಟಿ ಕೊಡುವ ಅವಶ್ಯಕತೆಯಿಲ್ಲ ಯಾವುದೋ ಒಂದು ಪಕ್ಷದ ಪರ ಕೆಲಸ ಮಾಡಬೇಡಿ ಪಕ್ಷಾತೀತವಾಗಿ ಕೆಲಸ ಮಾಡಿ. ಇಲ್ಲವಾದಲ್ಲಿ ನಾನು ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.